RR vs KKR: ರಾಜಸ್ಥಾನ್ ರಾಯಲ್ಸ್​ನಲ್ಲಿ 1 ಬದಲಾವಣೆ ಸಾಧ್ಯತೆ, ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

RR vs KKR Predicted Playing 11: ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿದ್ದು, ಸ್ಟೀವ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್​ ರಾಜಸ್ಥಾನ್ ತಂಡದ ಬ್ಯಾಟಿಂಗ್ ಬೆನ್ನೆಲು ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಆದರೆ ಆರಂಭಿಕರಾಗಿ ಜೋಸ್ ಬಟ್ಲರ್ ಕಳೆದ ಪಂದ್ಯದಲ್ಲಿ ಟೀಮ್​ಗೆ ಮರಳಿದರೂ ನಿರೀಕ್ಷಿತ ಆಟ ಮೂಡಿ ಬಂದಿರಲಿಲ್ಲ.

rr vs kkr

rr vs kkr

 • Share this:
  IPL 2020ಯ 12ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. 13ನೇ ಆವೃತ್ತಿಯ ಐಪಿಎಲ್​ನಲ್ಲಿ ಉಭಯ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಗೆಲುವು ಸಾಧಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ರೆ, ಕೆಕೆಆರ್ ಒಂದರಲ್ಲಿ ಮಾತ್ರ ಜಯ ಸಾಧಿಸಿ 7ನೇ ಸ್ಥಾನ ಅಲಂಕರಿಸಿದೆ.

  ಸಿಎಸ್​ಕೆ ವಿರುದ್ಧ 16 ರನ್​ಗಳಿಂದ ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 223 ರನ್​ಗಳನ್ನು ಚೇಸ್ ಮಾಡಿ ದಾಖಲೆಯ ವಿಜಯವನ್ನು ತನ್ನದಾಗಿಸಿಕೊಂಡಿತು. ಇಲ್ಲಿ ಮುಖ್ಯವಾಗಿ ಎರಡು ಪಂದ್ಯಗಳಲ್ಲೂ ರಾಜಸ್ಥಾನ್ 200 ಕ್ಕಿಂತ ಅಧಿಕ ಮೊತ್ತ ಪೇರಿಸಿರುವುದು ತಂಡದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

  ಹಾಗೆಯೇ ಕೆಕೆಆರ್​ ತಂಡವು ಮುಂಬೈ ವಿರುದ್ಧ 49 ರನ್​ಗಳಿಂದ ಹೀನಾಯವಾಗಿ ಸೋಲನುಭವಿಸಿದರೂ, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಂಡಿತು. ಹೀಗಾಗಿ ಇಂದು ಕೂಡ ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

  ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿದ್ದು, ಸ್ಟೀವ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್​ ರಾಜಸ್ಥಾನ್ ತಂಡದ ಬ್ಯಾಟಿಂಗ್ ಬೆನ್ನೆಲು ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಆದರೆ ಆರಂಭಿಕರಾಗಿ ಜೋಸ್ ಬಟ್ಲರ್ ಕಳೆದ ಪಂದ್ಯದಲ್ಲಿ ಟೀಮ್​ಗೆ ಮರಳಿದರೂ ನಿರೀಕ್ಷಿತ ಆಟ ಮೂಡಿ ಬಂದಿರಲಿಲ್ಲ. ಒಂದು ವೇಳೆ ಕೆಕೆಆರ್ ವಿರುದ್ಧ ಬಟ್ಲರ್ ಮಿಂಚಿದ್ರೆ, ಆರ್​ಆರ್ ತಂಡದ ಆರಂಭಿಕ ವೈಫಲ್ಯಕ್ಕೆ ಪರಿಹಾರ ಸಿಗಬಹುದು. ಇನ್ನು ಕಳೆದ ಪಂದ್ಯದಲ್ಲಿ ರಾಹುಲ್ ತೆವಾಠಿಯಾ ಅಬ್ಬರ ಯಾರು ಮರೆತಿಲ್ಲ. ಹಾಗೆಯೇ ಎರಡು ಪಂದ್ಯಗಳಲ್ಲಿ ವಿಫಲರಾಗಿರುವ ರಾಬಿನ್ ಉತ್ತಪ್ಪ ಎಂಬ ಅನುಭವಿ ಬ್ಯಾಟ್ಸ್​ಮನ್ ಯಾವಾಗ ಬೇಕಾದರೂ ಸಿಡಿಯಬಹುದು.

  ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್, ಜೈದೇವ್ ಉನಾದ್ಕಟ್ ಹಾಗೂ ಟಾಮ್ ಕರ್ರನ್ ದುಬಾರಿಯಾಗಿ ಪರಿಣಮಿಸಿದ್ದು, ಇದೇ ಕಾರಣದಿಂದ ಎರಡೂ ಆರ್​ಆರ್ ಆಡಿದ ಎರಡೂ ಪಂದ್ಯಗಳಲ್ಲೂ ಎದುರಾಳಿ ತಂಡ 200ಕ್ಕೂ ಹೆಚ್ಚಿನ ರನ್ ಪೇರಿಸುವಂತಾಯಿತು. ಹೀಗಾಗಿ ಸ್ಮಿತ್ ಬಳಗ ಇಂದು ಬೌಲಿಂಗ್ ವಿಭಾಗದ ಕಡೆ ಹೆಚ್ಚಿನ ಒತ್ತು ನೀಡಲಿದೆ. ಅದರಂತೆ ಒಂದಾದ್ರೆ ಅಂಕಿತ್ ರಜಪೂತ್ ಸ್ಥಾನದಲ್ಲಿ ಮತ್ತೊಬ್ಬರ ಭಾರತೀಯ ಬೌಲರ್​ಗೆ ಸ್ಥಾನ ನೀಡಬಹುದು. ಅದರಂತೆ ಯುವ ವೇಗಿ ಕಾರ್ತಿಕ್ ತ್ಯಾಗಿ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ.

  ಇನ್ನು ಕೆಕೆಆರ್​ ತಂಡವು ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ . ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ 33 ರನ್​ಗಳಿಸಿರುವುದು ಅತೀ ದೊಡ್ಡ ಮೊತ್ತ. ಆದರೆ ಸನ್​ರೈಸರ್ಸ್​ ನೀಡಿದ 145 ರನ್ ಸುಲಭ ಗುರಿ ಇನಿಂಗ್ಸ್​ನಲ್ಲಿ ಆರಂಭಿಕ ಶುಭ್​ಮನ್ ಗಿಲ್ 62 ಎಸೆತಗಳಲ್ಲಿ 70 ರನ್​ ಬಾರಿಸಿದ್ದರು. ಇನ್ನು ಇಯಾನ್ ಮೋರ್ಗನ್ ಸ್ಪೋಟಕ 42 ರನ್ ಗಳಿಸಿರುವುದು ಸಮಾಧಾನಕರ. ಇದರ ಹೊರತಾಗಿ ಆರಂಭಿಕನಾಗಿ ಸುನೀಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್ ವಿಫಲರಾಗುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಗಿಲ್ ಹಾಗೂ ಮೋರ್ಗನ್ ಬ್ಯಾಟಿಂಗ್​ನ್ನು ಕೆಕೆಆರ್ ನೆಚ್ಚಿಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿ ಆಂಡ್ರೆ ರಸೆಲ್ ಮೊದಲ ಪಂದ್ಯದಲ್ಲಿ ವಿಫಲರಾದರೆ, 2ನೇ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಇಂದು ರಸೆಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿದ್ರೂ ಅಚ್ಚರಿಪಡಬೇಕಿಲ್ಲ.

  ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಪ್ಯಾಟ್ ಕಮಿನ್ಸ್ ಕೆಕೆಆರ್ ತಂಡದ ಟ್ರಂಪ್ ಕಾರ್ಡ್. ಇಂದು ಕೂಡ ಕಮಿನ್ಸ್​ಗೆ ಯುವ ವೇಗಿಗಳಾದ ಕಮಲೇಶ್ ನಾಗರ್ಕೋಟಿ ಹಾಗೂ ಶಿವಂ ಮಾವಿ ಕಡೆಯಿಂದ ಉತ್ತಮ ಸಾಥ್ ಸಿಗುವ ನಿರೀಕ್ಷೆಯಿದೆ. ಇನ್ನು ಸ್ಪಿನ್ನರ್​ಗಳಾಗಿ ಕುಲ್​ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಇಂದು ಸಹ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಕಂಡು ಬರುವುದು ಡೌಟ್.

  ಇಂದು ಕಣಕ್ಕಿಳಿಯಲಿರುವ ಸಂಭವನೀಯ ತಂಡಗಳು ಇಂತಿವೆ:

  KKR ಸಂಭಾವ್ಯ ಇಲೆವೆನ್: ಸುನಿಲ್ ನರೈನ್, ಶುಭ್​ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮೋರ್ಗಾನ್, ದಿನೇಶ್ ಕಾರ್ತಿಕ್ (ನಾಯಕ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್ಕೋಟಿ.

  RR ಸಂಭಾವ್ಯ ಇಲೆವೆನ್: ಜೋಸ್ ಬಟ್ಲರ್ , ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತಿವಾಠಿಯಾ, ಶ್ರೇಯಾಸ್ ಗೋಪಾಲ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಅಂಕಿತ್ ರಾಜ್‌ಪೂತ್/ಕಾರ್ತಿಕ್ ತ್ಯಾಗಿ, ಜಯದೇವ್ ಉನಾದ್ಕತ್.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್
  Published by:zahir
  First published: