ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಐಪಿಎಲ್ 2020 ಮುಕ್ತಾಯವಾಗಿದೆ. ಇನ್ನೇನಿದ್ದರೂ 2021ರ ಟೂರ್ನಿ ಮೇಲೆ ಕಣ್ಣು. ಮುಂದಿನ ಸೀಸನ್ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದೆ. ಹೀಗಾಗಿ ಆರ್ಸಿಬಿ ತನ್ನ ಆಟಗಾರರ ಪಾತ್ರಗಳನ್ನು ವಿಶ್ಲೇಷಿಸುತ್ತಿದೆ. ಇತ್ತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಆರ್ಸಿಬಿ ಫಿನಿಶರ್ ಪಾತ್ರವನ್ನು ನಿರ್ವಹಿಸಬಲ್ಲ ಆಟಗಾರನನ್ನು ಕಂಡುಹಿಡಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಅದಕ್ಕೆ ಸೂಕ್ತವಾದ ಆಟಗಾರ ಈಗಾಗಲೇ ತಂಡದಲ್ಲಿದ್ದು, ಅವರಿಗೆ ಆ ಜವಾಬ್ದಾರಿ ನೀಡಬೇಕೆಂದು ತಿಳಿಸಿದ್ದಾರೆ.
ಆರ್ಸಿಬಿ ತಂಡದಲ್ಲಿ ಶಿವಂ ದುಬೆಗೆ ಸರಿಯಾದ ಪಾತ್ರವನ್ನು ನೀಡುವ ಬಗ್ಗೆ ಯೋಚಿಸಬೇಕು. ಏಕೆಂದರೆ ಆತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸುಂದರ್ ಮೇಲಿನ ಮತ್ತು ಕೆಳ ಕ್ರಮಾಂಕದಲ್ಲಿ ಆಡಿದ್ದಾರೆ. ದುಬೆಯನ್ನು ನಿರ್ದಿಷ್ಟ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಿ ಬಿಗ್ ಹಿಟ್ಟರ್ ಆಗಿ ಬಳಸಿಕೊಳ್ಳಬೇಕು. ಪ್ರಸ್ತುತ ಆತ ಗೊಂದಲದಲ್ಲಿದ್ದಾನೆ. ನನಗೆ ಗೊತ್ತಿರುವಂತೆ ದುಬೆ 5ನೇ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಆಟಗಾರ. ಹೀಗೆ ಮಾಡುವುದರಿಂದ ಡಿವಿಲಿಯರ್ಸ್ ಮತ್ತು ವಿರಾಟ್ ಅವರ ಒತ್ತಡವನ್ನು ಕಡಿಮೆ ಮಾಡಬಹುದು ಗವಾಸ್ಕರ್ ಹೇಳಿದರು.
ಹೀಗಾಗಿ ಮುಂದಿನ ಸೀಸನ್ನಲ್ಲಿ ಶಿವಂ ದುಬೆಯನ್ನು ಫಿನಿಶರ್ ಆಗಿ ತಂಡದಲ್ಲಿ ಬಳಸಿಕೊಳ್ಳಬೇಕು. ಆತನ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಬಾರದು. ಒಂದೇ ಕ್ರಮಾಂಕದಲ್ಲಿ ಇಳಿಸಿ, ಬಿರುಸಿನ ಬ್ಯಾಟಿಂಗ್ ಮಾಡಲು ಸೂಚಿಸಿದರೆ, ಖಂಡಿತವಾಗಿಯೂ ದುಬೆ ಆರ್ಸಿಬಿ ಪಾಲಿನ ಪರ್ಫೆಕ್ಟ್ ಫಿನಿಶರ್ ಆಗಲಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು. ಈ ಬಾರಿಯ ಐಪಿಎಲ್ನಲ್ಲಿ 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದುಬೆ 129 ರನ್ ಹಾಗೂ 4 ವಿಕೆಟ್ ಪಡೆದಿದ್ದರು.
POINTS TABLE: