SRH vs PBKS- ಹೋಲ್ಡರ್ ವೀರೋಚಿತ ಹೋರಾಟ ವ್ಯರ್ಥ; ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

IPL 2021, 37th Match: ಪಂಜಾಬ್ ತಂಡ ಗಳಿಸಿದ 125 ರನ್​ಗೆ ಪ್ರತಿಯಾಗಿ ಸನ್​ ರೈಸರ್ಸ್ ಹೈದರಾಬಾದ್ ತಂಡದ ಇನ್ನಿಂಗ್ಸ್ 120 ರನ್​ಗೆ ಸೀಮಿತಗೊಂಡಿತು. ಜೇಸನ್ ಹೋಲ್ಡರ್ ಅಜೇಯ 47 ರನ್ ಗಳಿಸಿದರು.

ಹೈದರಾಬಾದ್ ವರ್ಸಸ್ ಪಂಜಾಬ್ ಪಂದ್ಯ

ಹೈದರಾಬಾದ್ ವರ್ಸಸ್ ಪಂಜಾಬ್ ಪಂದ್ಯ

 • Cricketnext
 • Last Updated :
 • Share this:
  ಶಾರ್ಜಾ, ಸೆ. 25: ಪಂಜಾಬ್ ಕಿಂಗ್ಸ್ ತಂಡ ಐಪಿಎಲ್​ನಲ್ಲಿ ಸಾಕಷ್ಟು ರೋಚಕ ಹಣಾಹಣಿಗಳಲ್ಲಿ ಭಾಗಿಯಾಗಿದೆ. ಗೆಲುವಿನ ಸಮೀಪ ಬಂದು ಎಡವಿದ ಅನೇಕ ನಿದರ್ಶನಗಳಿವೆ. ಇವತ್ತು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧವೂ ಅಂಥದ್ದೇ ರೀತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತಾಗಿತ್ತು ಪಂಜಾಬ್ ತಂಡಕ್ಕೆ. ಆಂತಿಮವಾಗಿ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ 5 ರನ್​ಗಳಿಂದ ರೋಚಕ ಗೆಲುವು ಪಡೆಯಿತು. ಎದುರಾಳಿಗೆ 126 ರನ್​ಗಳ ಅಲ್ಪಮೊತ್ತದ ಗುರಿ ಕೊಟ್ಟು ಬಳಿಕ ಅವರನ್ನ ಕಟ್ಟಿ ಹಾಕಿ ಇನ್ನೇನು ಪಂಜಾಬ್ ಕಿಂಗ್ಸ್ ಗೆದ್ದೇಬಿಟ್ಟಿತು ಎನ್ನುವಾಗಲೇ ಜೇಸನ್ ಹೋಲ್ಡರ್ ಅದ್ಭುತ ಪ್ರತಿಹೋರಾಟ ತೋರಿದರು. ಕೊನೆಯ ಎಸೆತದವರೆಗೂ ಅವರು ಕುತೂಹಲ ಉಳಿಸುವಲ್ಲಿ ಯಶಸ್ವಿಯಾದರು. ಗೆಲುವಿನಂಚಿಗೆ ಬಂದು ಸೋತು ಬಿಟ್ಟೇವೆಂಬ ಆತಂಕ ನಾಯಕ ಕೆಎಲ್ ರಾಹುಲ್ ಮುಖದಲ್ಲಿ ಕಾಣುತ್ತಿತ್ತು. ಆದರೆ, ಕೊನೆಯ ಓವರ್​ನಲ್ಲಿ ಪಂಜಾಬ್​ನ ಎಲಿಸ್ ಅವರು ಚಾಣಾಕ್ಷ್ಯತನದಿಂದ ಬೌಲಿಂಗ್ ಮಾಡಿ ಹೋಲ್ಡರ್ ಅವರನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

  ಪಂಜಾಬ್ ಕಿಂಗ್ಸ್ ತಂಡವನ್ನು 125 ರನ್​ಗಳ ಅಲ್ಪಮೊತ್ತಕ್ಕೆ ನಿಯಂತ್ರಿಸಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡ ಈಗ ತಾನೇ ಸಂಕಷ್ಟಕ್ಕೆ ಸಿಲುಕಿತು. 60 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಆದರೆ, ವೃದ್ಧಿಮಾನ್ ಸಾಹ ಮತ್ತು ಜೇಸನ್ ಹೋಲ್ಡರ್ ಅವರು ಸನ್ ರೈಸರ್ಸ್ ತಂಡದ ಚೇಸಿಂಗ್​​ಗೆ ಮರುಜೀವ ತುಂಬಿದರು. ಹೈದರಾಬಾದ್​ನ ಸ್ಟಾರ್ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್, ನಾಯಕ ಕೇನ್ ವಿಲಿಯಮ್ಸನ್ ಮತ್ತು ಅಬ್ದುಲ್ ಸಮದ್ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ಮನೀಶ್ ಪಾಂಡೆ ಕೂಡ ವಿಫಲರಾದರು. ಜೇಸನ್ ಹೋಲ್ಡರ್ ಅವರು ಕ್ರೀಸಿಗೆ ಬಂದ ಬಳಿಕ ಹೈದರಾಬಾದ್ ಹೋರಾಟ ಜೀವಂತಗೊಂಡು ಗೆಲುವಿನ ಆಸೆ ಚಿಗುರಿತು.

  ಇದಕ್ಕೆ ಮುನ್ನ ವಿಂಡೀಸ್ ಆಲ್​ರೌಂಡರ್ ದೈತ್ಯ ಜೇಸನ್ ಹೋಲ್ಡರ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಅಲ್ಪಮೊತ್ತಕ್ಕೆ ತೃಪ್ತಿ ಪಡಬೇಕಾಯಿತು. ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಲುವಲ್ಲಿ ಮಾತ್ರ ಶಕ್ಯವಾಯಿತು. ಏಡನ್ ಮರ್ಕ್ರಮ್ 27 ರನ್ ಗಳಿಸಿದ್ದೇ ಗರಿಷ್ಠ ಸ್ಕೋರಾಯಿತು. ಆರೆಂಜ್ ಕ್ಯಾಪ್ ರೇಸ್​ನಲ್ಲಿರುವ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಇಬ್ಬರೂ ಜೇಸನ್ ಹೋಲ್ಡರ್​ಗೆ ಬಲಿಯಾದರು. ಕ್ರಿಸ್ ಗೇಲ್ ಮತ್ತು ನಿಕೋಲಾಸ್ ಪೂರನ್ ಅವರೂ ಇವತ್ತು ಸಿಡಿಯಲಿಲ್ಲ.

  ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್​ಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದ್ದರು. ಈ ಪಿಚ್​ನಲ್ಲಿ ಚೇಸಿಂಗ್ ಸುಲಭವಾಗುತ್ತದೆ ಎಂಬುದು ಅವರ ಎಣಿಕೆ. ನಿನ್ನೆಯ ಆರ್​ಸಿಬಿ ಸಿಎಸ್​ಕೆ ಪಂದ್ಯದಲ್ಲೂ ಧೋನಿ ಚೇಸಿಂಗ್ ಆರಿಸಿಕೊಂಡಿದ್ದರು. ಆದರೆ, ಹೈದರಾಬಾದ್ ನಾಯಕನ ಲೆಕ್ಕಾಚಾರ ತಪ್ಪಾಯಿತು. ಪಂಜಾಬ್ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಮುಂಬೈ ಅನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಸನ್ ರೈಸರ್ಸ್ ತಂಡ ಕೊನೆಯ ಸ್ಥಾನದಲ್ಲಿದೆ. ಪಂಜಾಬ್ ತಂಡ ಮೇಲೇರುತ್ತಿರುವುದು ಆರ್​ಸಿಬಿ ತಂಡಕ್ಕೆ ತುಸು ಆತಂಕ ಮೂಡಿಸಿದೆ.

  ಇದನ್ನೂ ಓದಿ: DC vs RR- ಡೆಲ್ಲಿ ವಿರುದ್ಧ ರಾಜಸ್ಥಾನ್ ರಾಯಲ್ಸ್​ಗೆ 34 ರನ್​ಗಳಿಂದ ಸೋಲು; ಅಗ್ರಸ್ಥಾನಕ್ಕೇರಿದ ಡಿಸಿ

  ಸನ್ ರೈಸರ್ಸ್ ಹೈದರಾಬಾದ್ ತಂಡದ್ದು ಐಪಿಎಲ್​ನಲ್ಲಿ ಯಾವಾಗಲೂ ದುರದೃಷ್ಟವೇ. ಒಳ್ಳೆಯ ಆರಂಭ ಸಿಕ್ಕರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ಸತತ ವೈಫಲ್ಯ ಆಗುತ್ತಿದೆ. ಹೀಗಾಗಿ, ಹೈದರಾಬಾದ್​ನಿಂದ ಯಾವುದೇ ಸೀಸನ್​ನಲ್ಲೂ ಸ್ಥಿರ ಪ್ರದರ್ಶನ ಬಂದಿಲ್ಲ. ಇದು ಎಲ್ಲಾ ಸೀಸನ್​ನಲ್ಲೂ ಹೈದರಾಬಾದ್​ಗೆ ಕಾಡಿರುವ ಸಮಸ್ಯೆಯಾಗಿದೆ. ಅಂದಹಾಗೆ, ಪಂಜಾಬ್ ಕಿಂಗ್ಸ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಹೆಚ್ಚಿನವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವೇ ಗೆದ್ದಿದೆ. ಆದರೆ, ಇವತ್ತು ಅದೇ ಟ್ರೆಂಡ್ ಮುಂದುವರಿದಿಲ್ಲ.  ತಂಡಗಳು:

  ಪಂಜಾಬ್ ಕಿಂಗ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಮಯಂಕ್ ಅಗರ್ವಾಲ್, ಕ್ರಿಸ್ ಗೇಲ್, ಏಡನ್ ಮರ್ಕ್ರಮ್, ನಿಕೊಲಾಸ್ ಪೂರನ್, ದೀಪಕ್ ಹೂಡ, ನ ಏಥನ್ ಎಲಿಸ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರ್​ಪ್ರೀತ್ ಬ್ರಾರ್, ಅರ್ಶ್​ದೀಪ್ ಸಿಂಗ್.

  ಸನ್​ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಕೇನ್ ರಿಚರ್ಡ್ಸನ್ (ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್.

  ಸ್ಕೋರು ವಿವರ:

  ಪಂಜಾಬ್ ಕಿಂಗ್ಸ್ 20 ಓವರ್ 125/7
  (ಏಡನ್ ಮರ್ಕ್ರಂ 27, ಕೆಎಲ್ ರಾಹುಲ್ 21, ಹರ್​ಪ್ರೀತ್ ಬ್ರಾರ್ ಅಜೇಯ 18, ಕ್ರಿಸ್ ಗೇಲ್ 14 ರನ್- ಜೇಸನ್ ಹೋಲ್ಡರ್ 19/3)

  ಸನ್​ರೈಸರ್ಸ್ ಹೈದರಾಬಾದ್ 16 ಓವರ್ 92/6
  (ವೃದ್ಧಿಮಾನ್ ಸಾಹ 31, ಜೇಸನ್ ಹೋಲ್ಡರ್ ಅಜೇಯ 47 ರನ್ – ರವಿ ಬಿಷ್ಣೋಯ್ 24/3, ಮೊಹಮ್ಮದ್ ಶಮಿ 14/2
  Published by:Vijayasarthy SN
  First published: