RR vs KKR Live Score, IPL2021: ರಾಜಸ್ಥಾನ್ ರಾಯಲ್​ಗೆ 6 ವಿಕೆಟ್​ಗಳ ಜಯ

ಮೊದಲಿಗೆ ಟಾಸ್​  ಸೇತು ಬ್ಯಾಟಿಂಗ್​ ಮಾಡಿದ ಕೆಕೆಆರ್​ ತಂಡ ನಿತೀಶ್ ರಾಣಾ ಮತ್ತು ಶಬ್ಮನ್​ ಗಿಲ್​ ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಿತು. 

RR vs KKR

RR vs KKR

 • Share this:
  ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ಲೀಗ್ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ ತಂಡ ಕೊಲ್ಕತ್ತಾ ತಂಡದ ಎದುರು 6 ವಿಕೆಟ್​ಗಳ ಜಯ ಸಾಧಿಸಿದೆ.

  ಮೊದಲಿಗೆ ಟಾಸ್​  ಸೇತು ಬ್ಯಾಟಿಂಗ್​ ಮಾಡಿದ ಕೆಕೆಆರ್​ ತಂಡ ನಿತೀಶ್ ರಾಣಾ ಮತ್ತು ಶಬ್ಮನ್​ ಗಿಲ್​ ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಿತು. ಜಯದೇವ್ ಉನಾದ್ಕಟ್ ಮೊದಲ ಓವರ್​ಎಸೆಯುವ ಮೂಲಕ ಎದುರಾಲಿ ತಂಡಕ್ಕೆ ಮೂರು ರನ್​ ನೀಡಿದರು. ಹೀಗೆ ರಾಜಸ್ಥಾನ ಬೌಲರ್​ಗಳು ಎಸೆದ 5 ಓವರ್​ ತನಕ ಕೆಕೆಆರ್​ 23 ರನ್​ಗಳನಷ್ಟೇ ಪೇರಿಸಿದರು. ಈ ನಡುವೆ ಮುಸ್ತಾಫಿಜುರ್ ರಹಮಾನ್​ ಎಸೆದ 3ನೇ ಓವರ್​ನ 5ನೇ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಶುಬ್ಮನ್​ ಔಟ್​ ಆಗುವ ಪ್ರಮೇಯ ಇತ್ತಾದರು.  ಕ್ಯಾಚ್​ ಡ್ರಾಪ್​ ಮೂಲಕ ವಿಕೆಟ್​ ಉಳಿಸಿಕೊಂಡರು. ಆದರೆ ಮುಸ್ತಾಫಿಜುರ್ ರಹಮಾನ್ ಎಸೆದ 5ನೇ ಓವರ್​ನಲ್ಲಿ ಶುಬ್ಮನ್ (11)​ ರನ್​ ಔಟ್​ ಆಗುವ ಮೂಲಕ ಪೆವಿಲಿಯನತ್ತ ನಡೆದರು.

  ನಂತರ ಶುಬ್ಮನ್​ ಜಾಗಕ್ಕೆ ರಾಹುಲ್ ತ್ರಿಪಾಠಿ ಆಗಮಿಸಿದರು. ಆದರೆ ಈ ವೇಳೆ  ರನ್​ ಪೇರಿಸುವ ತವಕದಲ್ಲಿ ತ್ರಿಪಾಠಿ ಇದ್ದರಾದರು ಚೇತನ್​ ಸ​ಕಾರಿಯ ಎಸೆದ ಎಸೆತಕ್ಕೆ ರಾಣಾ (22) ಕೀಪರ್​ ಕ್ಯಾಚ್​ ನೀಡುವ ಮೂಲಕ ಔಟ್​ ಆದರು. ಆ ಬಳಿಕ ಸುನೀಲ್​ ನರೈನ್​ ಆಗಮಿಸಿ ತ್ರಿಪಾಠಿಗೆ ಜೊತೆಯಾಗಿದರು.

  ಸುನೀಲ್​ ನರೈನ್ (6)​ ಮೇಲೆ ಭಾರಿ ನಿರೀಕ್ಷೆ ಇತ್ತಾದರು ಜಯದೇವ್ ಉನಾದ್ಕಟ್ ಎಸೆದ 9ನೇ ಓವರ್​ನ 5ನೇ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಜೈಸ್ವಾಲ್​ಗೆ ಕ್ಯಾಚ್​ ನೀಡಿದರು. ನಂತರ ಬಂದ ನಾಯಕ ಮಾರ್ಗನ್ (0)​​ ಕೂಡ ರನ್​ ಔಟ್​ ಆಗುವ ಮೂಲಕ ಹೊರನಡೆದರು. ಅಲ್ಲಿದೆ ಕೆಕೆಆರ್​ ತಂಡ 11 ಓವರ್​ಗೆ 61 ರನ್ ​ ಪೇರಿಸಿತ್ತಾದರು ಬೌಲರ್​ಗಳ ದಾಳಿಗೆ 4 ವಿಕೆಟ್​ ಕಳೆದುಕೊಂಡಿತು.

  ನಂತರ ದಿನೇಶ್​ ಕಾರ್ತಿಕ್​ ಆಗಮಿಸಿ ತ್ರಿಪಾಠಿಗೆ ಜೊತೆಯಾದರು. ಇಬ್ಬರು14ನೇ ಓವರ್​ ತನಕ ತಂಡಕ್ಕೆ ರನ್​ ಪೇರಿಸಲು ಮುಂದಾದರು. ಆದರೆ  ಮುಸ್ತಾಫಿಜುರ್ 15ನೇ ಓವರ್​ನ 2ನೇ ಎಸೆತಕ್ಕೆ ಕ್ಯಾಚ್​ ನೀಡಿ ತ್ರಿಪಾಠಿ (36) ಪೆವಿಲಿಯನತ್ತ ಸಾಗಿದರು. ಆ ಬಳಿಕ ಬಂದ ರಸೆಲ್​ (9) ಮೋರಿಸ್​ ಅವರ  17 ಏವರ್​ನ 4ನೇ ಎಸೆತಕ್ಕೆ ಕ್ಯಾಚ್​ ನೀಡಿ ಹೊರನಡೆದರೆ. ಅದೇ ಓವರ್​ನ ಕೊನೆಯ ಎಸೆತಕ್ಕೆ ದಿನೇರ್ಶ್ ಕಾರ್ತಿಕ್​ ಅವರು ಚೇತನ್​ ಸಕಾರಿಯಗೆ ಕ್ಯಾಚ್​ ನೀಡಿ ಹೊರನಡೆದರು. ಹಾಗಾಗಿ ಒಂದೇ ಓವರ್​ನಲ್ಲಿ ಮೋರಿಸ್​ ಎರಡು ವಿಕೆಟ್​ ತನ್ನದಾಗಿಸಿಕೊಂಡರು.

  ಆ ಬಳಿಕ ಆಗಮಿಸಿದ ಪ್ಯಾಟ್ ಕಮ್ಮಿನ್ಸ್ (10) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಾಗಲಿಲ್ಲ. ಕಾರಣ ಮೋರಿಸ್​ ಅವರ 19ನೇ ಓವರ್​ನ 2ನೇ ಎಸೆತಕ್ಕೆ ರಿಯಾನ್​ ಪರಾಗ್​ಗೆ ಕ್ಯಾಚ್​ ನೀಡಿ ಹೊರನಡೆದರು. ಕೊನೆಯ ಓವರ್​ನಲ್ಲಿ ಪ್ರಸಿದ್ಧ್​ ಕೃಷ್ಣ ಮತ್ತು ಶಿವಂ ಮಾವಿ ಕ್ರೀಸ್​ನಲ್ಲಿದ್ದರು. ಆದರೆ ಮೋರಿಸ್​ ಕೊನೆಯ ಓವರ್​ನಲ್ಲಿ ಮತ್ತೆ ಮೋಡಿ ಮಾಡಿ ಬ್ಯಾಟ್ಸ್​ಮನ್​ ಮಾವಿಯನ್ನು ಔಟ್​ ಮಾಡಿದರು. ಅಲ್ಲಿಗೆ  ಕೆಕೆಆರ್​ ತಂಡದ ರಾಜಸ್ಥಾನ್​ಗೆ 133 ರನ್​ ಟಾರ್ಗೆಟ್​ ನೀಡುವಲ್ಲಿ ಶಕ್ತವಾಯಿತು.

  ಕೆಕೆಆರ್​​ ನೀಡಿದ ಟಾರ್ಗೆಟ್​​​ ಬೆನ್ನು ಹತ್ತಿದ ರಾಜಸ್ತಾನ್​ ರಾಯಲ್ಸ್ ತಂಡ​ ಆರಂಭಿಕ ಅಬ್ಬರಕ್ಕೆ ಯಶಶ್ವಿ ಜೈಸ್ವಾಲ್​ ಮತ್ತು ಜೋಸ್​ ಬಟ್ಲರ್​​ ಅವರನ್ನು ಕ್ರೀಸ್​ಗೆ ಇಳಿಸಿತು. ಮೊದಲ 2 ಓವರ್​ ತನಕ ಇವರಿಬ್ಬರ ಜೊತೆಯಾಟ ನಡೆಯಿತಾದರು. 3ನೇ ಓವರ್​ನಲ್ಲಿ  ಜೋಸ್ (5)​​ ಎಲ್​ಬಿಡಬ್ಲ್ಯು ಆಗುವ ಮೂಲಕ ಔಟ್​ ಆದರು. ಆ ಮೂಲಕ ಕೆಕೆಆರ್​ ಬೌಲರ್​ ಚಕ್ರವರ್ತಿ ಮೊದಲ ವಿಕೆಟ್​ ಪಡೆದರು.

  ಶಿವಂ ಮಾವಿ ಎಸೆದ 4ನೇ ಓವರ್​ನ 5ನೇ ಎಸೆತಕ್ಕೆ ಜೈಸ್ವಾಲ್(22)​ ಬ್ಯಾಟ್​ ಬೀಸಲು ಹೋಗಿ ವಿಕೆಟ್​ ಒಪ್ಪಿಸಿದರು. ನಂತರ ಜೋಸ್​ ಜಾಗಕ್ಕೆ ನಾಯಕ ಸಂಜು ಸ್ಯಾಮ್ಸನ್​​ ಆಗಮಿಸಿದರೆ. ಜೈಸ್ವಾಲ್​ ಜಾಗಕ್ಕೆ ಶಿವಂ ದುಬೆ ಆಗಮಿಸಿದರು. 

  ಕಮಿನ್ಸ್​ ಎಸೆದ 8ನೇ ಓವರ್​ನ 2ನೇ ಎಸೆತವನ್ನು ಸಂಜು ಸಿಕ್ಸ್​ಗೆ ಅಟ್ಟಿದರು. ಶಿವಂ ದುಬೆ ಕೂಡ ಸಂಜುಗೆ ಜೊತೆಯಾಗಿ ಟಾರ್ಗೆಟ್​ಗೆ ಸಮೀಪಿಸಲು ಸಹಾಯ ಮಾಡಿದರು. ಆದರೆ ಚಕ್ರವರ್ತಿ ಎಸೆದ 10 ಓವರ್​​ನ 5ನೇ ಎಸೆತಕ್ಕೆ ಶಿವಂ ದುಬೆ(22) ಕ್ಯಾಚ್​ ನೀಡಿ ಔಟ್​ ಹೊರನಡೆದರು.

  ಆ ಬಳಿಕ ರಾಹುಲ್ ತೆವಾಟಿಯಾ ಆಗಮಿಸಿ ಸಂಜುಗೆ ಜೊತೆಯಾದರು. 12 ಓವರ್​ಗೆ ಈ ಜೋಡಿ ಒಟ್ಟು 92 ರನ್​ ಸಂಪಾದಿಸಿದರು.  ಅಲ್ಲಿಗೆ ರಾಜಸ್ಥಾನ ತಂಡಕ್ಕೆ ಜಯದ ಕಡಲು ಸೇರಲು 46 ಎಸೆತಕ್ಕೆ  41 ರನ್​ ಮಾತ್ರ ಬೇಕಿತ್ತು.

  14 ನೇ ಓವರ್​ಗೆ  ರಾಜಸ್ಥಾನ ತಂಡದ ವಿಕೆಟ್ ಕಬಳಿಸಲು​ ಕೆಕೆಆರ್​​ ತಂಡ ಪ್ರಸಿದ್ಧ್​ ಕೃಷ್ಣ ಅವರಿಗೆ ಚಾನ್ಸ್​ ನೀಡಿತು.  ಅದೇ ಓವರ್​ನ 4ನೇ ಎಸೆತಕ್ಕೆ ರಾಹುಲ್​ ತೆವಾಟಿಯಾ (5) ಅವರು ನಾಗರ್​ಕೋಟಿಗೆ ಕ್ಯಾಚ್​ ನೀಡಿ  ಹೊರನಡೆದರು.

  ನಂತರ ಡೇವಿಡ್​ ಮಿಲ್ಲರ್​ ಆಗಮಿಸಿದರು. ಸಂಜುಗೆ ಜೊತೆಯಾಗಿ ನಿಂತರು. ಇಬ್ಬರಿಬ್ಬರ ಜಾಗರೂಕತೆಯಾಟ ಜಯದ ದಡ ಸೇರಲು ಸಹಾಯ ಮಾಡಿತು. ವೇಗಿ ಪ್ರಸಿದ್ಧ್​ ಕೃಷ್ಣ ಎದುರಾಳಿಗಳ ವಿಕೆಟ್​ ಕಬಳಿಸುವ ಪ್ರಯತ್ನ ನಡೆಸಿದರಾದರು ವಿಫಲರಾದರು.

  ಕೊನೆಗೂ ನಾಯಕ ಸಂಜು ಸ್ಯಾಮ್ಸನ್ (42) ​ ಮತ್ತು  ಡೇವಿಡ್​ ಮಿಲ್ಲರ್ (24)​ ತಂಡಕ್ಕೆ 6 ವಿಕೆಟ್​ಗಳ ಗೆಲುವು ತಂದುಕೊಟ್ಟರು.
  First published: