92 ರನ್ಗಳಿಗೆ ಕೇವಲ 2 ವಿಕೆಟ್, 47 ರನ್ಗಳಿಸುವುದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ 7 ವಿಕೆಟ್ ಪತನ...ಗೆಲುವಿನ ಹಾದಿಯಲ್ಲಿದ್ದ ಎಸ್ಆರ್ಹೆಚ್ ತಂಡಕ್ಕೆ 6 ರನ್ಗಳ ಸೋಲು. ಹೌದು, ಚೆನ್ನೈನಲ್ಲಿ ನಡೆದ ಎಸ್ಆರ್ಹೆಚ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಬೌಲರುಗಳು ಅಕ್ಷರಶಃ ಮಿಂಚಿದ್ದರು. ಅದರಲ್ಲೂ ಶಹಬಾಜ್ ಅಹ್ಮದ್ ಯಾಕೆ ತಂಡದಲ್ಲಿದ್ದಾರೆ ಎಂಬುದಕ್ಕೆ ಪರ್ಫೆಕ್ಟ್ ಉತ್ತರ ನೀಡಿದ್ದರು.
ವಿರಾಟ್ ಕೊಹ್ಲಿ 15ನೇ ಓವರ್ನ್ನು ಶಹಬಾಜ್ಗೆ ನೀಡಿದಾಗ ಬಹುತೇಕ ಮಂದಿ ಅಚ್ಚರಿಗೊಂಡಿದ್ದರು. ಆದರೆ ಜಾನಿ ಬೈರ್ಸ್ಟೋವ್ ಹಾಗೂ ಮನೀಷ್ ಪಾಂಡೆಯನ್ನು ಕಟ್ಟಿಹಾಕಿದ ಯುವ ಸ್ಪಿನ್ನರ್ ನೀಡಿದ್ದು ಕೇವಲ 6 ರನ್ ಮಾತ್ರ. ಇದಾಗ್ಯೂ ಎಸ್ಆರ್ಹೆಚ್ ಗೆಲುವಿಗೆ 30 ಎಸೆತಗಳಲ್ಲಿ 42 ರನ್ ಮಾತ್ರ ಸಾಕಾಗಿತ್ತು. ಪಂದ್ಯ ಸಂಪೂರ್ಣ ಸನ್ರೈಸರ್ಸ್ ಹಿಡಿತದಲ್ಲೇ ಇತ್ತು.
ಈ ವೇಳೆ ಕೊಹ್ಲಿ ಮತ್ತೊಮ್ಮೆ ಚೆಂಡನ್ನು ಶಹಬಾಜ್ಗೆ ಕೈಗೆ ನೀಡಿದರು. 17ನೇ ಓವರ್ ಎಸೆಯುವ ಮುನ್ನ ಎಸ್ಆರ್ಹೆಚ್ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು ಶಹಬಾಜ್. ಮೊದಲ ಎಸೆತದಲ್ಲಿ ಡೇಂಜರಸ್ ಜಾನಿ ಬೈರ್ಸ್ಟೋವ್ ವಿಕೆಟ್. 2ನೇ ಎಸೆತದಲ್ಲಿ ಪವರ್ ಹಿಟ್ಟರ್ ಮನೀಷ್ ಪಾಂಡೆ ವಿಕೆಟ್. 3ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 4ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಬಿಗ್ ಹಿಟ್ಟರ್ ಅಬ್ದುಲ್ ಸಮದ್ ವಿಕೆಟ್. ಸನ್ರೈಸರ್ಸ್ ಪರವಿದ್ದ ಪಂದ್ಯವನ್ನು ಒಂದೇ ಓವರ್ನಲ್ಲಿ ಶಹಬಾಜ್ ಆರ್ಸಿಬಿ ಪರ ವಾಲಿಸಿದ್ದರು.
ಒಂದೇ ಒಂದು ಓವರ್ ಮೂಲಕ ಶಹಬಾಜ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಆರ್ಸಿಬಿ ಆಟಗಾರರಲ್ಲಿ ಗೆಲ್ಲುವ ಹುಮ್ಮಸ್ಸು ಮೂಡಿಸಿದರು. ಅತ್ತ ಸುಲಭವಾಗಿ ಗೆಲ್ಲಬಹುದು ಅಂದುಕೊಂಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಸೋಲಿನ ರುಚಿ ನೋಡಬೇಕಾಯಿತು.
.@myntra Stylish Player of #SRHvRCB: Shahbaz Ahmed
Game changing 17th over, and an opportunity to bat at No.3 earlier, Shahbaz Ahmed was charged up to make the most of the opportunity and turn the game around for #RCB.#PlayBold #WeAreChallengers #IPL2021 #DareToDream pic.twitter.com/HrS3xv24dU
— Royal Challengers Bangalore (@RCBTweets) April 15, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ