HOME » NEWS » Ipl » SUNRISERS HYDERABAD AND KOLKATA KNIGHT RIDERS HAVE TO FACE CHALLENGE TO PICK FOUR FOREIGN PLAYERS IN PLAYING 11 ZP

SRH vs KKR: ವಾರ್ನರ್ vs ಮೋರ್ಗನ್: ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ಹೀಗಿದೆ

SRH vs KKR Predicted Playing 11: ಉಭಯ ತಂಡಗಳಲ್ಲೂ ವಿದೇಶಿ ಸ್ಟಾರ್ ಆಟಗಾರರ ದಂಡೇ ಇರುವುದರಿಂದ ಅವರಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಎಸ್​ಆರ್​ಹೆಚ್​ ತಂಡದ ನಾಯಕ ಡೇವಿಡ್ ವಾರ್ನರ್, ಕೆಕೆಆರ್​ ತಂಡದ ನಾಯಕನಾಗಿ ಇಯಾನ್ ಮೋರ್ಗನ್ ಕಪ್ತಾನನಾಗಿ ಕಣಕ್ಕಿಳಿಯುವುದು ಕನ್ಫರ್ಮ್​.

news18-kannada
Updated:April 11, 2021, 5:41 PM IST
SRH vs KKR: ವಾರ್ನರ್ vs ಮೋರ್ಗನ್: ಕಣಕ್ಕಿಳಿಯುವ ಸಂಭಾವ್ಯ ಇಲೆವೆನ್ ಹೀಗಿದೆ
SRH vs KKR
  • Share this:
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಐಪಿಎಲ್ 2021ರ ಮೂರನೇ ಪಂದ್ಯ ನಡೆಯಲಿದೆ. ಈ ಮೈದಾನದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬೈ ಇಂಡಿಯನ್ಸ್ (ಎಂಐ) ಯನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಮೊದಲ ಪಂದ್ಯದ ವೇಳೆ ಸ್ಪಿನ್​ಗೆ ಸಹಕಾರಿ ಎನ್ನಲಾಗಿದ್ದ ಈ ಪಿಚ್​ನಲ್ಲಿ 17 ವಿಕೆಟ್‌ಗಳಲ್ಲಿ 11 ವಿಕೆಟ್ ಉರುಳಿಸಿದ್ದು ವೇಗದ ಬೌಲರ್‌ಗಳು ಎಂಬುದು ವಿಶೇಷ. ಈ ಪೈಕಿ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೂ ಪ್ಲೇಯಿಂಗ್ ಇಲೆವೆನ್​ನನ್ನು ನಿರ್ಧರಿಸುವುದು ಉಭಯ ತಂಡಗಳಿಗೂ ಸವಾಲಾಗಿದೆ.

ಉಭಯ ತಂಡಗಳು 19 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಕೆಕೆಆರ್ 12 ಬಾರಿ ಜಯಗಳಿಸಿದ್ರೆ, ಸನ್​ರೈಸರ್ಸ್​ 7 ಬಾರಿ ವಿಜಯ ಸಾಧಿಸಿತ್ತು. ಇಲ್ಲಿ ಕೆಕೆಆರ್ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ. ಹೀಗಾಗಿ ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಮೋರ್ಗನ್ ಪಡೆ ಕಣಕ್ಕಿಳಿಯಲಿದೆ.

ಆದರೆ ಉಭಯ ತಂಡಗಳಲ್ಲೂ ವಿದೇಶಿ ಸ್ಟಾರ್ ಆಟಗಾರರ ದಂಡೇ ಇರುವುದರಿಂದ ಅವರಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಎಸ್​ಆರ್​ಹೆಚ್​ ತಂಡದ ನಾಯಕ ಡೇವಿಡ್ ವಾರ್ನರ್, ಕೆಕೆಆರ್​ ತಂಡದ ನಾಯಕನಾಗಿ ಇಯಾನ್ ಮೋರ್ಗನ್ ಕಪ್ತಾನನಾಗಿ ಕಣಕ್ಕಿಳಿಯುವುದು ಕನ್ಫರ್ಮ್​. ಇನ್ನುಳಿದ ಮೂವರು ಆಟಗಾರರು ಯಾರಾಗಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ.

ಜಾನಿ ಬೈರ್‌ಸ್ಟೋವ್ ಮೊದಲ ಆಯ್ಕೆ:
ಜಾನಿ ಬೈರ್​ಸ್ಟೋವ್​ ಎಸ್​ಆರ್​ಹೆಚ್​ ತಂಡದ ಮೊದಲ ಆಯ್ಕೆಯಾಗಿದೆ. ಏಕೆಂದರೆ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅಧ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೀಗ ಉತ್ತಮ ಫಾರ್ಮ್​ನಲ್ಲಿರುವ ಬೈರ್​ಸ್ಟೋವ್ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹಾಗೆಯೇ ಕೇನ್ ವಿಲಿಯಮ್ಸನ್ ಸ್ಥಾನ ಕೂಡ ಗಟ್ಟಿಯಾಗಿದೆ. ಹೀಗಾಗಿ ವಾರ್ನರ್ ಜೊತೆ ಈ ಮೂವರು ವಿದೇಶಿ ಆಟಗಾರರೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಎಸ್​ಆರ್​ಹೆಚ್ ತಂಡದ ಆಲ್‌ರೌಂಡರ್ ವಿಭಾಗದಲ್ಲಿ ವಿಜಯ್ ಶಂಕರ್, ಕೇದರ್ ಜಾಧವ್, ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ನಡುವೆ ಪೈಪೋಟಿ ಇರಲಿದೆ. ಅನುಭವಕ್ಕೆ ಮಣೆಹಾಕುವುದಾದರೆ ವಿಜಯ್ ಶಂಕರ್​ ಅಥವಾ ಕೇದರ್ ಜಾಧವ್​ಗೆ ಸ್ಥಾನ ಖಚಿತ ಎನ್ನಬಹುದು. ಬಿಗ್ ಹಿಟ್ಟರ್​ಗೆ ಸ್ಥಾನ ನೀಡುವುದಾದರೆ ಸಮದ್​ಗೆ ಅವಕಾಶ ಲಭಿಸಬಹುದು. ಹಾಗೆಯೇ ಸ್ಪಿನ್​ಗೆ ಪ್ರಾಮುಖ್ಯತೆ ನೀಡುವುದಾದರೆ ಅಭಿಷೇಕ್ ಶರ್ಮಾಗೆ ಚಾನ್ಸ್​ ಸಿಗಬಹುದು. ಇದರ ಹೊರತಾಗಿ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ ಮತ್ತು ಟಿ ನಟರಾಜನ್ ಕಾಣಿಸಿಕೊಳ್ಳಲಿದ್ದಾರೆ.

ಕೆಕೆಆರ್​ ಮೊದಲ ಆಯ್ಕೆ ರಸೆಲ್:ಇಯಾನ್ ಮೋರ್ಗನ್ ಹೊರತಾಗಿ ಕೆಕೆಆರ್​ ತಂಡದಲ್ಲಿ ಆ್ಯಂಡ್ರೆ ರಸೆಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇದರ ಜೊತೆ ತಂಡಕ್ಕೆ ಸೇರ್ಪಡೆಯಾಗಿರುವ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್-ಉಲ್-ಹಸನ್ ಚಾನ್ಸ್ ಪಡೆಯುವ ಸಾಧ್ಯತೆಯಿದೆ. ಇನ್ನು ಸ್ಪಿನ್ನರ್​ ಸುನಿಲ್ ನರೈನ್ ಹೊರಗುಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಈ ನಾಲ್ವರೇ ಕೆಕೆಆರ್ ತಂಡದ ವಿದೇಶಿ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ಇದರ ಹೊರತಾಗಿ ಕೆಕೆಆರ್​ ತಂಡದಲ್ಲಿ ಸ್ಪಿನ್ನರ್​ಗಳ ಆಯ್ಕೆ ಸವಾಲಾಗಲಿದೆ. ಏಕೆಂದರೆ ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿರುವ ಹರ್ಭಜನ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ನಡುವೆ ಪ್ಲೇಯಿಂಗ್ ಇಲೆವೆನ್​ ಸ್ಥಾನಕ್ಕಾಗಿ ಪೈಪೋಟಿ ಕಂಡು ಬರಲಿದೆ. ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ತವರಿನ ಆಟಗಾರ ವರುಣ್​ಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚು.

ಸನ್‌ರೈಸರ್ಸ್ ಹೈದರಾಬಾದ್ ಸಂಭವನೀಯ ಪ್ಲೇಯಿಂಗ್ -11: ಡೇವಿಡ್ ವಾರ್ನರ್ (ಕ್ಯಾಪ್ಟನ್), ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್, ಟಿ ನಟರಾಜನ್.

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್-11: ಇಯಾನ್ ಮೋರ್ಗನ್ (ನಾಯಕ), ಶುಭ್​ಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಡ್ರೆ ರಸೆಲ್, ಶಕೀಬ್ ಉಲ್ ಹಸನ್, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ, ಶಿವಂ ಮಾವಿ ನಾಗರ್ಕೋಟಿ.
Published by: zahir
First published: April 11, 2021, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories