ಶಾರ್ಜಾ, ಸೆ. 30: ಇಲ್ಲಿ ನಡೆದ 2021ರ ಐಪಿಎಲ್ನ 45ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ಗಳಿಂದ ಪರಾಭವಗೊಳಿಸಿತು. ಗೆಲ್ಲಲು 135 ರನ್ಗಳ ಸಾಧಾರಣ ಸವಾಲನ್ನು ಸಿಎಸ್ಕೆ ಕೆಲ ಆತಂಕದ ಕ್ಷಣಗಳೊಂದಿಗೆ ಗುರಿ ಮುಟ್ಟಿತು. ಯುಎಇಯಲ್ಲಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿಸ್ ಅವರ 75 ರನ್ಗಳ ಆರಂಭಿಕ ಜೊತೆಯಾಟ ಸಿಎಸ್ಕೆ ಗೆಲುವಿನ ಹಾದಿಯನ್ನ ಸುಲಭಗೊಳಿಸಿತು. ಫ್ಯಾಫ್ ಡುಪ್ಲೆಸಿಸ್ 41 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. 18 ಅಂಕಗಳನ್ನ ಗಳಿಸಿರುವ ಸಿಎಸ್ಕೆ ತಂಡ ಟಾಪ್ 2 ತಂಡವಾಗಿ ಪ್ಲೇ ಆಫ್ ಪ್ರವೇಶ ಮಾಡುತ್ತದಾ ಎಂಬ ಕುತೂಹಲ ಈಗ ಉಳಿದಿದೆ.
ಹೈದರಾಬಾದ್ನ ಸಾಧಾರಣ ಸವಾಲು ದಾಟಲು ಸಿಎಸ್ಕೆಗೆ ಅಷ್ಟು ಸುಲಭವಾಗಲಿಲ್ಲ. ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ ನೂರು ರನ್ ಗಡಿ ದಾಟಿದ್ದ ಚೆನ್ನೈ ಬಹಳ ಸುಲಭವಾಗಿ ಗೆಲ್ಲಬಹುದೆಂದು ಎಣಿಸಲಾಗಿತ್ತು. ಆದರೆ, ಜೇಸನ್ ಹೋಲ್ಡರ್ ಅವರ ಡಬಲ್ ಸ್ಟ್ರೈಕ್ನಿಂದ ಚೆನ್ನೈ ಚೇಸಿಂಗ್ ಸ್ವಲ್ಪ ಅಡಚಣೆಗೊಳಗಾಯಿತು. ಆದರೆ, ಅಂಬಾಟಿ ರಾಯುಡು ಮತ್ತು ಎಂಎಸ್ ಧೋನಿ ಅಂತ್ಯದಲ್ಲಿ ಉತ್ತಮವಾಗಿ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಧೋನಿ ಭರ್ಜರಿ ಸಿಕ್ಸರ್ ಎತ್ತುವ ಮೂಲಕ ವಿಜಯದ ರನ್ ಗಳಿಸಿದರು.
ಇವತ್ತಿನ ಪಂದ್ಯದಲ್ಲಿ ಸಿಎಸ್ಕೆ ನಾಯಕ ಎಂಎಸ್ ಧೋನಿ ಟಾಸ್ ಗೆದ್ದು ಸನ್ರೈಸರ್ಸ್ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಜೋಷ್ ಹೇಜಲ್ವುಡ್ ಮತ್ತು ಡ್ವೇನ್ ಬ್ರಾವೋ ಅವರ ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ಇನ್ನಿಂಗ್ಸನ್ನು 134 ರನ್ಗೆ ನಿಯಂತ್ರಿಸಿದೆ. ವೃದ್ಧಿಮಾನ್ ಸಾಹ 44 ರನ್ ಗಳಿಸಿದ್ದರಿಂದ ಸನ್ ರೈಸರ್ಸ್ ತಂಡ ಗೌರವಯುತ ಸ್ಕೋರ್ ತಲುಪಲು ಸಾಧ್ಯವಾಯಿತು. ನಾಯಕ ಕೇನ್ ವಿಲಿಯಮ್ಸನ್, ಜೋಸನ್ ರಾಯ್ ಅವರು ಎರಡಂಕಿ ಸ್ಕೋರನ್ನೂ ಗಳಿಸಲಿಲ್ಲ. ಅಭಿಷೇಕ್ ಶರ್ಮಾ ಮತ್ತು ವೃದ್ಧಿಮಾನ್ ಸಾಹ 5ನೇ ವಿಕೆಟ್ಗೆ 35 ರನ್ ಜೊತೆಯಾಟ ಆಡಿದರು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡ್ವೇನ್ ಬ್ರಾವೋ ಕಂಬ್ಯಾಕ್ ಮಾಡಿದರು. ಬಂದವರೇ ಬೌಲಿಂಗ್ನಲ್ಲಿ ತಮ್ಮ ಛಾಪು ತೋರಿಸಿದರು.
POINTS TABLE:
ತಂಡಗಳು:
ಸನ್ರೈಸರ್ಸ್ ಹೈದರಾಬಾದ್ ತಂಡ: ಜೇಸನ್ ರಾಯ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫ್ಯಾಫ್ ಡುಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್ವುಡ್.
ಇದನ್ನೂ ಓದಿ: ಇವರಿಬ್ಬರ ಕಾಂಬಿನೇಶನ್ ಭಾರತಕ್ಕೆ ಬೆಸ್ಟ್; ಬೇರೆಯವರನ್ನ ತಂದರೆ ಕಷ್ಟ: ಮಾಜಿ ಕ್ರಿಕೆಟಿಗ ಪ್ರಸಾದ್
ಇದನ್ನೂ ಓದಿ: ಇವರಿಬ್ಬರ ಕಾಂಬಿನೇಶನ್ ಭಾರತಕ್ಕೆ ಬೆಸ್ಟ್; ಬೇರೆಯವರನ್ನ ತಂದರೆ ಕಷ್ಟ: ಮಾಜಿ ಕ್ರಿಕೆಟಿಗ ಪ್ರಸಾದ್
ಸ್ಕೋರು ವಿವರ:
ಸನ್ರೈಸರ್ಸ್ ಹೈದರಾಬಾದ್ 20 ಓವರ್ 134/7
(ವೃದ್ಧಿಮಾನ್ ಸಾಹ 44, ರಷೀದ್ ಖಾನ್ ಅಜೇಯ 17, ಅಭಿಷೇಕ್ ಶರ್ಮಾ 18, ಅಬ್ದುಲ್ ಸಮದ್ 18 ರನ್ – ಜೋಷ್ ಹೇಜಲ್ವುಡ್ 24/3, ಡ್ವೇನ್ ಬ್ರಾವೋ 17/2)
ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ 139/4
(ಋತುರಾಜ್ ಗಾಯಕ್ವಾಡ್ 45, ಫ್ಯಾಫ್ ಡುಪ್ಲೆಸಿಸ್ 41, ಮೊಯೀನ್ ಅಲಿ 17, ಅಂಬಾಟಿ ರಾಯುಡು ಅಜೇಯ 17, ಎಂಎಸ್ ಧೋನಿ 14 ರನ್- ಜೇಸನ್ ಹೋಲ್ಡರ್ 27/3)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ