ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಿದ ಕೊನೆಯ ಪಂದ್ಯದಲ್ಲಿ ಎಸ್ಆರ್ಹೆಚ್ ಸೂಪರ್ ಓವರ್ನಲ್ಲಿ ಸೋಲನುಭವಿಸಿತು. ಇದಕ್ಕೂ ಮುನ್ನ ಡೆಲ್ಲಿ ನೀಡಿದ 160 ರನ್ಗಳ ಟಾರ್ಗೆಟ್ನ್ನು ಬೆನ್ನತ್ತಿದ ಹೈದರಾಬಾದ್ಗೆ ಮಧ್ಯಮ ಕ್ರಮಾಂಕ ಮತ್ತೆ ಕೈಕೊಟ್ಟಿತ್ತು. ಇದಾಗ್ಯೂ ಏಕಾಂಗಿ ಹೋರಾಟ ನಡೆಸಿದ ಕೇನ್ ವಿಲಿಯಮ್ಸನ್ ಪಂದ್ಯವನ್ನು ಸೂಪರ್ ಓವರ್ಗೆ ತಂದು ನಿಲ್ಲಿಸಿದ್ದರು.
ಸೂಪರ್ ಓವರ್ನಲ್ಲಿ ಸೋತ ಬಳಿಕ ಮಾತನಾಡಿದ ವಾರ್ನರ್, ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರು ಪಾಂಡೆಯನ್ನು ತಂಡದಿಂದ ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ತಂಡದ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ ಎಂದು ಪರೋಕ್ಷವಾಗಿ ವಾರ್ನರ್ ತಿಳಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದಕ್ಕಾಗಿ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಡಲಾಗಿತ್ತು. ಅವರ ಬದಲಿಗೆ ಸ್ಥಾನ ಪಡೆದ ಎಡಗೈ ದಾಂಡಿಗ ವಿರಾಟ್ ಸಿಂಗ್ ಡೆಲ್ಲಿ ವಿರುದ್ದದ ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರ ಗಳಿಸಿದ್ದರು. ಇದುವೇ ತಂಡದ ಸೋಲಿಗೆ ಕಾರಣವಾಯಿತು.
ಈ ವಿಷಯವನ್ನು ಪ್ರಸ್ತಾಪಿಸದೇ ಮಾತನಾಡಿದ ವಾರ್ನರ್, ತಂಡದಲ್ಲಿನ ಬದಲಾವಣೆ ಆಯ್ಕೆಗಾರರ ನಿರ್ಧಾರ. ಆದರೆ ಕೆಲವೊಂದು ಕಠಿಣ ನಿರ್ಧಾರವಾಗಿದೆ ಎಂಬುದು ನನ್ನ ಅಭಿಪ್ರಾಯ. ವಿರಾಟ್ ಸಿಂಗ್ ವೈಫಲ್ಯವನ್ನು ನಾನು ದೂಷಿಸುತ್ತಿಲ್ಲ. ಆತ ಉತ್ತಮ ಆಟಗಾರ. ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು. ಅವರು ಮಧ್ಯದ ಓವರ್ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು ಎಂದು ವಾರ್ನರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ