news18-kannada Updated:November 4, 2020, 4:39 PM IST
IPL
ಫಾಸ್ಟ್ ಬೌಲರ್ಗಳು ಬೌಲಿಂಗ್ಗೆ ಬಂದಾಗ ಬ್ಯಾಟ್ಸ್ಮೆನ್ಗಳು ತಲೆಯ ರಕ್ಷಣೆಗೆ ಹೆಲ್ಮೆಟ್ ಧರಿಸುತ್ತಾರೆ. ಆದರೆ, ಸ್ಪಿನ್ನರ್ಗಳು ಬಂದಾಗ ಹೆಲ್ಮೆಟ್ ಬದಲು ಕ್ಯಾಪ್ ಧರಿಸುತ್ತಾರೆ. ಆದರೆ, ಫಾಸ್ಟ್ ಬೌಲರ್ ಆಗಲಿ ಅಥವಾ ಸ್ಪಿನ್ನರ್ ಆಗಲಿ ಯಾವಾಗಲೂ ಬ್ಯಾಟ್ಸ್ಮನ್ಗಳು ಹೆಲ್ಮೇಟ್ ಧರಿಸೋದನ್ನು ಕಡ್ಡಾಯ ಮಾಡಬೇಕು ಎಂದು ಸಚಿನ್ ತೆಂಡೂಲ್ಕರ್ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಪಂಜಾಬ್ ನಡುವಿನ ಮ್ಯಾಚ್.
ಬ್ಯಾಟಿಂಗ್ಗೆ ನಿಂತಿದ್ದ ಹೈದರಾಬಾದ್ ಆಲ್ ರೌಂಡರ್ ವಿಜಯ್ ಶಂಕರ್ ರನ್ ತೆಗೆಯುತ್ತಿದ್ದರು. ಈ ವೇಳೆ ರನ್ಔಟ್ ಮಾಡುವ ಪ್ರಯತ್ನದಲ್ಲಿದ್ದ ಪಂಜಾಬ್ ಆಟಗಾರರು ಬಾಲ್ಅನ್ನು ವೇಗವಾಗಿ ಎಸೆದಿದ್ದರು. ಈ ಬಾಲ್ ವಿಜಯ್ ಶಂಕರ್ ತಲೆಗೆ ತಾಕಿತ್ತು. ಅವರು ಹಾಕಿದ್ದ ಹೆಲ್ಮೆಟ್ ಅವರನ್ನು ರಕ್ಷಣೆ ಮಾಡಿತ್ತು.
ಈ ಘಟನೆಯ ವಿಡಿಯೋವನ್ನು ಹಾಕಿರುವ ಸಚಿನ್, ಬ್ಯಾಟ್ಸ್ಮನ್ಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡಲೇಬೇಕು ಎಂದು ಕೋರಿದ್ದಾರೆ. ಆಟ ವೇಗ ಪಡೆದುಕೊಂಡಿದೆ. ಆದರೆ, ಸುರಕ್ಷೆಗೊಳ್ಳುತ್ತಿದ್ದೀವೆಯೇ?ಸ್ಪಿನ್ನರ್ ಇರಲಿ ಫಾಸ್ಟ್ ಬೌಲರ್ ಇರಲಿ ಹೆಲ್ಮೆಟ್ ಕಡ್ಡಾಯ ಮಾಡಬೇಕು. ಈ ಬಗ್ಗೆ ಐಸಿಸಿ ಗಮನ ಹರಿಸಬೇಕು ಎಂದು ಕೋರಿದ್ದಾರೆ.
ಇನ್ನು ಸಚಿನ್ ಆಗ್ರಹಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಹೈದರಾಬಾದ್ ತಂಡದ ಕೀಪರ್ ಹಾಗೂ ಓಪನರ್ ಪ್ರಗ್ಯಾನ್ ಓಜಾ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.
Published by:
Rajesh Duggumane
First published:
November 4, 2020, 4:39 PM IST