RR vs KKR: ಉಭಯ​ ಬಳಗದಲ್ಲಿ 1 ಬದಲಾವಣೆ ಸಾಧ್ಯತೆ, ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

RR vs KKR Predicted Playing 11: ಐಪಿಎಲ್​ನಲ್ಲಿ ಈವರೆಗೆ ಉಭಯ ತಂಡಗಳು 21 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 11 ಬಾರಿ ಗೆದ್ದಿದ್ರೆ, ಆರ್​ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ.

RR vs KKR

RR vs KKR

 • Share this:
  IPL 2020ಯ 54ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಇಯಾನ್ ಮೋರ್ಗನ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು,  ಗೆಲ್ಲುವ ತಂಡಕ್ಕೆ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.

  ಕೆಕೆಆರ್ ತಂಡವು ಸಿಎಸ್​ಕೆ ವಿರುದ್ಧ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದರೆ, ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ 6ನೇ ಸ್ಥಾನದಲ್ಲಿದೆ.

  ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿದ್ದು, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್ ಹಾಗೂ ಸಂಜು ಸ್ಯಾಮ್ಸನ್​ ರಾಜಸ್ಥಾನ್ ತಂಡದ ಬ್ಯಾಟಿಂಗ್ ಬೆನ್ನೆಲು ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಒಂದು ವೇಳೆ ಕೆಕೆಆರ್ ವಿರುದ್ಧ ಉತ್ತಪ್ಪ ಮಿಂಚಿದ್ರೆ, ಆರ್​ಆರ್ ತಂಡದ ಆರಂಭಿಕ ವೈಫಲ್ಯಕ್ಕೆ ಪರಿಹಾರ ಸಿಗಬಹುದು.

  ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ ಏಕಾಂಗಿ ಹೋರಾಟವನ್ನು ಮುಂದುವರೆಸಿದ್ದು, ಉತ್ತಮ ಸಾಥ್​ನ ಕೊರತೆ ಕಾಡುತ್ತಿದೆ. ಹೀಗಾಗಿ ಸ್ಮಿತ್ ಬಳಗ ಇಂದು ಬೌಲಿಂಗ್ ವಿಭಾಗದ ಕಡೆ ಹೆಚ್ಚಿನ ಒತ್ತು ನೀಡಲಿದೆ. ಅದರಂತೆ ಒಂದಾದ್ರೆ ವರುಣ್ ಅರೋನ್ ಸ್ಥಾನದಲ್ಲಿ ಮತ್ತೊಬ್ಬರ ಭಾರತೀಯ ಬೌಲರ್​ಗೆ ಸ್ಥಾನ ನೀಡಬಹುದು. ಅದರಂತೆ ಯುವ ವೇಗಿ ಅಂಕಿತ್ ರಜಪೂತ್ ಮತ್ತೆ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ.

  ಇನ್ನು ಕೆಕೆಆರ್​ ತಂಡವು ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ನಿತೀಶ್ ರಾಣಾ ಸಿಡಿಲಬ್ಬರ, ಇಯಾನ್ ಮೋರ್ಗನ್ ಉತ್ತಮ ಕಾಣಿಕೆಯ ಹೊರತಾಗಿ ಸುನೀಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್ ವಿಫಲರಾಗುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ರಾಣಾ ಹಾಗೂ ಮೋರ್ಗನ್ ಬ್ಯಾಟಿಂಗ್​ನ್ನು ಕೆಕೆಆರ್ ನೆಚ್ಚಿಕೊಳ್ಳುವ ಸಾಧ್ಯತೆಯಿದೆ.

  ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಪ್ಯಾಟ್ ಕಮಿನ್ಸ್ ಕೆಕೆಆರ್ ತಂಡದ ಟ್ರಂಪ್ ಕಾರ್ಡ್. ಇಂದು ಕೂಡ ಕಮಿನ್ಸ್​ಗೆ ಯುವ ವೇಗಿಗಳಾದ ಕಮಲೇಶ್ ನಾಗರ್ಕೋಟಿ ಹಾಗೂ ಶಿವಂ ಮಾವಿ ಕಡೆಯಿಂದ ಉತ್ತಮ ಸಾಥ್ ಸಿಗುವ ನಿರೀಕ್ಷೆಯಿದೆ. ಇನ್ನು ಸ್ಪಿನ್ನರ್​ಗಳಾಗಿ ಕುಲ್​ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಇಂದು ಸಹ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಕಂಡು ಬರಬಹುದು.

  ಇಂದು ಕಣಕ್ಕಿಳಿಯಲಿರುವ ಸಂಭವನೀಯ ತಂಡಗಳು ಇಂತಿವೆ:

  KKR ಸಂಭಾವ್ಯ ಇಲೆವೆನ್: ಸುನಿಲ್ ನರೈನ್, ಶುಭ್​ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮೋರ್ಗಾನ್ (ನಾಯಕ), ದಿನೇಶ್ ಕಾರ್ತಿಕ್,  ಫರ್ಗುಸೆನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್ಕೋಟಿ.

  RR ಸಂಭಾವ್ಯ ಇಲೆವೆನ್: ಜೋಸ್ ಬಟ್ಲರ್ , ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತಿವಾಠಿಯಾ, ಶ್ರೇಯಾಸ್ ಗೋಪಾಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಅಂಕಿತ್ ರಾಜ್‌ಪೂತ್/ ಜಯದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್
  Published by:zahir
  First published: