IPL 2020: ಈತನ ಸಾಮರ್ಥ್ಯ ಇಷ್ಟೇ: ಸಂಜುಗೆ ಸಂಜಯ್ ಬೌನ್ಸರ್..!

ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರನ್ನು ಹೀರೋ ಪಟ್ಟಕ್ಕೇರಿಸಿದವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಏಕೆಂದರೆ ಪ್ರಥಮ ದರ್ಜೆಯಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ.

Sanjay- sanju samson

Sanjay- sanju samson

  • Share this:
    IPL 2020 ಸೀಸನ್​ನಲ್ಲಿ ಸಖತ್ ಸದ್ದು ಮಾಡಿದ್ದ ಯುವ ಬ್ಯಾಟ್ಸ್​ಮನ್​ಗಳಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ದದ ಮೊದಲ ಪಂದ್ಯದಲ್ಲಿ 74 ರನ್ ಬಾರಿಸಿ ಮಿಂಚಿದ್ರೆ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 85 ರನ್​ಗಳೊಂದಿಗೆ ಅಬ್ಬರಿಸಿದ್ದರು. ಆದರೆ ಈ ಎರಡು ಪಂದ್ಯಗಳ ಬಳಕ ಸ್ಯಾಮ್ಸನ್ ಸ್ಪೋಟಕ ಆಟ ಮಾಯವಾಗಿತ್ತು. ಮೂರು ಪಂದ್ಯಗಳಲ್ಲಿ ಗಳಿಸಿದ್ದು 8, 4 ಮತ್ತು 0 ಮಾತ್ರ. ಹೀಗಾಗಿಯೇ ಯುವ ಆಟಗಾರನ ಸಾಮರ್ಥ್ಯದ ಮೇಲೆ ಪ್ರಶ್ನೆಗಳೆದ್ದಿವೆ. ಮೂರು ಪಂದ್ಯಗಳಿಂದ ಎರಡಂಕಿ ಮೊತ್ತಗಳಿಸುವಲ್ಲಿ ವಿಫಲರಾಗಿರುವ ರಾಜಸ್ಥಾನ್ ರಾಯಲ್ಸ್ ಆಟಗಾರನ ವಿರುದ್ಧ ಮಾಜಿ ಕ್ರಿಕೆಟರ್, ವೀಕ್ಷಕ ವಿಶ್ಲೇಷಣೆಗಾರ ಸಂಜಯ್ ಮಂಜ್ರೇಕರ್ ನೇರ ಬೌನ್ಸರ್ ಎಸೆದಿದ್ದಾರೆ.

    ಮುಂಬೈ ವಿರುದ್ಧದ ಪಂದ್ಯದಲ್ಲಿ ಶಾರ್ಟ್ ಬಾಲ್ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಶಾರ್ಟ್ ಬಾಲ್​ ನನ್ನ ದೌರ್ಬಲ್ಯ ಎಂಬುದನ್ನು ಸಂಜು ಸ್ಯಾಮ್ಸನ್ ಸಾಬೀತುಪಡಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ಮಂಜ್ರೇಕರ್, ಯಾವುದೇ ಆಟಗಾರನ ಸಾಮರ್ಥ್ಯವನ್ನು ನಿರ್ಣಯಿಸಬೇಕಿದ್ರೆ ಮೊದಲು ಆತನ ಫಸ್ಟ್ ಕ್ಲಾಸ್ ಕ್ರಿಕೆಟ್ ರೆಕಾರ್ಡ್ ಪರಿಶೀಲಿಸಬೇಕು ಎಂದಿದ್ದಾರೆ.

    ಯಾವುದೇ ಸ್ವರೂಪದ ಕ್ರಿಕೆಟ್ ಇರಲಿ, ಆಟಗಾರನ ಸಾಮರ್ಥ್ಯವನ್ನು ತಿಳಿಯಲು ಆತನ ಪ್ರಥಮ್ ದರ್ಜೆ ದಾಖಲೆಯನ್ನು ನೋಡಬೇಕೆಂದು ನಾನು ಸೂಚಿಸುತ್ತೇನೆ. ಇದು ನನಗೆ ಸ್ಯಾಮ್ಸನ್ ವಿಷಯದಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಏಕೆಂದರೆ ಅವರ ಪ್ರಥಮ ದರ್ಜೆ ಕ್ರಿಕೆಟ್‌ ಸರಾಸರಿ 37 ಇದೆ. ಅದೇ ಮಾಯಾಂಕ್ ಅಗರ್ವಾಲ್ 57 ಮತ್ತು ಶುಭ್​ಮನ್ ಗಿಲ್ ಅವರು 21 ಪಂದ್ಯಗಳಲ್ಲಿ 73 ಸರಾಸರಿ ಹೊಂದಿದ್ದಾರೆ ಎಂದು ಮಂಜ್ರೇಕರ್ ಟ್ವೀಟ್‌ ಮಾಡಿದ್ದಾರೆ.

    ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರನ್ನು ಹೀರೋ ಪಟ್ಟಕ್ಕೇರಿಸಿದವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಏಕೆಂದರೆ ಪ್ರಥಮ ದರ್ಜೆಯಲ್ಲಿ ಅವರ ಪ್ರದರ್ಶನ ಉತ್ತಮವಾಗಿಲ್ಲ. ಹೀಗಾಗಿ ಐಪಿಎಲ್​ನಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ಕೇರಳದ ಬ್ಯಾಟ್ಸ್​ಮನ್ ಎಡವಿದ್ದಾರೆ ಅಷ್ಟೇ ಎಂದಿದ್ದಾರೆ ಮಂಜ್ರೇಕರ್.

    ಸಂಜಯ್ ಮಂಜ್ರೇಕರ್ ಅವರ ಈ ಬಹಿರಂಗ ಟೀಕೆಗೆ ಶುಕ್ರವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಸಂಜು ಸ್ಯಾಮ್ಸನ್ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
    Published by:zahir
    First published: