ಕೊರೋನಾ ರೋಗಿಗಳ ನೆರವಿಗೆ ನಿಂತ ಸಚಿನ್: ದೊಡ್ಡ ಮೊತ್ತ ದೇಣಿಗೆ ನೀಡಿದ ಕ್ರಿಕೆಟ್ ದಿಗ್ಗಜ

ಕೆಕೆಆರ್ ತಂಡದ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಕ್ಸಿಜನ್ ಪೂರೈಕೆಗಾಗಿ ಪಿಎಂ ಫಂಡ್​ಗೆ ಸುಮಾರು 37 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ಬೆನ್ನಲ್ಲೇ ಐಪಿಎಲ್​ನಲ್ಲಿ ವಿಶ್ಲೇಷಣೆಗಾರರಾಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀಹ ಸುಮಾರು 41 ಲಕ್ಷ ರೂ. ಸಹಾಯಹಸ್ತ ಚಾಚಿದ್ದರು.

Sachin Tendulkar

Sachin Tendulkar

 • Share this:
  ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ವಸ್ತುಗಳ ಅಭಾವ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ರೋಗಿಗಲು ಆಕ್ಸಿಜನ್ ಕೊರತೆಯಿಂದ ಅಸುನೀಗುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇದೀಗ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ. ದೆಹಲಿ ಮೂಲದ ನಿಧಿ ಸಂಗ್ರಹ ಸಂಸ್ಥೆಯಾದ ಮಿಷನ್ ಆಕ್ಸಿಜನ್​ಗೆ ಸಚಿನ್ ಈ ದೇಣಿಗೆ ನೀಡಿದ್ದು, ಈ ಮೂಲಕ ಆಕ್ಸಿಜನ್ ಪೂರೈಕೆಗೆ ನೆರವಾಗಿದ್ದಾರೆ.

  ಮಿಷನ್ ಆಕ್ಸಿಜನ್ ಸಂಸ್ಥೆಯು ವಿದೇಶಗಳಿಂದ ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ತರಿಸಿಕೊಳ್ಳುತ್ತಿದ್ದು, ಈ ಮೂಲಕ ದೇಶದಲ್ಲಿನ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದೆ. ಇದೀಗ ಮತ್ತಷ್ಟು ಆಕ್ಸಿಜನ್ ಪೂರೈಸುವಂತೆ ಕೋರಿ ಸಚಿನ್ ತೆಂಡೂಲ್ಕರ್ ಈ ಸಂಸ್ಥೆಗೆ ಸಚಿನ್ 1 ಕೋಟಿ ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.  ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಇತರೆ ರೋಗಿಗಳ ನೆರವಿಗೂ ಮಾಸ್ಟರ್ ಬ್ಲಾಸ್ಟರ್ ಮುಂದಾಗಿದ್ದಾರೆ. ಇದಕ್ಕೂ ಮುನ್ನ ಕೆಕೆಆರ್ ತಂಡದ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಕ್ಸಿಜನ್ ಪೂರೈಕೆಗಾಗಿ ಪಿಎಂ ಫಂಡ್​ಗೆ ಸುಮಾರು 37 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ಬೆನ್ನಲ್ಲೇ ಐಪಿಎಲ್​ನಲ್ಲಿ ವಿಶ್ಲೇಷಣೆಗಾರರಾಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀಹ ಸುಮಾರು 41 ಲಕ್ಷ ರೂ. ಸಹಾಯಹಸ್ತ ಚಾಚಿದ್ದರು. ಇದೀಗ ಸಚಿನ್ ತೆಂಡೂಲ್ಕರ್ ಕೂಡ ಕೋವಿಡ್ ಹೋರಾಟಕ್ಕೆ ಕೈ ಚಾಚಿದ್ದು, ಈ ಮೂಲಕ ಮತ್ತಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ.
  Published by:zahir
  First published: