• ಹೋಂ
 • »
 • ನ್ಯೂಸ್
 • »
 • IPL
 • »
 • IPL 2020: ಪ್ರತಿ ವರ್ಷ ಇವರದು ಇದೇ ಕಥೆ: ಸ್ಟಾರ್ ಆಟಗಾರನ ಕುಟುಕಿದ ಸೆಹ್ವಾಗ್

IPL 2020: ಪ್ರತಿ ವರ್ಷ ಇವರದು ಇದೇ ಕಥೆ: ಸ್ಟಾರ್ ಆಟಗಾರನ ಕುಟುಕಿದ ಸೆಹ್ವಾಗ್

Virender Sehwag

Virender Sehwag

ಕಿಂಗ್ಸ್ ಇಲೆವೆನ್ ಪಂಜಾಬ್ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿತ್ತು. ಇದಕ್ಕೂ ಮುನ್ನ 2018ರ ಆವೃತ್ತಿಯಲ್ಲಿ 9 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.

 • Share this:

  ಐಪಿಎಲ್ 13ನೇ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಗ್ಲೆನ್ ಮ್ಯಾಕ್ಸ್​ವೆಲ್ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರುತ್ತಿಲ್ಲ. ಆರು ಪಂದ್ಯಗಳಲ್ಲಿ ಕಣಕ್ಕಿಳಿದರೂ ಮ್ಯಾಕ್ಸ್ ಬ್ಯಾಟ್​ನಿಂದ ಸಿಡಿದಿರುವುದು ಕೇವಲ 48 ರನ್​ಗಳು ಮಾತ್ರ. ಇಂತಹದೊಂದು ಕಳಪೆ ಪ್ರದರ್ಶನ ನೀಡುತ್ತಿರುವ ಪಂಜಾಬ್ ಆಟಗಾರನನ್ನು ಇದೀಗ ಮಾಜಿ ಕಿಂಗ್ಸ್​ ಇಲೆವೆನ್ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕಟುವಾಗಿ ಟೀಕಿಸಿದ್ದಾರೆ.


  ಕಿಂಗ್ಸ್ ಇಲೆವೆನ್ ಪಂಜಾಬ್ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿತ್ತು. ಇದಕ್ಕೂ ಮುನ್ನ 2018ರ ಆವೃತ್ತಿಯಲ್ಲಿ 9 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಈ ಅವಧಿಯಲ್ಲಿ ಆಸೀಸ್ ಕ್ರಿಕೆಟಿಗ 12 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 169 ರನ್​ಗಳು ಮಾತ್ರ. ಇದಾಗ್ಯೂ ಮ್ಯಾಕ್ಸ್​ವೆಲ್ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು. ಅಲ್ಲದೆ ಐಪಿಎಲ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ನಿರೀಕ್ಷೆ ಹುಟ್ಟುಹಾಕಿದ್ದರು. ಆದರೆ ಈ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ.


  ಈ ಬಗ್ಗೆ ಮಾತನಾಡಿರುವ ವೀರೇಂದ್ರ ಸೆಹ್ವಾಗ್, ಮ್ಯಾಕ್ಸ್​ವೆಲ್ ಕಳಪೆ ಪ್ರದರ್ಶನದ ಹಿಂದಿರುವ ಕಾರಣವೇನು ಎಂಬುದು ತಿಳಿಯುವುದು ಕಷ್ಟಕರ. ಏಕೆಂದರೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಮ್ಯಾಕ್ಸ್​ವೆಲ್ 2 ವಿಕೆಟ್ ಉರುಳಿದಾಗ ಕ್ರೀಸ್​ಗೆ ಆಗಮಿಸಿದ್ದರು. ಈ ಹಂತದಲ್ಲಿ ಸಾಕಷ್ಟು ಓವರ್​ಗಳನ್ನು ಆಡುವ ಅವಕಾಶವಿತ್ತು. ಆದರೂ ವಿಫಲರಾದರು.


  ಇನ್ನು ಇದಕ್ಕೂ ಮೊದಲು ಡೆತ್ ಓವರ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಯಾವುದೇ ಒತ್ತಡವಿರಲಿಲ್ಲ. ಆದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಬಂದ ವೇಗದಲ್ಲೇ ವಿಕೆಟ್ ಒಪ್ಪಿಸುತ್ತಿದ್ದಾರೆ. ಪ್ರತಿವರ್ಷ ಇವರದು ಇದೇ ಕಥೆ. ಹೀಗಾಗಿ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸೆಹ್ವಾಗ್ ಹೇಳಿದರು.


  ಆದರೆ ಇಂತಹ ಆಟಗಾರರು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಹುಬೇಗ ಖರೀದಿಯಾಗುತ್ತಾರೆ. ಫಲಿತಾಂಶ ಮಾತ್ರ ಒಂದೇ ರೀತಿಯಲ್ಲಿರುತ್ತದೆ. ಇವರನ್ನು ಬಿಟ್ಟು ಫ್ರಾಂಚೈಸಿ ಮುಂದೆ ಸಾಗುವುದು ತಂಡಕ್ಕೆ ಒಳ್ಳೆಯದು ಎಂದು ಸೆಹ್ವಾಗ್ ಕಿಂಗ್ಸ್ ಇಲೆವೆನ್ ಫ್ರಾಂಚೈಸಿಗೆ ಕಿವಿಮಾತು ಹೇಳಿದರು.
  POINTS TABLE:  SCHEDULE TIME TABLE:  ORANGE CAP:  PURPLE CAP:  RESULT DATA:  MOST SIXES:

  ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!

  Published by:zahir
  First published: