RCB vs SRH: ಐಪಿಎಲ್​ ರಣರಂಗದಲ್ಲಿ ಹಸರಂಗ ಮ್ಯಾಜಿಕ್​! ಗೆದ್ದು ಬೀಗಿದ ಆರ್​ಸಿಬಿ, ಕಪ್​ ನಮ್ದೇ ಬಾಸ್​

54ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿತ್ತು. ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಆಟವಾಡಿದ ಬೆಂಗಳೂರು ಬಾಯ್ಸ್​​  ಗೆಲುವಿನ ನಗೆ ಬೀರಿದ್ದಾರೆ.

ಮ್ಯಾಕ್ಸ್​​ವೆಲ್​, ಡು ಪ್ಲೆಸಿಸ್​, ವಿರಾಟ್

ಮ್ಯಾಕ್ಸ್​​ವೆಲ್​, ಡು ಪ್ಲೆಸಿಸ್​, ವಿರಾಟ್

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿತ್ತು. ಮುಂಬೈನ (Mumbai) ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಆಟವಾಡಿದ ಬೆಂಗಳೂರು ಬಾಯ್ಸ್ ​​  ಗೆಲುವಿನ ನಗೆ ಬೀರಿದೆ. ಐಪಿಎಲ್​ ರಣರಂಗದಲ್ಲಿ ಮ್ಯಾಜಿಕ್​ ಮಾಡಿದ ಹಸರಂಗ  ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಲ್ಕು ಓವರ್​ ಮಾಡಿ 18 ರನ್​ ನೀಡಿ 5 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ ಸ್ಪಿನ್​ ಮಾಂತ್ರಿಕ ಹಸರಂಗ. ಇನ್ನೂ ಆರ್​ಸಿಬಿ ಬೌಲರ್​ಗಳ ಬಲೆಗೆ ಬಿದ್ದ ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad​ ಸೋಲುಂಡಿದೆ. 193ರನ್​ಗಳ ಗುರಿ ಬೆನ್ನತ್ತಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 10 ವಿಕೆಟ್​ ಕಳೆದುಕೊಂಡು 125 ರನ್​ ಬಾರಿಸಿ ಸೋಲುಂಡಿದೆ. ಈ ಮೂಲಕ ರಾಯಲ್​ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ರಿವೇಂಜ್​ ತಿರಿಸಿಕೊಂಡಿದೆ.

ಸೇಡು ತೀರಿಸಿಕೊಂಡ ಬೆಂಗಳೂರು ಬಾಯ್ಸ್​!

ಈ ಮೂಲಕ ಏಪ್ರಿಲ್ 23ರಂದು ಆರೆಂಜ್ ಆರ್ಮಿ ಎದುರು ಅನುಭವಿಸಿದ್ದ 9 ವಿಕೆಟ್‌ಗಳ ಅಂತರದ ಹೀನಾಯ ಸೋಲಿಗೆ ಇಂದು ಆರ್‌ಸಿಬಿ ತನ್ನ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ತನ್ನ 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.ಆರ್‌ಸಿಬಿ ನೀಡಿದ್ದ 193 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕೇನ್ ವಿಲಿಯಮ್ಸನ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲ ಪೆವಿಲಿಯನ್ ಸೇರಿದರು.

ಆರ್​ಸಿಬಿ ಬೌಲರ್​ಗಳ ಮ್ಯಾಜಿಕ್​!

ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಹಸರಂಗ 5 ವಿಕೆಟ್​ ಕಬಳಿಸಿದರೆ, ಹೇಜಲ್​ವುಡ್​ 2 ವಿಕೆಟ್ ಪಡೆದುಕೊಂಡರು. ಇನ್ನೂ ಗ್ಲೆನ್​ ಮ್ಯಾಕ್ಸ್​​ವೆಲ್​ 1 ವಿಕೆಟ್​, ಹರ್ಷಲ್​ ಪಟೇಲ್​ ತಲಾ ಒಂದು ವಿಕೆಟ್​ ಪಡೆದುಕೊಂಡರು. ಇನ್ನೂ ಹೇಜಲ್​ವುಡ್​ ಹಾಗೂ ಹಸರಂಗಗೆ ಹ್ಯಾಟಿಕೆ ವಿಕೆಟ್​ ಪಡೆಯವ ಅವಕಾಶ ಕೂಡ ಇತ್ತು.

ಇದನ್ನೂ ಓದಿ: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ಕೆ! ಚೆನ್ನೈ ಗೆದ್ರೂ ಪ್ಲೇ ಆಫ್​ಗೆ ಹೋಗಲ್ಲ

ಡು ಪ್ಲೆಸಿಸ್​ ಆಕರ್ಷಕ ಅರ್ಧಶತಕ!

ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಫಾಫ್ ಡು ಪ್ಲೆಸಿಸ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3 ವಿಕೆಟ್ ಕಳೆದುಕೊಂಡು 192 ರನ್ ಬಾರಿಸಿದೆ ಈ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ರಜತ್​ ಪಟಿದರ್​ ಕೂಡ ಅದ್ಭುತ ಆಟವಾಡಿದ್ದಾರೆ. ಸಮಯೋಚಿತ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 48 ರನ್‌ ಬಾರಿಸಿದರು.

ಇದನ್ನೂ ಓದಿ: ಈ ರೀತಿ ಪವಾಡ ನಡೆದಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಲಿದೆ ಚೆನ್ನೈ ಸೂಪರ್ ಕಿಂಗ್ಸ್

ಕೊನೆ ಓವರ್​ನಲ್ಲಿ ಅಬ್ಬರಿಸಿದ ದಿನೇಶ್​ ಕಾರ್ತಿಕ್!

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ 24 ಎಸೆತಗಳಲ್ಲಿ 33 ರನ್ ಬಾರಿಸಿದರೆ, ಜೀವದಾನದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ ಅಜೇಯ 30 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. 19ನೇ ಓವರ್​ನಲ್ಲಿ 3 ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಕೊನೆ ಓವರ್​ನಲ್ಲಿ 25 ರನ್​ ಗಳಿಸಿದರು.
Published by:Vasudeva M
First published: