HOME » NEWS » Ipl » SANJU SAMSON BECOMES FIRST BATSMAN TO HIT CENTURY ON IPL CAPTAINCY DEBUT ZP

Sanju Samson: ಒಂದು ಶತಕದೊಂದಿಗೆ ಹಲವು ದಾಖಲೆ ಬರೆದ ಸಂಜು ಸ್ಯಾಮ್ಸನ್..!

ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನೂ 3 ಶತಕಗಳೊಂದಿಗೆ ಸ್ಯಾಮ್ಸನ್ ಸರಿಗಟ್ಟಿದ್ದರು. ಈ ಪಟ್ಟಿಯಲ್ಲಿ 6 ಶತಕ ಬಾರಿಸಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (5) ಎರಡನೇ ಸ್ಥಾನದಲ್ಲಿದ್ದಾರೆ.

news18-kannada
Updated:April 13, 2021, 8:13 PM IST
Sanju Samson: ಒಂದು ಶತಕದೊಂದಿಗೆ ಹಲವು ದಾಖಲೆ ಬರೆದ ಸಂಜು ಸ್ಯಾಮ್ಸನ್..!
sanju samson
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಹಣಾಹಣಿಯಲ್ಲಿ ರನ್​ ಮಳೆ ಸುರಿಯಿತು. ಮೊದಲ ಬ್ಯಾಟ್ ಮಾಡಿದ ಪಂಜಾಬ್ 221 ರನ್​ಗಳ ಬಾರಿಸಿದರೆ, ಅದನ್ನು ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ 217 ರನ್​ಗಳಿಸಿತು. ಬೃಹತ್ ಮೊತ್ತದ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್​ಗೆ ನೆರವಾಗಿದ್ದು ಯುವ ನಾಯಕ ಸಂಜು ಸ್ಯಾಮ್ಸನ್​.

ಇಡೀ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟಕ್ಕೆ ಇಳಿದಿದ್ದರು. ಅಲ್ಲದೆ ಅಂತಿಮ ಓವರ್​ನ ಕೊನೆಯ ಎಸೆತದವರೆಗೂ ಪಂದ್ಯವನ್ನು ಕೊಂಡೊಯ್ದರು. ಅಲ್ಲದೆ ಕೇವಲ 63 ಎಸೆತಗಳಲ್ಲಿ 119 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ರೋಚಕ ಹೋರಾಟದಲ್ಲಿ ಕೆಎಲ್ ರಾಹುಲ್ ಪಡೆ 4 ರನ್​ಗಳ ವಿಜಯ ಸಾಧಿಸಿತು. ಆದರೆ ನಾಯಕನಾಗಿ ಚೊಚ್ಚಲ ಬಾರಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಹಲವು ದಾಖಲೆಗಳನ್ನು ಬರೆದಿದ್ದು ವಿಶೇಷ.

ಈ ಬಾರಿಯ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಜು ಸ್ಯಾಮ್ಸನ್, ರಾಜಸ್ಥಾನ್ ರಾಯಲ್ಸ್ ಪರ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಲ್ಲದೆ ಐಪಿಎಲ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 5 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸಂಜು ಸ್ಯಾಮ್ಸನ್ 3 ಶತಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನೂ 3 ಶತಕಗಳೊಂದಿಗೆ ಸ್ಯಾಮ್ಸನ್ ಸರಿಗಟ್ಟಿದ್ದರು. ಈ ಪಟ್ಟಿಯಲ್ಲಿ 6 ಶತಕ ಬಾರಿಸಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (5) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಡೇವಿಡ್ ವಾರ್ನರ್ (4) 3ನೇ ಸ್ಥಾನದಲ್ಲಿದ್ದರೆ, ಎಬಿಡಿ ಜೊತೆ ಸ್ಯಾಮ್ಸನ್ 4ನೇ ಸ್ಥಾನ ಅಲಂಕರಿಸಿದ್ದಾರೆ.

ಇದಲ್ಲದೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್​ ಪರ 2 ಸಾವಿರ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸ್ಯಾಮ್ಸನ್ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 80 ಪಂದ್ಯಗಳಲ್ಲಿ ಯುವ ಬ್ಯಾಟ್ಸ್​​ಮನ್ 2026 ರನ್ ಗಳಿಸಿದ್ದಾರೆ. ಅಜಿಂಕ್ಯ ರಹಾನೆ ( 2810) ರಾಜಸ್ಥಾನ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Published by: zahir
First published: April 13, 2021, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories