HOME » NEWS » Ipl » SHAH RUKH KHAN APOLOGISES TO FANS FOR KKRS DISAPPOINTING PERFORMANCE AT IPL 2021 MATCH AGAINST MUMBAI INDIANS ZP

IPL 2021: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಶಾರುಖ್ ಖಾನ್..!

ಮೊದಲ ವಿಕೆಟ್​ಗೆ ಶುಭ್​ಮನ್ ಗಿಲ್ ಹಾಗೂ ನಿತೀಶ್ ರಾಣಾ 8.5 ಓವರ್​ನಲ್ಲಿ 72 ರನ್​ ಪೇರಿಸಿದ್ದರು. ಆದರೆ ಆ ಬಳಿಕ ದಿಢೀರ್ ಕುಸಿತಕ್ಕೆ ಒಳಗಾದ ಕೆಕೆಆರ್ ತಂಡವು 10 ರನ್​ಗಳಿಂದ ಸೋಲನುಭವಿಸಿತು.

news18-kannada
Updated:April 14, 2021, 4:06 PM IST
IPL 2021: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಶಾರುಖ್ ಖಾನ್..!
Shah Rukh Khan
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ದ ರೋಚಕ ಜಯ ಸಾಧಿಸಿತು. ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕೆಕೆಆರ್​ ತಂಡದ ಆಂಡ್ರೆ ರಸೆಲ್ ಐದು ವಿಕೆಟ್ ಪಡೆಯುವುದರೊಂದಿಗೆ ಮುಂಬೈ ತಂಡವನ್ನು 152 ರನ್​ಗಳಿಗೆ ಆಲೌಟ್ ಮಾಡಿದ್ದರು. 153 ರನ್​ಗಳ ಸಾಧಾರಣ ಗುರಿ ಪಡೆದ ಕೆಕೆಆರ್​ ತಂಡವು ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು.

ಮೊದಲ ವಿಕೆಟ್​ಗೆ ಶುಭ್​ಮನ್ ಗಿಲ್ ಹಾಗೂ ನಿತೀಶ್ ರಾಣಾ 8.5 ಓವರ್​ನಲ್ಲಿ 72 ರನ್​ ಪೇರಿಸಿದ್ದರು. ಆದರೆ ಆ ಬಳಿಕ ದಿಢೀರ್ ಕುಸಿತಕ್ಕೆ ಒಳಗಾದ ಕೆಕೆಆರ್ ತಂಡವು 10 ರನ್​ಗಳಿಂದ ಸೋಲನುಭವಿಸಿತು. ಮುಂಬೈ ಬೌಲರುಗಳ ಪರಾಕ್ರಮದ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಒದ್ದಾಡಿದ ಕೊಲ್ಕತ್ತಾ ಬ್ಯಾಟ್ಸ್​ಮನ್​ಗಳು ಅಂತಿಮವಾಗಿ 142 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅದರಲ್ಲೂ ಕೇವಲ 31 ಎಸೆತಗಳಲ್ಲಿ 31 ರನ್​ಗಳಿಸುವ ಅವಶ್ಯಕತೆಯಿದ್ದಾಗ, ಪ್ರಮುಖ ಆಟಗಾರರು ವಿಕೆಟ್ ಕೈಚೆಲ್ಲಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹೀನಾಯ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೆಕೆಆರ್ ಅಭಿಮಾನಿಗಳು ಕಿಡಿಕಾರಲು ಆರಂಭಿಸಿದ್ದರು. ಫ್ಯಾನ್ಸ್​ ನೋವನ್ನು ಪರಿಗಣಿಸಿ ಇದೀಗ ಕೆಕೆಆರ್ ತಂಡದ ಮಾಲೀಕರಾದ ಶಾರುಖ್ ಖಾನ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರಾಶಾದಾಯಕ ಪ್ರದರ್ಶನಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುವುದಾಗಿ ಶಾರುಖ್ ಖಾನ್ ಟ್ವೀಟರ್ ಮೂಲಕ ತಿಳಿಸಿದ್ದಾರೆ.
Published by: zahir
First published: April 14, 2021, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories