ವಿರುಷ್ಕಾ ಬಗ್ಗೆ ಅಸಭ್ಯ ಕಾಮೆಂಟರಿ: ಸುನೀಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳ ಆಕ್ರೋಶ

Virat Kohli: ವಿರಾಟ್ ಕೊಹ್ಲಿ ಅಭಿಮಾನಿಗಳು ಕ್ರಿಕೆಟ್ ದಂತಕಥೆ ಗವಾಸ್ಕರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಸಭ್ಯ ಪದ ಬಳಕೆ ಮಾಡಿರುವ ಅವರನ್ನು ಕಾಮೆಂಟರಿ ಪ್ಯಾನೆಲ್​ನಿಂದ ಹೊರ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.

ವಿರುಷ್ಕಾ

ವಿರುಷ್ಕಾ

 • Share this:
  ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದ ವೇಳೆ ಕಾಮೆಂಟರಿ ನೀಡುತ್ತಿದ್ದ ವೇಳೆ ಸುನೀಲ್ ಗವಾಸ್ಕರ್​ ಬಳಸಿದ ಪದಬಳಕೆ ಇದೀಗ ವಿದಾದಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಆರ್​ಸಿಬಿ ನಾಯಕ ಕೊಹ್ಲಿ ಪಂಜಾಬ್ ನಾಯಕ ರಾಹುಲ್ ಅವರ ಕ್ಯಾಚ್​ನ್ನು ಎರಡು ಬಾರಿ ಕೈ ಚೆಲ್ಲಿದ್ದರು. ಅಲ್ಲದೆ ಬಳಿಕ ಬ್ಯಾಟಿಂಗ್​ಗೆ ಇಳಿದ ವಿರಾಟ್ ಕೇವಲ 1 ರನ್​ಗಳಿಸಿ ಔಟಾಗಿದ್ದರು.

  ಈ ವೇಳೆ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಸುನೀಲ್ ಗವಾಸ್ಕರ್ ಸಭ್ಯತೆಯನ್ನು ಮೀರಿದ್ದರು. ಮಾತಿನ ಭರದಲ್ಲಿ ಲಾಕ್​ಡೌನ್ ಸಮಯದಲ್ಲಿ ಕೊಹ್ಲಿ ಅನುಷ್ಕಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ ಎಂದು ಅಸಭ್ಯವಾಗಿ ಕಮೆಂಟ್ ಮಾಡಿದ್ದರು. ಗವಾಸ್ಕರ್ ಹೇಳಿದ ಈ ಮಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಕ್ರಿಕೆಟ್ ದಂತಕಥೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಸಭ್ಯ ಪದ ಬಳಕೆ ಮಾಡಿರುವ ಸುನೀಲ್ ಗವಾಸ್ಕರ್ ಅವರನ್ನು ಕಾಮೆಂಟರಿ ಪ್ಯಾನೆಲ್​ನಿಂದ ಹೊರ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.  ಗವಾಸ್ಕರ್ ಕಾಮೆಂಟ್‌ಗೆ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದು, ನಿಮ್ಮ ಹೇಳಿಕೆಯು ಅಸಹ್ಯಕರವಾಗಿದೆ. ಗಂಡನ ಆಟಕ್ಕೆ ಹೆಂಡತಿಯನ್ನು ದೂಷಿಸಬೇಕು ಎನ್ನುವ ಆಲೋಚನೆ ನಿಮ್ಮ ಬಂದಿರುವುದು ಏಕೆ ಎಂಬುದನ್ನು ನೀವು ವಿವರಿಸಬೇಕೆಂದು ಆಗ್ರಹಿಸಿದ್ದಾರೆ.
  Published by:zahir
  First published: