IPL 2020, RR vs RCB: ಐಪಿಎಲ್​ನಲ್ಲಿಂದು ಎರಡು ಪಂದ್ಯ: ಆರ್​ಸಿಬಿಗೆ ಆರ್​ಆರ್​​ ಚಾಲೆಂಜ್: ಡೆಲ್ಲಿ- ಸಿಎಸ್​ಕೆ ಮುಖಾಮುಖಿ!

ಕೊಹ್ಲಿ ಪಡೆ ಕಳೆದ ಕಿಂಗ್ಸ್ ಇಲೆವೆನ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಮುಂದಾಗಿ ಕೈಸುಟ್ಟುಕೊಂಡಿದೆ. ಹೀಗಾಗಿ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ.

RR vs RCB and DC vs CSK

RR vs RCB and DC vs CSK

 • Share this:
  13ನೇ ಆವೃತ್ತಿಯ ಐಪಿಎಲ್​ನಲ್ಲಿಂದು ಎರಡು ಪ್ರಮುಖ ಪಂದ್ಯ ನಡೆಯಲಿದೆ. ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿರುವ ಮೊದಲ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿವೆ. ಮತ್ತೊಂದು ಪಂದ್ಯ ಶಾರ್ಜಾದಲ್ಲಿ ನಡೆಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಸೆಣೆಸಾಟ ನಡೆಸಲಿವೆ.

  ಆರ್​ಸಿಬಿ ತಂಡ ಇಲ್ಲಿಯವರೆಗೆ ಆಡಿದ 8 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿ 3 ಪಂದ್ಯಗಳನ್ನು ಕೈಚೆಲ್ಲಿದೆ. ಇತ್ತ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ರಾಜಸ್ಥಾನ ತಂಡ ಆಡಿದ 8 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ.

  IPL 2020: ಎಚ್ಚರಿಕೆ: ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ಮ್ಯಾಚ್ ನೋಡ್ಬೇಡಿ..!

  ಕೊಹ್ಲಿ ಪಡೆ ಕಳೆದ ಕಿಂಗ್ಸ್ ಇಲೆವೆನ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಮುಂದಾಗಿ ಕೈಸುಟ್ಟುಕೊಂಡಿದೆ. ಹೀಗಾಗಿ ಕಮ್​ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ. ತಂಡದಲ್ಲಿ ಬದಲಾವಣೆ ಗಾಳಿ ಬೀಸುವುದು ಅನುಮಾನ. ಬೌಲಿಂಗ್​ನಲ್ಲಿ ಉಸುರು ಉದಾನ ಬದಲು ಡೇಲ್ ಸ್ಟೈನ್ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದರೂ ಉತ್ತಮ ಆರಂಭ ಪಡೆದುಕೊಳ್ಳಬೇಕಾದ ಒತ್ತಡದಲ್ಲಿದೆ.

  ಇತ್ತ ರಾಜಸ್ಥಾನ ತಂಡ ಮಧ್ಯಮ ಕ್ರಮಾಂಕದ ದೌರ್ಬಲ್ಯದಿಂದಾಗಿ ಡೆಲ್ಲಿ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿತ್ತು. ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​ ಆಗಮನ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಎಲ್ಲಾ ಆಟಗಾರರು ಕೂಡ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಕೆಲ ಸಮಯ ಸ್ಫೋಟಕ ಬ್ಯಾಟಿಂಗ್ ನಡೆಸಿ ಔಟ್​ ಆಗಿ ಪೆವಿಲಿಯನ್ ಸೇರುತ್ತಿದ್ದಾರೆ.

  ಕಳೆದ ಪಂದ್ಯ ಸೋತ ಬಳಿಕ ಪ್ರತಿಕ್ರಿಯಿಸಿದ್ದ ನಾಯಕ ಸ್ಟೀವ್ ಸ್ಮಿತ್, ನಾವು ಉತ್ತಮ ಜೊತೆಯಾಟ ಆಡುವಲ್ಲಿ ವಿಫಲರಾದೆವು. ಇದೇ ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದಿದ್ದರು. ಹೀಗಾಗಿ ಹಿಂದಿನ ತಪ್ಪನ್ನು ಸರಿಪಡಿಸಿ ಇಂದು ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದು ನೋಡಬೇಕಿದೆ.

  ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಜಯ ಗಳಿಸಿದ್ರೆ, 9 ಪಂದ್ಯಗಳಲ್ಲಿ ಆರ್​ಸಿಬಿ ಗೆಲುವು ಕಂಡಿದೆ. ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ.

  RCB: ಆರ್​ಸಿಬಿಗೆ ಶುರುವಾಯ್ತು ಕಂಟಕ: ಮುಂದಿನ ಪಂದ್ಯಕ್ಕೂ ಮುನ್ನ ಸರಿಪಡಿಸಬೇಕಿದೆ ಈ 3 ಅಂಶ

  ಇನ್ನೂ ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಧೋನಿ ತಂಡ ಅಯ್ಯರ್ ಪಡೆಗೆ ಸವಾಲೋಡ್ಡಲಿದೆ. ಟೂರ್ನಿ ಇತಿಹಾಸ ಗಮನಿಸಿದಾಗ ಸಿಎಸ್‌ಕೆ ತಂಡ ಪ್ರಾಬಲ್ಯ ಸಾಧಿಸಿದ್ದರೂ, ಹಾಲಿ ಫಾರ್ಮ್​​‌ನಲ್ಲಿ ಡೆಲ್ಲಿ ತಂಡವೇ ಫೇವರಿಟ್ ಎನಿಸಿದೆ. ಅಂಕಪಟ್ಟಿಯಲ್ಲೂ ಡೆಲ್ಲಿ ತಂಡ ಪ್ರಬಲ ಸ್ಥಾನದಲ್ಲಿದ್ದರೆ, ಸಿಎಸ್‌ಕೆ ತಂಡ ಇನ್ನೊಂದು ಪಂದ್ಯ ಸೋತರೂ, ಅಪಾಯದಲ್ಲಿ ಸಿಲುಕುವ ಒತ್ತಡದಲ್ಲಿದೆ.

  ಹಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಸಿಎಸ್​ಕೆ ಆಟಗಾರರು, ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರು. ಓಪನರ್ ಆಗಿ ಬಂದ ಸ್ಯಾಮ್ ಕರ್ರನ್​ ಭರವಸೆ ಮೂಡಿಸಿದ್ದಾರೆ. ಸಿಎಸ್​ಕೆ ಬೌಲರ್​ಗಳು ಕೂಡ​ ಉತ್ತಮವಾಗಿ ಪ್ರದರ್ಶನ ನೀಡಿದ್ದರು.

  ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಶಿಖರ್ ಧವನ್ ಫಾರ್ಮ್​ ಕಂಡುಕೊಂಡಿದ್ದು ಪೃಥ್ವಿ ಶಾ ಜೊತೆಸೇರಿ ದೊಡ್ಡ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಶ್ರೇಯಸ್ ಐಯ್ಯರ್ ಕಳೆದ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಕಾರಣ ಇಂದು ಆಡುವ ಬಗ್ಗೆ ನಿಖರ ಮಾಹಿತಿ ಇಲ್ಲ. ಬೌಲಿಂಗ್ ವಿಭಾಗದಲ್ಲೂ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ.

  ಉಭಯ ತಂಡಗಳು ಇಲ್ಲಿಯವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 15 ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿದೆ.
  Published by:Vinay Bhat
  First published: