CSK vs MI- ಸಿಎಸ್​ಕೆಯ ಮೂವರು ಬಿಗ್ ಸ್ಟಾರ್​ಗಳು ಇಂದು ಆಡೋದು ಅನುಮಾನ

Big Stars Absence- ಚೆನ್ನೈ ತಂಡದ ಇಬ್ಬರು ಬಿಗ್ ಸ್ಟಾರ್ಗಳು ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿದ್ದು ಇವತ್ತಿನ ಪಂದ್ಯದಲ್ಲಿ ಆಡುವುದು ಅನುಮಾನ. ಹಾಗೆಯೇ ಸ್ಯಾಮ್ ಕುರನ್ ಅವರು ಯುಎಇಗೆ ಬಂದು ನಾಲ್ಕು ದಿನಗಳಾದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ ಅವರೂ ಆಡುವುದಿಲ್ಲ.

ರೋಹಿತ್ ಶರ್ಮಾ ಮತ್ತು ಎಂ ಎಸ್ ಧೋನಿ

ರೋಹಿತ್ ಶರ್ಮಾ ಮತ್ತು ಎಂ ಎಸ್ ಧೋನಿ

 • Cricketnext
 • Last Updated :
 • Share this:
  ದುಬೈ, ಸೆ. 19: ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳೆಸಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಇಂದು ಯುಎಇಯಲ್ಲಿ ಎರಡನೇ ಲೆಗ್ ಶುರುವಾಗುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಎಂದಿನಂತೆ ಬಲಯುತವಾಗಿ ತೋರುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಸ್ಟಾರ್​ಗಳಾದ ಫ್ಯಾಫ್ ಡುಪ್ಲೆಸಿಸ್ ಮತ್ತು ಸ್ಯಾಮ್ ಕುರನ್ ಇಂದು ಕಣಕ್ಕಿಳಿಯುವುದು ಅನುಮಾನ. ಇಂಗ್ಲೆಂಡ್​ನ ಆಟಗಾರ ಸ್ಯಾಮ್ ಕುರನ್ ಅವರು ಯುಎಇಗೆ ಬಂದಿದ್ದು ಕೆಲವೇ ದಿನಗಳ ಹಿಂದಷ್ಟೇ. ಯುಎಇಯಲ್ಲಿ ಕಠಿಣ ಕೋವಿಡ್ ನಿಯಮಗಳು ಚಾಲ್ತಿಯಲ್ಲಿದ್ದು, ಕಡ್ಡಾಯವಾಗಿ ಕ್ವಾರಂಟೈನ್ ಇರಬೇಕಾಗುತ್ತದೆ. ಹೀಗಾಗಿ, ಅವರು ಇನ್ನಷ್ಟು ದಿನಗಳ ಕಾಲ ಹೋಟೆಲ್ ರೂಮ್​ನಿಂದ ಹೊರಗೆ ಕಾಲಿಡುವಂತಿಲ್ಲ.

  ಇನ್ನು, ತೊಡೆ ಸ್ನಾಯು (Groin Injury) ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೆಸ್ಟ್ ಇಂಡೀಸ್ ಆಲ್​ರೌಂಡರ್ ಡ್ವೇನ್ ಬ್ರಾವೋ ಮತ್ತು ದಕ್ಷಿಣ ಆಫ್ರಿಕಾದ ಫ್ಯಾಪ್ ಡುಪ್ಲೆಸಿಸ್ ಅವರು ಚೇತರಿಸಿಕೊಂಡಿದ್ದಾರೆನ್ನಲಾಗಿದೆ. ಆದರೆ, ಡುಪ್ಲೆಸಿಸ್ ಅವರು ನಿನ್ನೆ ಟೀಮ್​ನ ತರಬೇತಿಗೆ ಹಾಜರಾಗಿದ್ದಾರಾದರೂ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವೇ ಇದೆ.

  ಡ್ವೇನ್ ಬ್ರಾವೋ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಒಂದೆರಡು ಪಂದ್ಯಗಳ ಬಳಿಕ ಆಡಬಹುದು ಎಂದು ಕೆಲ ಮೂಲಗಳು ಹೇಳುತ್ತಿವೆ. ಆದರೆ, ಬ್ರಾವೋ ಅವರು ಫಿಟ್ ಆಗಿದ್ದಾರೆ ಎಂದು ಸಿಎಸ್​​ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಹೀಗಾಗಿ ಬ್ರಾವೋ ಆಡುವ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

  ದುಬೈನ ಈ ಪಿಚ್ ಸ್ಪಿನ್ನರ್​​ಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಸಿಎಸ್​ಕೆ ತಂಡದಲ್ಲಿ ಇಮ್ರಾನ್ ತಾಹಿರ್, ರವೀಂದ್ರ ಜಡೇಜಾ ಅವರು ಬೌಲಿಂಗ್ ಟ್ರಂಪ್ ಕಾರ್ಡ್ ಎನಿಸಲಿದ್ಧಾರೆ.

  ಇನ್ನು, ಮುಂಬೈ ಇಂಡಿಯನ್ಸ್ ತಂಡ ಮೇಲ್ನೋಟಕ್ಕೆ ಶಕ್ತಿಯುತವಾಗಿ ತೋರುತ್ತಿದೆ. ರೋಹಿತ್ ಶರ್ಮಾ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್​ಗೆ ಶಕ್ತಿಯಾಗಿದ್ಧಾರೆ. ಸ್ಪಿನ್ನರ್​ಗಳಾದ ರಾಹುಲ್ ಚಾಹರ್ ಅಥವಾ ಜಯಂತ್ ಯಾದವ್ ಅವರ ಪೈಕಿ ಒಬ್ಬರನ್ನ ಇವತ್ತಿನ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

  ಮುಂಬೈ, ಚೆನ್ನೈ ತಂಡಗಳನ್ನ ಹೋಲಿಸಿದಾಗ….

  ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹಣಾಹಣಿ ಕ್ರಿಕೆಟ್ ರಸಿಕರಿಗೆ ರಸದೌತಣವಿದ್ದಂತೆ. ಅಂತಿಮವಾಗಿ ಒಂದೆರಡು ಹೆಜ್ಜೆ ಮುಂದಿರುವುದು ಮುಂಬೈ ಇಂಡಿಯನ್ಸ್ ತಂಡವೇ. ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದರೆ, ಸಿಎಸ್​ಕೆ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಎರಡು ತಂಡಗಳು ಐಪಿಎಲ್​ನಲ್ಲಿ 32 ಬಾರಿ ಸಂಧಿಸಿದ್ದು, ಮುಂಬೈ 19 ಪಂದ್ಯಗಳಲ್ಲಿ ವಿಜಯಶಾಲಿಯಾಗಿದೆ. ಸಿಎಸ್​ಕೆ 13ರಲ್ಲಿ ಗೆದ್ದಿದೆ. ಇವೆರೆಡು ಆಡಿರುವ ಹಿಂದಿನ ಆರು ಪಂದ್ಯಗಳಲ್ಲಿ ಮುಂಬೈ ತಂಡವೇ 5 ಬಾರಿ ಗೆದ್ದಿದೆ.

  ಇದನ್ನೂ ಓದಿ: Virender Sehwag- ಧೋನಿ ಮೆಂಟರ್ ಆಗಿದ್ದರಿಂದ ಯಾರಿಗೆ ಹೆಚ್ಚು ಲಾಭ? ಸೆಹ್ವಾಗ್ ಉತ್ತರ ಇದು

  ತಂಡಗಳ ಹೋಲಿಕೆ ಮಾಡಿದರೆ ಮುಂಬೈ ಇಂಡಿಯನ್ಸ್ ತಂಡ ಮಹಾಬಲಿಷ್ಠವಾಗಿ ತೋರುತ್ತದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ತಂಡ ಎಲ್ಲಾ ಆಯಾಮಗಳಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್​ನಲ್ಲಿ ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್ ಅವರು ಪ್ರಮುಖ ಬ್ಯಾಟ್ಸ್​ಮನ್​ಗಳು. ಕ್ವಿಂಟನ್ ಡೀಕಾಕ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಅವರೂ ಉತ್ತಮ ಬ್ಯಾಟಿಂಗ್ ಮಾಡಬಲ್ಲರು. ಬೌಲಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಟ್ರಂಪ್ ಕಾರ್ಡ್​ಗಳಾಗಿದ್ದಾರೆ.

  ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ನಾಯಕತ್ವವೇ ಮುಖ್ಯ ಅಂಶ. ಮೊಯೀನ್ ಅಲಿ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಮುಂಬೈ ತಂಡವನ್ನು ಸೋಲಿಸಲು ಸಿಎಸ್​ಕೆಗೆ ಧೋನಿಯ ತಂತ್ರಗಾರಿಕೆ ನೆರವಿಗೆ ಬರಬಹುದು.

  ಎಲ್ಲೆಲ್ಲಿ ಪ್ರಸಾರ: ಈ ಬಾರಿಯ ಐಪಿಎಲ್ 2021 ಟೂರ್ನಿಯ ಎಲ್ಲಾ ಪಮದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ಪ್ರಸಾರವಾಗುತ್ತವೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಹಾಗು ಜಿಯೋ ಟಿವಿಯಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು

  ಸಂಭಾವ್ಯ ತಂಡಗಳು:

  ಚೆನ್ನೈ ಸೂಪರ್ ಕಿಂಗ್ಸ್ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಋತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಇಮ್ರಾನ್ ತಾಹಿರ್, ಲುಂಗಿ ಎನ್​ಗಿಡಿ/ಜೋಶ್ ಹೇಜರ್​ವುಡ್.

  ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡೀ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಅಡಂ ಮಿಲ್ನೆ/ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್/ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ
  Published by:Vijayasarthy SN
  First published: