RCB vs SRH: ಸೂಪರ್​ ಡೂಪರ್​ ಡು ಪ್ಲೆಸಿಸ್​, ಕೊನೆಯಲ್ಲಿ ಡಿಕೆ ದರ್ಬಾರ್​! ಇದು ಆ್ಯಕ್ಚುಲಿ ಚೆನ್ನಾಗಿರೋದು

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ 24 ಎಸೆತಗಳಲ್ಲಿ 33 ರನ್ ಬಾರಿಸಿದರೆ, ಜೀವದಾನದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಅಜೇಯ 30 ರನ್ ಬಾರಿಸಿದರು.

ದಿನೇಶ್​ ಕಾರ್ತಿಕ್​, ಡು ಪ್ಲೆಸಿಸ್​

ದಿನೇಶ್​ ಕಾರ್ತಿಕ್​, ಡು ಪ್ಲೆಸಿಸ್​

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯವು ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿದೆ. ಟಾಸ್​ (Toss) ಗೆದ್ದು ಬ್ಯಾಟಿಂಗ್ (Batting) ಆಯ್ದುಕೊಂಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಆಘಾತವಾಗಿದೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ (Virat Kohli) ಮತ್ತೆ ಡಕ್ ಔಟ್​ (Duck Out) ಆಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದ ಕಿಂಗ್​ ಕೊಹ್ಲಿ ಮತ್ತೆ ಎಡವಿದ್ದಾರೆ. ಹಸಿರು ಬಣ್ಣದ ಜೆರ್ಸಿ (Green Color Jersey) ತೊಟ್ಟು ಕಣಕ್ಕಿಳಿದ ತಂಡಕ್ಕೆ ಕೊಂಚ ಹಿನ್ನಡೆಯಾಗಿತ್ತು. ಆದರೆ, ಬಳಿಕ ನಾಯಕ ಡು ಪ್ಲೆಸಿಸ್​, ರಜತ್​, ಮ್ಯಾಕ್ಸ್​ವೆಲ್ (Maxwell) ​, ಕೊನೆಯಲ್ಲಿ ದಿನೇಶ್​ ಕಾರ್ತಿಕ್ (Dinesh Karthik) ಅದ್ಭುತ ಆಟ ಪ್ರದರ್ಶಿಸಿದ್ದಾರೆ.

ಸನ್‌ರೈಸರ್ಸ್‌ಗೆ ಕಠಿಣ ಗುರಿ ನೀಡಿದ ಆರ್‌ಸಿಬಿ..!

ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಫಾಫ್ ಡು ಪ್ಲೆಸಿಸ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3 ವಿಕೆಟ್ ಕಳೆದುಕೊಂಡು 192 ರನ್ ಬಾರಿಸಿದೆ ಈ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ರಜತ್​ ಪಟಿದರ್​ ಕೂಡ ಅದ್ಭುತ ಆಟವಾಡಿದ್ದಾರೆ. ಸಮಯೋಚಿತ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 48 ರನ್‌ ಬಾರಿಸಿ ದರು.

ಕೊನೆ ಓವರ್​ನಲ್ಲಿ ಅಬ್ಬರಿಸಿದ ದಿನೇಶ್​ ಕಾರ್ತಿಕ್!

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ 24 ಎಸೆತಗಳಲ್ಲಿ 33 ರನ್ ಬಾರಿಸಿದರೆ, ಜೀವದಾನದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಅಜೇಯ 30 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. 19ನೇ ಓವರ್​ನಲ್ಲಿ 3 ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಕೊನೆ ಓವರ್​ನಲ್ಲಿ 25 ರನ್​ ಗಳಿಸಿದರು.

ಇದನ್ನೂ ಓದಿ: ಮತ್ತೆ ಡಕ್ ಔಟ್​ ಆದ ಕಿಂಗ್​ ಕೊಹ್ಲಿ! ಈ ಸಲ ಹಸಿರು ಬಟ್ಟೆ ಮಹಿಮೆ ಎಂದ ಫ್ಯಾನ್ಸ್​

ಮತ್ತೆ ಡಕ್​ ಔಟ್​ ಆದ ವಿರಾಟ್​ ಕೊಹ್ಲಿ!

ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲೇ ವಿರಾಟ್​ ಕೊಹ್ಲಿ ಔಟಾಗಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರಿಂದ ಒಳ್ಳೆಯ ಇನ್ನಿಂಗ್ಸ್​ ನಿರೀಕ್ಷಿಸಲಾಗಿತ್ತು. ಆದರೆ, ವಿರಾಟ್ ಸುಚಿತ್​ ಎಸೆದ ಮೊದಲ ಬೌಲ್​ನಲ್ಲೇ ಹೈದರಾಬಾದ್​ ಸನ್​ರೈಸರ್ಸ್​ ತಂಡ ನಾಯಕ ಕೇನ್​ ವಿಲಿಯಮ್ಸನ್​ಗೆ ಕ್ಯಾಚ್​ ನೀಡಿ ಔಟ್​ ಆದರು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿದ್ದ ವಿರಾಟ್​ ಕೊಹ್ಲಿ, ಇಂದಿನ ಪಂದ್ಯದಲ್ಲಿ ಖಾತೆ ತೆರಯುವ ಮುನ್ನವೇ ಡಕ್​ ಔಟ್​ ಆಗಿದ್ದಾರೆ.

ಇದನ್ನೂ ಓದಿ: ಈ ರೀತಿ ಪವಾಡ ನಡೆದಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಲಿದೆ ಚೆನ್ನೈ ಸೂಪರ್ ಕಿಂಗ್ಸ್

ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ!

RCB ತಂಡದಲ್ಲಿ ಹಸಿರು ಜೆರ್ಸಿ ಧರಿಸುವ ಟ್ರೆಂಡ್ 2011 ರಲ್ಲಿ ಪ್ರಾರಂಭವಾಯಿತು. ಇದಾದ ನಂತರ ಪ್ರತಿ ವರ್ಷ ಐಪಿಎಲ್ ಪಂದ್ಯಗಳಲ್ಲಿ ತಂಡವು ಹಸಿರು ಜೆರ್ಸಿಯನ್ನು ಧರಿಸುತ್ತದೆ. ಈ ಡ್ರೆಸ್ ಧರಿಸುವುದರ ಹಿಂದೆ ತಂಡಕ್ಕೆ ವಿಶೇಷ ಉದ್ದೇಶವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಈ ಜೆರ್ಸಿಯ ಮೂಲಕ RCB ತಂಡವು ಜನರಿಗೆ ಸಂದೇಶವನ್ನು ರವಾನಿಸುತ್ತದೆ, ಸುತ್ತಮುತ್ತಲಿನ ಪರಿಸರ ಉಳಿವಿಗಾಗಿ ಇದನ್ನು ಧರಿಸುತ್ತಾರೆ. ಒಟ್ಟಾರೆಯಾಗಿ, RCB ತಂಡವು ಪರಿಸರವನ್ನು ಉಳಿಸಲು ಮತ್ತು ಜಾಗತಿಕ ತಾಪಮಾನವನ್ನು ತಡೆಯಲು ಗ್ರೋ ಗ್ರೀನ್ ಅಭಿಯಾನವನ್ನು ಉತ್ತೇಜಿಸುತ್ತಿದೆ
Published by:Vasudeva M
First published: