MI vs RR- ರಾಯಲ್ಸ್ ವಿರುದ್ಧ ಮುಂಬೈಗೆ ಭರ್ಜರಿ ಜಯ; ಪ್ಲೇ ಆಫ್ ಕನಸು ಜೀವಂತ

IPL 2021, Match 51: Rajasthan Royals vs Mumbai Indians Match: ರಾಜಸ್ಥಾನ್ ರಾಯಲ್ಸ್ ತಂಡದ 90 ರನ್ಗೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ 8.2 ಓವರ್ನಲ್ಲಿ ಗುರಿ ಮುಟ್ಟಿ 8 ವಿಕೆಟ್ಗಳಿಂದ ಜಯಭೇರಿ ಭಾರಿಸಿತು. ಈ ಸೋಲಿನೊಂದಿಗೆ ರಾಯಲ್ಸ್ ತಂಡ ಪ್ಲೇ ಆಫ್​ನಿಂದ ಹೊರಬಿದ್ದರೆ ಮುಂಬೈ ಆಸೆ ಜೀವಂತವಾಗಿದೆ.

ಇಶಾನ್ ಕಿಶನ್

ಇಶಾನ್ ಕಿಶನ್

 • Share this:
  ಶಾರ್ಜಾ, ಅ. 05: ಐಪಿಎಲ್​ನಲ್ಲಿ ಸಾಮಾನ್ಯವಾಗಿ ಟೂರ್ನಿಯಲ್ಲಿ ನಿಧಾನವಾಗಿ ಸಾಗುವ ಮುಂಬೈ ಇಂಡಿಯನ್ಸ್ ತಂಡ ಕೊನೆಕೊನೆಯಲ್ಲಿ ಫೀನಿಕ್ಸ್​ನಂತೆ ಮೇಲೇರಿ ಅಟ್ಟಹಾಸ ಮೆರೆಯುತ್ತದೆ. ಈಗಲೂ ಅದೇ ಆಗುತ್ತಿರುವಂತೆ ತೋರುತ್ತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಅಮೋಘ ಗೆಲುವು ಸಾಧಿಸಿದೆ. ಗೆಲ್ಲಲು ಪಡೆದ 91 ರನ್ ಗುರಿಯನ್ನ ಮುಂಬೈ ಇಂಡಿಯನ್ಸ್ ಕೇವಲ 8.2 ಓವರ್​ಗಳಲ್ಲಿ 8 ವಿಕೆಟ್ ಕೈಲಿರುಂತೆ ಗೆದ್ದಿದೆ. ಈ ಮೂಲಕ ಮಹತ್ವದ ನೆಟ್ ರನ್ ರೇಟ್​ನಲ್ಲಿ ತುಸು ಉತ್ತಮ ಸ್ಥಿತಿಗೆ ಬಂದಿದೆ. ಪ್ಲೇ ಆಫ್ ಸಾಧ್ಯತೆಯನ್ನ ಜೀವಂತವಾಗಿರಿಸಿಕೊಂಡಿದೆ. ಇವತ್ತಿನ ಪಂದ್ಯದಲ್ಲಿ ಮುಂಬೈನ ವೇಗದ ಬೌಲರ್​ಗಳು ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಪ್ರಮುಖ ಹೈಲೈಟ್ಸ್ ಎನಿಸಿದವು. ಫಾರ್ಮ್ ಕಳೆದುಕೊಂಡಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ ತಡವರಿಸಿದರೂ ನಂತರ ಚೇತರಿಸಿಕೊಂಡು ಕೇವಲ 25 ಬಾಲ್​ನಲ್ಲಿ ಅರ್ಧಶತಕ ಗಳಿಸಿ ಮುಂಬೈ ತಂಡಕ್ಕೆ ಸುಲಭ ಗೆಲುವು ಸಿಗುವಂತೆ ಮಾಡಿದರು.

  ಇದಕ್ಕೆ ಮುನ್ನ, ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್​ಗಳ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 90 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 91 ರನ್ ಸಾಧಾರಣ ಗುರಿ ಸಿಕ್ಕಿತು. ಟ್ರೆಂಟ್ ಬೌಲ್ಟ್ ಬಿಟ್ಟು ಉಳಿದ ಮುಂಬೈ ಇಂಡಿಯನ್ಸ್ ಬೌಲರ್​ಗಳು ಇಂದು ಆರ್ಭಟಿಸಿದರು. ಅವರ ಮಾರಕ ಬೌಲಿಂಗ್​ಗೆ ಸಿಲುಕಿದ ರಾಯಲ್ಸ್ ಬ್ಯಾಟರ್ಸ್ ತಲೆಗೆರೆಗಳಂತೆ ಉದುರಿದರು. ರನ್ ಗಳಿಸಲೂ ಪರದಾಡಿದರು. ನೇಥನ್ ಕೌಲ್ಟರ್ ನೈಲ್ ಅವರು 4 ಓವರ್​ನಲ್ಲಿ ಕೇವಬಲ 14 ರನ್ನಿತ್ತು 4 ವಿಕೆಟ್ ಕಿತ್ತರು. ಜಸ್​ಪ್ರೀತ್ ಬುಮ್ರಾ, ನೇಥನ್ ಕೌಲ್ಟರ್-ನೈಲ್ ಮತ್ತು ಜೇಮ್ಸ್ ನೀಶಮ್ ಈ ಮೂವರು ವೇಗಿಗಳು ಒಟ್ಟು 12 ಓವರ್ ಬೌಲ್ ಮಾಡಿ 40 ರನ್ನಿತ್ತು 9 ವಿಕೆಟ್ ಪಡೆದರು.

  ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ನಡುವೆ ಮೊದಲ ವಿಕೆಟ್​ಗೆ 27 ರನ್, ಹಾಗೂ 6ನೇ ವಿಕೆಟ್​ಗೆ ಡೇವಿಡ್ ಮಿಲ್ಲರ್ ಮತ್ತು ತೆವಾಟಿಯಾ ನಡುವೆ 21 ರನ್ ಜೊತೆಯಾಟ ರಾಯಲ್ಸ್ ಇನ್ನಿಂಗ್ಸ್​ನ ಬ್ಯಾಟಿಂಗ್ ಹೈಲೈಟ್ ಎನಿಸಿತು. 24 ರನ್ ಗಳಿಸಿದ ಎವಿನ್ ಲೆವಿಸ್ ಅವರೊಬ್ಬರೇ 20 ರನ್ ಗಡಿದಾಟಿದ ರಾಯಲ್ಸ್ ಬ್ಯಾಟರ್ ಎನಿಸಿದರು.

  ಎರಡೂ ತಂಡಗಳಲ್ಲಿ ಎರಡೆರಡು ಬದಲಾವಣೆ ಮಾಡಲಾಯಿತು. ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತು ಕುಲದೀಪ್ ಯಾದವ್ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಮಯಂಕ್ ಮರ್ಕಂಡೆ ಮತ್ತು ಆಕಾಶ್ ಸಿಂಗ್ ಅವರನ್ನ ಕೈಬಿಡಲಾಗಿದೆ. ಮುಂಬೈ ತಂಡದಲ್ಲೂ ಎರಡು ಬದಲಾವಣೆ ಆಗಿದೆ. ಇಶಾನ್ ಕಿಶನ್ ಅವರನ್ನ ಮರಳಿ ತರಲಾಗಿದೆ. ಔಟ್ ಆಫ್ ಫಾರ್ಮ್​ನಲ್ಲಿರುವ ಕೃಣಾಲ್ ಪಾಂಡ್ಯ ಅವರನ್ನ ಕೈಬಿಟ್ಟು ಜಿಮ್ಮಿ ನೀಶನ್ ಅವರಿಗೆ ಅವಕಾಶ ಕೊಡಲಾಯಿತು.

  POINTS TABLE:
  ರಾಜಸ್ಥಾನ್ ರಾಯಲ್ಸ್ ತಂಡ ಈ ಸೋಲಿನೊಂದಿಗೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. 10 ಅಂಕಗಳನ್ನ ಹೊಂದಿರುವ ರಾಯಲ್ಸ್ ತಂಡಕ್ಕೆ ಲೆಕ್ಕಾಚಾರ ಪ್ರಕಾರ ಇನ್ನೂ ಪ್ಲೇ ಆಫ್ ಚಾನ್ಸ್ ಇದೆಯಾದರೂ ಮುಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತೀರಾ ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಅದು ಸದ್ಯದ ಮಟ್ಟಿಗೆ ಅಸಾಧ್ಯ. ಇನ್ನು, ಮುಂಬೈ ಇಂಡಿಯನ್ಸ್ ತಂಡ ಈ ಗೆಲುವಿನೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಒಂದು ಪಂದ್ಯ ಮುಂದೆ ಇದೆ. ಸದ್ಯ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ತಂಡ 13 ಪಂದ್ಯಗಳಿಂದ 12 ಅಂಕಗಳನ್ನ ಹೊಂದಿವೆ. ಆದರೆ, ಕೆಕೆಆರ್ ತಂಡದ ನೆಟ್ ರನ್ ರೇಟ್ ಉತ್ತಮವಾಗಿದೆ. ನಂತರದ ಸ್ಥಾನದಲ್ಲಿ ಮುಂಬೈ ಇದೆ. ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳು ತಲಾ 10 ಅಂಕಗಳನ್ನ ಹೊಂದಿವೆ. ಒಂದು ವೇಳೆ ರಾಯಲ್ಸ್ ತಂಡ ಕೆಕೆಆರ್ ತಂಡವನ್ನ ದೊಡ್ಡ ಅಂ ತರದಿಂದ ಸೋಲಿಸಿದರೆ ಮುಂಬೈ ತಂಡಕ್ಕೆ ಪ್ಲೇ ಆಫ್ ಹಾದಿ ಸುಲಭವಾಗುತ್ತದೆ.

  ಇದನ್ನೂ ಓದಿ: ಸೂರ್ಯಕುಮಾರ್ ಯಾದವ್, ಇಶಾನ್ ಯಾಕೆ ವಿಫಲರಾಗುತ್ತಿದ್ದಾರೆ? ಕಾರಣ ಬಿಚ್ಚಿಟ್ಟ ಗವಾಸ್ಕರ್

  ತಂಡಗಳು:

  ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಿಮ್ಮಿ ನೀಶಮ್, ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ರಾಹುಲ್ ಚಾಹರ್, ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.

  ರಾಜಸ್ಥಾನ್ ರಾಯಲ್ಸ್ ತಂಡ: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಮ್ ದುಬೇ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲರ್, ರಾಹುಲ್ ತೆವಾಟಿಯಾ, ಕುಲದೀಪ್ ಯಾದವ್, ಶ್ರೇಯಸ್ ಗೋಪಾಲ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕಾರಿಯಾ.

  ಸ್ಕೋರು ವಿವರ:

  ರಾಜಸ್ಥಾನ್ ರಾಯಲ್ಸ್ 20 ಓವರ್ 90/9
  (ಎವಿನ್ ಲೆವಿಸ್ 24, ಡೇವಿಡ್ ಮಿಲ್ಲರ್ 15, ರಾಹುಲ್ ತೆವಾಟಿಯಾ 12, ಯಶಸ್ವಿ ಜೈಸ್ವಾಲ್ – ನೇಥನ್ ಕೌಲ್ಟರ್-ನೈಲ್ 14/2, ಜಸ್​ಪ್ರೀತ್ ಬುಮ್ರಾ 14/2, ಜೇಮ್ಸ್ ನೀಶಮ್ 12/3)

  ಮುಂಬೈ ಇಂಡಿಯನ್ಸ್ 8.2 ಓವರ್ 94/2
  (ಇಶಾನ್ ಕಿಶನ್ ಅಜೇಯ 50, ರೋಹಿತ್ ಶರ್ಮಾ 22 ರನ್)
  Published by:Vijayasarthy SN
  First published: