IPL 2020: CSK ಸೋಲಿಗೆ ಮನ ಮಿಡಿಯುವ ಕವಿತೆ ಪೋಸ್ಟ್ ಮಾಡಿದ ಸಾಕ್ಷಿ ಧೋನಿ

ಸಿಎಸ್​ಕೆ ಇನ್ನು ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಈ ಮ್ಯಾಚ್​ಗಳಲ್ಲಿ ಭರ್ಜರಿ ಜಯ ಸಾಧಿಸಿದರೂ ಪ್ಲೇ ಆಫ್ ಪ್ರವೇಶ ಕಷ್ಟಸಾಧ್ಯ. ಹೀಗಾಗಿಯೇ ತಂಡದ ನಿರ್ಗಮನ ಸಿಎಸ್​ಕೆ ಅಭಿಮಾನಿಗಳನ್ನು ಬೇಸರಕ್ಕೆ ದೂಡಿದೆ.

Sakshi Dhoni

Sakshi Dhoni

  • Share this:
    ಮೂರು ಬಾರಿಯ ಚಾಂಪಿಯನ್, ಐದು ಬಾರಿ ಫೈನಲ್ ಆಡಿದ ತಂಡ, 10 ಬಾರಿ ಪ್ಲೇ ಆಫ್ ಪ್ರವೇಶಿಸಿದ ಧೋನಿ ನಾಯಕತ್ವದ ಸಿಎಸ್​ಕೆ ತಂಡವು ಈ ಬಾರಿ ಲೀಗ್​ ಹಂತದಿಂದಲೇ ನಿರ್ಗಮಿಸಿ ನಿರಾಸೆ ಮೂಡಿಸಿದೆ. ಅದರಲ್ಲೂ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಹೀನಾಯ ಪ್ರದರ್ಶನದೊಂದಿಗೆ ಹೊರಬೀಳುವುದರಲ್ಲಿದೆ.

    ಸಿಎಸ್​ಕೆ ಇನ್ನು ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಈ ಮ್ಯಾಚ್​ಗಳಲ್ಲಿ ಭರ್ಜರಿ ಜಯ ಸಾಧಿಸಿದರೂ ಪ್ಲೇ ಆಫ್ ಪ್ರವೇಶ ಕಷ್ಟಸಾಧ್ಯ. ಹೀಗಾಗಿಯೇ ತಂಡದ ನಿರ್ಗಮನ ಸಿಎಸ್​ಕೆ ಅಭಿಮಾನಿಗಳನ್ನು ಬೇಸರಕ್ಕೆ ದೂಡಿದೆ. ಅತ್ತ ಮಹೇಂದ್ರ ಸಿಂಗ್ ಧೋನಿ ಕೂಡ ಇನ್ನುಳಿದಿರುವುದು ಕೇವಲ 12 ಗಂಟೆಗಳು ಮಾತ್ರ, ಎಷ್ಟು ಸಾಧ್ಯವೋ ಮೈದಾನದಲ್ಲಿ ಅಷ್ಟು ಎಂಜಾಯ್ ಮಾಡಿ ಆಡಬೇಕು ಎಂದು ಚೆನ್ನೈ ಆಟಗಾರರಿಗೆ ಕರೆ ಕೊಟ್ಟಿದ್ದಾರೆ.

    ಇತ್ತ ಸಿಎಸ್​ಕೆ ತಂಡ ಟೂರ್ನಿಯಿಂದ ಹೊರಬೀಳುವುದು ಖಚಿತವಾಗುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಹ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಕವಿತೆಯೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ 'ಇದು ಬರೀ ಆಟ.. ಕೆಲವೊಂದು ನೀನು ಗೆಲ್ಲಬಹುದು ಕೆಲವೊಂದನ್ನು ಸೋಲಬಹುದು!! ಕಳೆದ ವರ್ಷಗಳು ಅನೇಕ ರೋಚಕ ಗೆಲುವುಗಳಿಗೆ ಸಾಕ್ಷಿಯಾಗಿವೆ.

    ಒಂದನ್ನು ಸಂಭ್ರಮಿಸಿದರೆ, ಮತ್ತೊಂದು ಸೋಲಿನ ಸಂಕಟ ತಂದಿವೆ. ಕೆಲವು ಪ್ರಮುಖ ಪ್ರತಿಕ್ರಿಯೆಗಳಾಗಿದ್ದರೆ ಇನ್ನು ಕೆಲವು ಅದರಂತಿರುವುದಿಲ್ಲ. ಕೆಲವರು ಗೆಲ್ಲುತ್ತಾರೆ, ಮತ್ತೆ ಕೆಲವರು ಸೋಲುತ್ತಾರೆ, ಕೆಲವೊಂದನ್ನು ಕಳೆದುಕೊಳ್ಳುತ್ತೇವೆ...ನಮ್ಮ ಭಾವನೆಗಳೊಂದಿಗೆ ಕ್ರೀಡಾಸ್ಪೂರ್ತಿ ಮೆರೆಯೋಣ...ಇದು ಬರೀ ಆಟ..!! ಎಂದು ಸಾಕ್ಷಿ ಧೋನಿ ಬರೆದುಕೊಂಡಿದ್ದಾರೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
    Published by:zahir
    First published: