RR vs KKR Live Score, IPL2021: ರಾಜಸ್ಥಾನ್​ಗೆ ಸುಲಭ ಸವಾಲು ನೀಡಿದ ಕೆಕೆಆರ್​

ಈವರೆ ಉಭಯ ತಂಡಗಳು  23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 12 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ 10 ಪಂದ್ಯಗಳಲ್ಲಿ ಜಯ ಗಳಿಸಿದೆ ಮತ್ತು ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ದೊರಕಿಲ್ಲ.

RR vs KKR

RR vs KKR

  • Share this:
    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರಿಮಿಯರ್​ ಲೀಗ್​ನ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಕೊಲ್ಕತ್ತಾ ತಂಡ ಮುಖಾಮುಖಿಯಾಗಿದೆ. ಟಾಸ್​ ಗೆದ್ದಿರುವ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಬೌಲಿಂಗ್​ ಆಯ್ದುಕೊಂಡಿದ್ದಾರೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಕೆಕೆಆರ್​ ತಂಡದಿಂದ ಆರಂಭಿಕ ಆಟಗಾರರಾಗಿ ನಿತೀಶ್ ರಾಣಾ ಮತ್ತು ಶಬ್ಮನ್​ ಗಿಲ್​ ಕಣಕ್ಕಿಳಿದ್ದಾರೆ. ಜಯದೇವ್ ಉನಾದ್ಕಟ್ ಮೊದಲ ಓವರ್​ಗೆ ಎಸೆಯುವ ಮೂಲಕ ಎದುರಾಲಿ ತಂಡಕ್ಕೆ ಮೂರು ರನ್​ ನೀಡಿದರು. ಹೀಗೆ  ರಾಜಸ್ಥಾನ ಬೌಲರ್​ಗಳು ಎಸೆದ 5 ಓವರ್​ ತನಕ ಕೆಕೆಆರ್​ 23 ರನ್​ಗಳನಷ್ಟೇ ಪೇರಿಸಿದರು. ಈ ನಡುವೆ ಮುಸ್ತಾಫಿಜುರ್ ರಹಮಾನ್​ ಎಸೆದ 3ನೇ ಓವರ್​ನ 5ನೇ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಶುಬ್ಮನ್​ ಔಟ್(11 )​ ಆಗುವ ಪ್ರಮೇಯ ಇತ್ತಾದರು.  ಕ್ಯಾಚ್​ ಡ್ರಾಪ್​ ಮೂಲಕ ವಿಕೆಟ್​ ಉಳಿಸಿಕೊಂಡರು. ಆದರೆ ಮುಸ್ತಾಫಿಜುರ್ ರಹಮಾನ್ ಎಸೆದ 5ನೇ ಓವರ್​ನಲ್ಲಿ ಶುಬ್ಮನ್ (11)​ ರನ್​ ಔಟ್​ ಆಗುವ ಮೂಲಕ ಪೆವಿಲಿಯನತ್ತ ನಡೆದರು.

    ನಂತರ ಶುಬ್ಮನ್​ ಜಾಗಕ್ಕೆ ರಾಹುಲ್ ತ್ರಿಪಾಠಿ ಆಗಮಿಸಿದರು. ಆದರೆ ಈ ವೇಳೆ  ರನ್​ ಪೇರಿಸುವ ತವಕದಲ್ಲಿ ತ್ರಿಪಾಠಿ ಇದ್ದರಾದರು ಚೇತನ್​ ಸ​ಕಾರಿಯ ಎಸೆದ ಎಸೆತಕ್ಕೆ ರಾಣಾ (22) ಕೀಪರ್​ ಕ್ಯಾಚ್​ ನೀಡುವ ಮೂಲಕ ಔಟ್​ ಆದರು. ಆ ಬಳಿಕ ಸುನೀಲ್​ ನರೈನ್​ ಆಗಮಿಸಿ ತ್ರಿಪಾಠಿಗೆ ಜೊತೆಯಾಗಿದರು.

    ಸುನೀಲ್​ ನರೈನ್ (6)​ ಮೇಲೆ ಭಾರಿ ನಿರೀಕ್ಷೆ ಇತ್ತಾದರು ಜಯದೇವ್ ಉನಾದ್ಕಟ್ ಎಸೆದ 9ನೇ ಓವರ್​ನ 5ನೇ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಜೈಸ್ವಾಲ್​ಗೆ ಕ್ಯಾಚ್​ ನೀಡಿದರು. ನಂತರ ಬಂದ ನಾಯಕ ಮಾರ್ಗನ್ (0)​​ ಕೂಡ ರನ್​ ಔಟ್​ ಆಗುವ ಮೂಲಕ ಹೊರನಡೆದರು. ಅಲ್ಲಿದೆ ಕೆಕೆಆರ್​ ತಂಡ 11 ಓವರ್​ಗೆ 61 ರನ್ ​ ಪೇರಿಸಿತ್ತಾದರು ಬೌಲರ್​ಗಳ ದಾಳಿಗೆ 4 ವಿಕೆಟ್​ ಕಳೆದುಕೊಂಡಿತು.

    ನಂತರ ದಿನೇಶ್​ ಕಾರ್ತಿಕ್​ ಆಗಮಿಸಿ ತ್ರಿಪಾಠಿಗೆ ಜೊತೆಯಾದರು. ಇಬ್ಬರು14ನೇ ಓವರ್​ ತನಕ ತಂಡಕ್ಕೆ ರನ್​ ಪೇರಿಸಲು ಮುಂದಾದರು. ಆದರೆ  ಮುಸ್ತಾಫಿಜುರ್ 15ನೇ ಓವರ್​ನ 2ನೇ ಎಸೆತಕ್ಕೆ ಕ್ಯಾಚ್​ ನೀಡಿ ತ್ರಿಪಾಠಿ (36) ಪೆವಿಲಿಯನತ್ತ ಸಾಗಿದರು. ಆ ಬಳಿಕ ಬಂದ ರಸೆಲ್​ (9) ಮೋರಿಸ್​ ಅವರ  17 ಏವರ್​ನ 4ನೇ ಎಸೆತಕ್ಕೆ ಕ್ಯಾಚ್​ ನೀಡಿ ಹೊರನಡೆದರೆ. ಅದೇ ಓವರ್​ನ ಕೊನೆಯ ಎಸೆತಕ್ಕೆ ದಿನೇರ್ಶ್ ಕಾರ್ತಿಕ್​ ಅವರು ಚೇತನ್​ ಸಕಾರಿಯಗೆ ಕ್ಯಾಚ್​ ನೀಡಿ ಹೊರನಡೆದರು. ಹಾಗಾಗಿ ಒಂದೇ ಓವರ್​ನಲ್ಲಿ ಮೋರಿಸ್​ ಎರಡು ವಿಕೆಟ್​ ತನ್ನದಾಗಿಸಿಕೊಂಡರು.

    ಆ ಬಳಿಕ ಆಗಮಿಸಿದ ಪ್ಯಾಟ್ ಕಮ್ಮಿನ್ಸ್ (10) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಾಗಲಿಲ್ಲ. ಕಾರಣ ಮೋರಿಸ್​ ಅವರ 19ನೇ ಓವರ್​ನ 2ನೇ ಎಸೆತಕ್ಕೆ ರಿಯಾನ್​ ಪರಾಗ್​ಗೆ ಕ್ಯಾಚ್​ ನೀಡಿ ಹೊರನಡೆದರು. ಕೊನೆಯ ಓವರ್​ನಲ್ಲಿ ಪ್ರಸಿದ್ಧ್​ ಕೃಷ್ಣ ಮತ್ತು ಶಿವಂ ಮಾವಿ ಕ್ರೀಸ್​ನಲ್ಲಿದ್ದರು. ಆದರೆ ಮೋರಿಸ್​ ಕೊನೆಯ ಓವರ್​ನಲ್ಲಿ ಮತ್ತೆ ಮೋಡಿ ಮಾಡಿ ಬ್ಯಾಟ್ಸ್​ಮನ್​ ಮಾವಿಯನ್ನು ಔಟ್​ ಮಾಡಿದರು. ಅಲ್ಲಿಗೆ  ಕೆಕೆಆರ್​ ತಂಡದ ರಾಜಸ್ಥಾನ್​ಗೆ 133 ರನ್​ ಟಾರ್ಗೆಟ್​ ನೀಡುವಲ್ಲಿ ಶಕ್ತವಾಯಿತು.

    ರನ್​: 133

    ವಿಕೆಟ್​: 9
    First published: