ಕಿಂಗ್ಸ್ ಇಲವೆನ್ ಪಂಜಾಬ್ ಬಗ್ಗೆ ಸಲ್ಮಾನ್ ಖಾನ್ ಅಣಕಿಸಿ​ ಮಾಡಿದ್ದ ಹಳೆಯ ಟ್ವೀಟ್ ವೈರಲ್

2014ರಲ್ಲಿ ಸಲ್ಮಾನ್​ ಖಾನ್​ ಮಾಡಿದ ಟ್ವೀಟ್​ ವೈರಲ್​ ಆಗಿದೆ. 2014 ಮೇ 28ರಂದು ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಪಂಜಾಬ್​ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದಲ್ಲಿ ಪಂಜಾಬ್​ ತಂಡ ಸೋತಿತ್ತು.

ಸಲ್ಮಾನ್​ ಖಾನ್​ ಟ್ವೀಟ್

ಸಲ್ಮಾನ್​ ಖಾನ್​ ಟ್ವೀಟ್

 • Share this:
  ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡ ಈಗ ನಾಲ್ಕನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಪ್ಲೇಆಫ್​ಗೆ ಏರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸತತ ಐದು ಗೆಲುವು ದಾಖಲಿಸಿರುವ ಪಂಜಾಬ್​ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈ ಮಧ್ಯೆ, ಪಂಜಾಬ್​ ತಂಡದ ಬಗ್ಗೆ ಸಲ್ಮಾನ್​ ಖಾನ್​ ಮಾಡಿರುವ ಟ್ವೀಟ್​ ತುಂಬಾನೇ ವೈರಲ್​ ಆಗಿದೆ. ಪಂಜಾಬ್​ ತಂಡ ಆರಂಭದಲ್ಲಿ ಆರ್​ಸಿಬಿ ವಿರುದ್ಧ ಗೆದ್ದಿದ್ದು ಹೊರತುಪಡಿಸಿದರೆ ಮತ್ತಾವುದೇ ತಂಡದ ಜೊತೆ ಗೆಲುವು ಕಂಡಿರಲಿಲ್ಲ. ನಂತರ ಡೆಲ್ಲಿ, ಮುಂಬೈ, ಆರ್​ಸಿಬಿಯಂಥ ಬಲಿಷ್ಠ ತಂಡಗಳನ್ನು ಅನಾಯಾಸವಾಗಿ ಬಗ್ಗು ಬಡಿದಿತ್ತು. ಅಲ್ಲದೆ, ಪ್ಲೇಆಫ್​ಗೆ ಸ್ಥಾನ ಗಿಟ್ಟಿಸಿಕೊಳ್ಳಲು ಸೆಣೆಸಾಟ ನಡೆಸುತ್ತಿದೆ.

  ಈ ಮಧ್ಯೆ 2014ರಲ್ಲಿ ಸಲ್ಮಾನ್​ ಖಾನ್​ ಮಾಡಿದ ಟ್ವೀಟ್​ ವೈರಲ್​ ಆಗಿದೆ. 2014 ಮೇ 28ರಂದು ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಪಂಜಾಬ್​ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ಪಂದ್ಯದಲ್ಲಿ ಪಂಜಾಬ್​ ತಂಡ ಸೋತಿತ್ತು. ಈ ವೇಳೆ ಟ್ವೀಟ್​ ಮಾಡಿದ್ದ ಸಲ್ಮಾನ್​ ಖಾನ್​, ಜಿಂಟಾ ತಂಡ ಗೆದ್ದಿದೆಯಾ ಎಂದು ಕೇಳಿದ್ದರು.

  2020ರಲ್ಲಿ ಪಂಜಾಬ್​ ತಂಡ ಸತತ ಐದು ಪಂದ್ಯ ಗೆದ್ದ ಬೆನ್ನಲ್ಲೇ ಈ ಟ್ವೀಟ್​ ತುಂಬಾನೇ ವೈರಲ್​ ಆಗುತ್ತಿದೆ. ಅಲ್ಲದೆ, ಸಾಕಷ್ಟು ಮಂದಿ ಹೌದು, ಪ್ರೀತಿ ಜಿಂಟಾ ತಂಡ ಗೆದ್ದಿದೆ ಎಂದಿದ್ದಾರೆ. ಇನ್ನೂ ಕೆಲವರು ಈ ಟ್ವೀಟ್​ಅನ್ನು ಮೀಮ್​ಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ಟ್ರೋಲ್ ಆದ ಟ್ವೀಟ್
  Published by:Rajesh Duggumane
  First published: