• Home
  • »
  • News
  • »
  • ipl
  • »
  • Sourav Ganguly: ಬಯೋಬಬಲ್ ಒಳಗೆ ಕೊರೋನಾ ಪ್ರವೇಶಿಸಿದ್ದು ಹೇಗೆ? ಸೌರವ್ ಗಂಗೂಲಿ ಹೇಳಿದ್ದೇನು?

Sourav Ganguly: ಬಯೋಬಬಲ್ ಒಳಗೆ ಕೊರೋನಾ ಪ್ರವೇಶಿಸಿದ್ದು ಹೇಗೆ? ಸೌರವ್ ಗಂಗೂಲಿ ಹೇಳಿದ್ದೇನು?

ಈ ಟೂರ್ನಿಯ ಬೆನ್ನಿಗೆ ಭಾರತ ತಂಡ 2003 ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ನಡೆದ ವಿಶ್ವಕಪ್​ನಲ್ಲೂ ಅದ್ಭುತ ನಿರ್ವಹಣೆ ತೋರಿತ್ತು. ಈ ಟೂರ್ನಿಯಲ್ಲಿ ಗಂಗೂಲಿ 3 ಶತಕ ಸಿಡಿಸಿದ್ದರು. ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದರು. ಆದರೂ, ಭಾರತ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ವಿರೋಚಿತ ಗೆಲುವು ಭಾರತೀಯರಿಗೆ ಕಪ್ ಗೆದ್ದದ್ದಕ್ಕಿಂತ ಹೆಚ್ಚಿನ ಸಂತೋಷ ನೋಡಿದ್ದು ಸುಳ್ಳಲ್ಲ.

ಈ ಟೂರ್ನಿಯ ಬೆನ್ನಿಗೆ ಭಾರತ ತಂಡ 2003 ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ನಡೆದ ವಿಶ್ವಕಪ್​ನಲ್ಲೂ ಅದ್ಭುತ ನಿರ್ವಹಣೆ ತೋರಿತ್ತು. ಈ ಟೂರ್ನಿಯಲ್ಲಿ ಗಂಗೂಲಿ 3 ಶತಕ ಸಿಡಿಸಿದ್ದರು. ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದರು. ಆದರೂ, ಭಾರತ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ವಿರೋಚಿತ ಗೆಲುವು ಭಾರತೀಯರಿಗೆ ಕಪ್ ಗೆದ್ದದ್ದಕ್ಕಿಂತ ಹೆಚ್ಚಿನ ಸಂತೋಷ ನೋಡಿದ್ದು ಸುಳ್ಳಲ್ಲ.

ಇದೇ ಮಾದರಿಯಲ್ಲಿ ನಾವು ಈ ಹಿಂದೆ ಯುಎಇನಲ್ಲಿ ಟೂರ್ನಿಯನ್ನು 3 ಮೈದಾನದಲ್ಲಿ ಆಯೋಜಿಸಿದ್ದೆವು. ಆದರೆ ಈ ವೇಳೆ ವಿಮಾನ ಪ್ರಯಾಣದ ಅಗತ್ಯತೆ ಅಲ್ಲಿರಲಿಲ್ಲ. ಹೀಗಾಗಿ ಅಲ್ಲಿನ ಬಯೋಬಬಲ್ ಅತ್ಯಂತ ಸುರಕ್ಷಿತವಾಗಿತ್ತು.

  • Share this:

    ಸಂಪೂರ್ಣ ಸುರಕ್ಷತೆಯ ಹೊರತಾಗಿಯೂ ಐಪಿಎಲ್ ಬಯೋಬಬಲ್​ನ್ನು ಕೊರೋನಾ ಪ್ರವೇಶಿಸಿದೆ. ಕೊರೋನಾ ಪ್ರವೇಶದೊಂದಿಗೆ ಈ ಬಾರಿಯ ಐಪಿಎಲ್​ ಅರ್ಧದಲ್ಲೇ ಮುಕ್ತಾಯಗೊಂಡಿದೆ. ಆದರೆ ಅಷ್ಟೆಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡರೂ ಕೊರೋನಾ ಹೇಗೆ ಬಯೋಬಬಲ್ ಪ್ರವೇಶಿಸಿತು ಎಂಬುದು ಚರ್ಚೆಗೀಡಾಗಿರುವ ವಿಷಯ. ಈ ಬಗ್ಗೆ ಕೊನೆಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ.


    ಈ ಬಗ್ಗೆ ಮಾತನಾಡಿದ ಗಂಗೂಲಿ, ಈ ಬಾರಿ 6 ಮೈದಾನದಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು. ಇದರಿಂದ ಆಟಗಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದು ಅಗತ್ಯವಾಗಿತ್ತು. ಈ ಪ್ರಮಾಣದ ವೇಳೆ ಬಹುಶಃ ಬಯೋಬಬಲ್​ ಒಳಗೆ ಕೊರೋನಾ ಪ್ರವೇಶಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


    ಇದೇ ಮಾದರಿಯಲ್ಲಿ ನಾವು ಈ ಹಿಂದೆ ಯುಎಇನಲ್ಲಿ ಟೂರ್ನಿಯನ್ನು 3 ಮೈದಾನದಲ್ಲಿ ಆಯೋಜಿಸಿದ್ದೆವು. ಆದರೆ ಈ ವೇಳೆ ವಿಮಾನ ಪ್ರಯಾಣದ ಅಗತ್ಯತೆ ಅಲ್ಲಿರಲಿಲ್ಲ. ಹೀಗಾಗಿ ಅಲ್ಲಿನ ಬಯೋಬಬಲ್ ಅತ್ಯಂತ ಸುರಕ್ಷಿತವಾಗಿತ್ತು. ಆದರೆ ಇಲ್ಲಿ 6 ಮೈದಾನದಲ್ಲಿ ನಡೆಸಬೇಕಾದ ಅನಿವಾರ್ಯತೆಯಿತ್ತು. ಅಲ್ಲದೆ ಒಂದು ಕಡೆಯಿಂದ ಮತ್ತೊಂದೆಡೆ ವಿಮಾನ ಪ್ರಯಾಣ ಮಾಡಬೇಕಿತ್ತು. ಇದೇ ವೇಳೆ ಬಯೋಬಬಲ್ ಒಳಗಡೆ ಕೊರೋನಾ ವೈರಸ್ ನುಸುಳಿರಬಹುದು ಎಂದು ಗಂಗೂಲಿ ತಿಳಿಸಿದ್ದಾರೆ.


    ಇನ್ನು ಟಿ20 ವಿಶ್ವಕಪ್​ಗೂ ಮುನ್ನ ಐಪಿಎಲ್ ನಡೆಯಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಐಪಿಎಲ್ ಮುಂದೂಡಿ ಕೆಲವು ದಿನಗಳು ಮಾತ್ರ ಆಗಿದೆ. ಇದೀಗ ಮತ್ತೊಮ್ಮೆ ಆಯೋಜಿಸುವುದರ ಬಗ್ಗೆ ಒಂದಷ್ಟು ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ಅದರಂತೆ ಟಿ20 ವಿಶ್ವಕಪ್​ಗೂ ಮುನ್ನವೇ ಟೂರ್ನಿಯನ್ನು ಆಯೋಜಿಸುವ ಆಯ್ಕೆ ನಮ್ಮ ಮುಂದಿದೆ. ಇದಕ್ಕಾಗಿ ಎಲ್ಲಾ ದೇಶಗಳ ಕ್ರಿಕೆಟ್ ಬೋರ್ಡ್​ಗಳ ಜೊತೆ ಮಾತುಕತೆ ನಡೆಸಬೇಕಿದೆ ಎಂದು ಗಂಗೂಲಿ ತಿಳಿಸಿದ್ದಾರೆ.


    ಇದರೊಂದಿಗೆ ಟಿ20 ವಿಶ್ವಕಪ್​ಗೂ ಮುನ್ನವೇ ಐಪಿಎಲ್ ನಡೆಯಲಿರುವುದು ಬಹುತೇಕ ಖಚಿತವಾದಂತಾಗಿದೆ. ಎಲ್ಲಾ ಕ್ರಿಕೆಟ್ ಬೋರ್ಡ್​​ಗಳು ಸಮ್ಮತಿಸಿದರೆ, ಭಾರತದಲ್ಲಿ ಟಿ20 ವಿಶ್ವಕಪ್​ ನಡೆಯುವ ಮುನ್ನ ಐಪಿಎಲ್ ಜರುಗಲಿದೆ. ಏಕೆಂದರೆ ಟಿ20 ವಿಶ್ವಕಪ್​ಗಾಗಿ ಎಲ್ಲಾ ತಂಡಗಳು ಭಾರತಕ್ಕೆ ಬರಲಿದ್ದು, ಇದೇ ಸಮಯದಲ್ಲಿ ಟೂರ್ನಿಯನ್ನು ಪೂರ್ಣಗೊಳಿಸುವುದು ಸುಲಭ ಎಂಬುದು ಬಿಸಿಸಿಐ ಲೆಕ್ಕಚಾರ.

    Published by:zahir
    First published: