ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್ನಲ್ಲಿ ಐದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಗಬ್ಬರ್ ಸಿಂಗ್ ಭಾಜನರಾದರು. ದುಬೈನಲ್ಲಿ ನಡೆಯುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 62 ರನ್ ಬಾರಿಸುವುದರೊಂದಿಗೆ ಧವನ್ 5 ಸಾವಿರ ರನ್ ಸರದಾರರ ಪಟ್ಟಿಗೆ ಸೇರ್ಪಡೆಯಾದರು.
169 ಇನಿಂಗ್ಸ್ನಲ್ಲಿ ಧವನ್ ಈ ಸಾಧನೆ ಮಾಡಿದ್ದು, ಇದರೊಂದಿಗೆ ಐಪಿಎಲ್ನಲ್ಲಿ ಐದು ಸಾವಿರ ರನ್ ಪೂರೈಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ (135 ಪಂದ್ಯಗಳಲ್ಲಿ 5000+), ವಿರಾಟ್ ಕೊಹ್ಲಿ (186 ಪಂದ್ಯಗಳಲ್ಲಿ 5759), ಸುರೇಶ್ ರೈನಾ (183 ಪಂದ್ಯಗಳಲ್ಲಿ 5468) ಹಾಗೂ ರೋಹಿತ್ ಶರ್ಮಾ (196 ಪಂದ್ಯಗಳಲ್ಲಿ 5149) ರನ್ ಪೂರೈಸಿದ್ದಾರೆ.
ಇದೇ ಪಂದ್ಯದಲ್ಲಿ 57 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸತತ ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎನಿಸಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಶತಕ ಸಿಡಿಸಿದ್ದರು. ಇದೀಗ ಕಿಂಗ್ಸ್ ಇಲೆವೆನ್ ವಿರುದ್ಧ ಕೂಡ ಭರ್ಜರಿ ಶತಕ ಬಾರಿಸುವ ಮೂಲಕ ಕಳೆದ 13 ಸೀಸನ್ಗಳಿಂದ ಯಾರಿಂದಲೂ ಮಾಡಲಾಗದ ಸಾಧನೆ ಮಾಡಿದರು.
ಈ ಇನಿಂಗ್ಸ್ನಲ್ಲಿ 61 ಎಸೆತಗಳಿಂದ 106 ರನ್ ಬಾರಿಸಿದ ಶಿಖರ್ ಧವನ್ ಅಜೇಯರಾಗಿ ಉಳಿದರು. ತಮ್ಮ ಈ ಅಮೋಘ ಬ್ಯಾಟಿಂಗ್ನಲ್ಲಿ 3 ಸಿಕ್ಸರ್ ಹಾಗೂ 12 ಬೌಂಡರಿಗಳು ಮೂಡಿ ಬಂದಿದ್ದವು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ