Srh vs Dc playing 11: ಸನ್​ರೈಸರ್ಸ್​ vs ಕ್ಯಾಪಿಟಲ್ಸ್​: ಉಭಯ ತಂಡಗಳು ಹೀಗಿವೆ

ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 7 ಬಾರಿ ಜಯ ಸಾಧಿಸಿದೆ. ಕಳೆದ ಸೀಸನ್​ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 2 ಬಾರಿ ಗೆಲುವು ದಾಖಲಿಸಿದರೆ, ಪ್ಲೇ ಆಫ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸನ್​ರೈಸರ್ಸ್​ಗೆ ಸೋಲುಣಿಸಿತ್ತು ಎಂಬುದು ವಿಶೇಷ.

SRH vs DC

SRH vs DC

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಮುಖಾಮುಖಿಯಾಗಿದೆ. ಉಭಯ ತಂಡಗಳು ಈಗಾಗಲೇ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಗೆಲುವು ದಾಖಲಿಸುವ ಮೂಲಕ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಸತತ ಮೂರು ಸೋಲುಗಳ ಬಳಿಕ ಒಂದು ಗೆಲುವು ಕಂಡಿರುವ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದೆ.

  ಉಭಯ ತಂಡಗಳು ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 11 ಬಾರಿ ಗೆಲುವು ದಾಖಲಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 7 ಬಾರಿ ಜಯ ಸಾಧಿಸಿದೆ. ಕಳೆದ ಸೀಸನ್​ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಸನ್​ರೈಸರ್ಸ್​ ಹೈದರಾಬಾದ್ 2 ಬಾರಿ ಗೆಲುವು ದಾಖಲಿಸಿದರೆ, ಪ್ಲೇ ಆಫ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸನ್​ರೈಸರ್ಸ್​ಗೆ ಸೋಲುಣಿಸಿತ್ತು ಎಂಬುದು ವಿಶೇಷ. ಇನ್ನು ಕೊನೆಯ 6 ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ 3 ಗೆಲುವು ದಾಖಲಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದೆ ಎಂದೇ ಹೇಳಬಹುದು.

  ಎರಡೂ ತಂಡಗಳ ಮುಖಾಮುಖಿಯಲ್ಲಿ ಟಾಪ್ ರನ್ ಸರದಾರರು ಯಾರು ಎಂದು ನೋಡುವುದಾದರೆ...ಡೆಲ್ಲಿ ತಂಡದ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಧವನ್ ಇದುವರೆಗೆ 505 ರನ್​ ಬಾರಿಸಿದ್ದಾರೆ. ಇನ್ನು ಸನ್​ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಡೆಲ್ಲಿ ವಿರುದ್ದ 450 ರನ್ ಕಲೆಹಾಕಿದ್ದಾರೆ. ಹಾಗೆಯೇ ಕೇನ್ ವಿಲಿಯಮ್ಸನ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಉತ್ತಮ ಫಾರ್ಮ್​ ಪ್ರದರ್ಶಿಸಿದ್ದು, ಇದುವರೆಗೆ 405 ರನ್ ಬಾರಿಸಿದ್ದಾರೆ.

  ಬೌಲರುಗಳ ವಿಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 13 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಸನ್​ರೈಸರ್ಸ್​ ವೇಗಿ ಭುವನೇಶ್ವರ್ ಕುಮಾರ್ ಇದ್ದು, ಭುವಿ ಡೆಲ್ಲಿ ವಿರುದ್ದ 12 ವಿಕೆಟ್ ಕಬಳಿಸಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಸನ್​ರೈಸರ್ಸ್​ ವಿರುದ್ದ ಮಿಶ್ರಾ ಇದುವರೆಗೆ 9 ವಿಕೆಟ್ ಉರುಳಿಸಿದ್ದಾರೆ.

  ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಕೇದರ್ ಜಾಧವ್, ರಶೀದ್ ಖಾನ್, ಜಗದೀಶ್ ಸುಚಿತ್, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್

  ದೆಹಲಿ ಕ್ಯಾಪಿಟಲ್ಸ್​ (ಇಲೆವೆನ್ ಪ್ಲೇಯಿಂಗ್): ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ರಿಷಭ್ ಪಂತ್ (ನಾಯಕ), ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅಮಿತ್ ಮಿಶ್ರಾ, ಅವೇಶ್ ಖಾನ್
  Published by:zahir
  First published: