news18-kannada Updated:November 6, 2020, 11:10 AM IST
ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಹೊರ ನಡೆಯುತ್ತಾರೆ. ಗೆದ್ದವರು ನೇರವಾಗಿ ಕ್ವಾಲಿಫೈಯರ್ಗೆ ಏರುತ್ತಾರೆ. ಕ್ವಾಲಿಫೈಯರ್ ಮ್ಯಾಚ್ನಲ್ಲಿ ಡೆಲ್ಲಿ ತಂಡವನ್ನು ಎದುರಿಸಬೇಕಿದೆ.
ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಕೊನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿ ಕೊನೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ಸತತ ಸೋಲು ಕಂಡರೂ ಇಂದು ಹೈದರಾಬಾದ್ ತಂಡವನ್ನು ಸೋಲಿಸಲು ಕೊಹ್ಲಿ ಪಡೆ ಎರಡು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಉಭಯ ತಂಡಗಳು ಪರಸ್ಪರ ಮುಖಾಮುಖಿ ಆಗುವ ಮೂಲಕ ಉಭಯ ತಂಡಗಳು ಟೂರ್ನಿಯ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ಕೊಹ್ಲಿ ಪಡೆ ಗೆದ್ದು ಶುಭಾರಂಭ ಮಾಡಿದ್ದರೂ ಕೊನೆಯಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಹಾಗೂ ಡೆಲ್ಲಿ ವಿರುದ್ಧ ಆರ್ಸಿಬಿ ಸೋತಿತ್ತು. ಇಂದಿನ ಮ್ಯಾಚ್ನಲ್ಲಿ ವಾರ್ನರ್ ಪಡೆ ಫೇವರಿಟ್ ಆಗಿ ಕಂಡರೂ ಕೊಹ್ಲಿ ತಂಡ ಅಬ್ಬರಿಸಿದರೆ ಗೆಲುವು ಬೆಂಗಳೂರು ಕಡೆ ಒಲಿಯಬಹುದು.
ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಹೊರ ನಡೆಯುತ್ತಾರೆ. ಗೆದ್ದವರು ನೇರವಾಗಿ ಕ್ವಾಲಿಫೈಯರ್ಗೆ ಏರುತ್ತಾರೆ. ಕ್ವಾಲಿಫೈಯರ್ ಮ್ಯಾಚ್ನಲ್ಲಿ ಡೆಲ್ಲಿ ತಂಡವನ್ನು ಎದುರಿಸಬೇಕಿದೆ.
ಆರ್ಸಿಬಿಯಲ್ಲಿ ಎರಡು ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ. ಅನುಭವಿ ಆರನ್ ಫಿಂಚ್ ಬದಲಿಗೆ ಜೋಶ್ ಫಿಲಿಪೆಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಸ್ಫೋಟಕ ಆರಂಭ ನೀಡಿಲ್ಲ. ಹೀಗಾಗಿ, ಫಿಂಚ ಮರಳಿ ತಂಡ ಸೇರಿಕೊಳ್ಳಬಹುದು. ಗಾಯದ ಸಮಸ್ಯೆಯಿಂದ ನವದೀಪ್ ಸೈನಿ ತಂಡದಿಂದ ಹೊರಗುಳಿದಿದ್ದರು. ಇಂದು ಅವರು ತಂಡಕ್ಕೆ ಮರಳಬಹುದು. ಅವರು ತಂಡಕ್ಕೆ ವಾಪಾಸಾದರೆ ಶಾಬಾಜ್ ಅಹ್ಮದ್ ಅಥವಾ ಮೊಹಮದ್ ಸಿರಾಜ್ ಹೊರ ಹೊರಗುಳಿಯಬೇಕಾಗುತ್ತದೆ.
Published by:
Rajesh Duggumane
First published:
November 6, 2020, 10:45 AM IST