• ಹೋಂ
  • »
  • ನ್ಯೂಸ್
  • »
  • IPL
  • »
  • SRH v/s RCB: ಆರ್​ಸಿಬಿ-ಹೈದರಾಬಾದ್​​ ರೋಚಕ ಪಂದ್ಯಕ್ಕೆ ಸುದೀಪ್​ ಕಾತುರ: ಟ್ವೀಟ್ ಮಾಡಿ ಸಂತಸ ಹಂಚಿಕೊಂಡ ಕಿಚ್ಚ

SRH v/s RCB: ಆರ್​ಸಿಬಿ-ಹೈದರಾಬಾದ್​​ ರೋಚಕ ಪಂದ್ಯಕ್ಕೆ ಸುದೀಪ್​ ಕಾತುರ: ಟ್ವೀಟ್ ಮಾಡಿ ಸಂತಸ ಹಂಚಿಕೊಂಡ ಕಿಚ್ಚ

ಆರ್​ಸಿಬಿ

ಆರ್​ಸಿಬಿ

Kiccha Sudeep: ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಕೂಡ ಆರ್​ಸಿಬಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದರಂತೆ ನಟ ಕಿಚ್ಚ ಸುದೀಪ್ ತಂಡಕ್ಕೆ ಶುಭಾಶಯ ಕೋರುವ ಮೂಲಕಇಂದಿನ ಪಂದ್ಯದ ಕಾತುರತೆ ವ್ಯಕ್ತಪಡಿಸಿದ್ದಾರೆ.

  • Share this:

    ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಈ ವರ್ಷದ ಮೊದಲ ಐಪಿಎಲ್ ಪಂದ್ಯವನ್ನು ಎದುರಿಸುತ್ತಿದೆ. ಕನ್ನಡಿಗರಿಗಂತೂ ಈ ಕ್ಷಣವನ್ನು ನೋಡಲು ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ತಂಡವಾದ ಆರ್​ಸಿಬಿಯನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಹಪಹಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು ಎಲ್ಲೆಂದರಲ್ಲಿ ಬೆಂಗಳೂರಿಗರು ಆರ್​ಸಿಬಿ ಬಗ್ಗೆ ಬರೆದು ಹಾಕುತ್ತಿದ್ದಾರೆ. ಇದೀಗ ಸ್ಯಾಂಡಲ್​ವುಡ್ ನಟ ಬಾದ್​​ಶಾ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಹಾಕಿದ್ದಾರೆ.


    ಕನ್ನಡಿಗರಿಗೆ ಆರ್​ಸಿಬಿ ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ.ಈ ವರೆಗೆ ಯಾವುದೇ ಪಂದ್ಯದಲ್ಲೂ ಕಪ್ ಗೆಲ್ಲದಿದ್ದರು. ತಂಡ ಈ ಬಾರಿಯಾದರು ಕಪ್​ ಗೆಲ್ಲುತ್ತದೆ ಎನ್ನುತ್ತಾ ತಂಡಕ್ಕೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಕೂಡ ಆರ್​ಸಿಬಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದರಂತೆ ನಟ ಕಿಚ್ಚ ಸುದೀಪ್ ತಂಡಕ್ಕೆ ಶುಭಾಶಯ ಕೋರುವ ಮೂಲಕಇಂದಿನ ಪಂದ್ಯದ ಕಾತುರತೆ ವ್ಯಕ್ತಪಡಿಸಿದ್ದಾರೆ.


    ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಕಿಚ್ಚ, ‘ದಿನಗಳು ಮತ್ತೆ ಬಂದಿದೆ. ಹೊಸ ಸೀಸನ್ ಮತ್ತು ಹೊಸ ಆರಂಭ. ಅದ್ಭುತ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ. ಶುಭಾಶಯಗಳು’. ಎಂದು ಬರೆದುಕೊಂಡಿದ್ದಾರೆ.



    MOST SIXES:



    ಇನ್ನು ನಿರ್ದೇಶಕ ಸಿಂಪಲ್ ಸುನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಬಗ್ಗೆ ಆಗಾಗ ಬರೆದು ಹಾಕುತ್ತಿರುತ್ತಾರೆ. ತನ್ನ ನೆಚ್ಚಿನ ತಂಡದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.

    Published by:Harshith AS
    First published: