ಐಪಿಎಲ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಸವಾಲೆಸೆಯಲಿದೆ. ಆಡಿರುವ 2 ಪಂದ್ಯಗಳಲ್ಲೂ ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಇಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಕೆಕೆಆರ್ ಮೊದಲ ಜಯದ ಖಾತೆ ತೆರೆದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಕೊನೆಯ ಪಂದ್ಯದ ಫಲಿತಾಂಶವನ್ನು ನೀಡುವ ವಿಶ್ವಾಸದಲ್ಲಿದೆ ಕೊಲ್ಕತ್ತಾ ನೈಟ್ ರೈಡರ್ಸ್.
ಒಂದು ವೇಳೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಲಿದೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಮಿತ್ ಪಡೆಯು ಅದೇ ಸ್ಥಾನವನ್ನು ಕಾಯ್ದುಕೊಳ್ಳಲು ಸಕಲ ತಯಾರಿಯೊಂದಿಗೆ ಕಣಕ್ಕಿಳಿಯಲಿದೆ. ಉಭಯ ತಂಡಗಳು ಬಲಿಷ್ಠ ಆಟಗಾರರನ್ನು ಒಳಗೊಂಡಿರುವುದರಿಂದ ಇಂದಿನ ಪಂದ್ಯದಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಏಕೆಂದರೆ ಐಪಿಎಲ್ನಲ್ಲಿ ಈವರೆಗೆ ಉಭಯ ತಂಡಗಳು 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿ ಅಂಕಿ-ಅಂಶಗಳಲ್ಲೂ ಎರಡು ತಂಡಗಳು ಸಮಬಲ ಸಾಧಿಸಿವೆ. ಕೆಕೆಆರ್ 10 ಬಾರಿ ಗೆದ್ದಿದ್ರೆ, ಆರ್ಆರ್ ಕೂಡ 10 ಬಾರಿ ವಿಜಯ ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಎರಡು ಸಮಾನವಾಗಿದೆ ಎಂದೇ ಹೇಳಬಹುದು.
ಇನ್ನು ಕಳೆದ ಸೀಸನ್ನಲ್ಲಿನ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ, 2 ಮುಖಾಮುಖಿಯಲ್ಲಿ ರಾಜಸ್ಥಾನ್ ಒಂದು ಗೆದ್ದರೆ, ಮತ್ತೊಂದನ್ನು ಕೊಲ್ಕತ್ತಾ ಗೆದ್ದು ಬೀಗಿತ್ತು. ಹಾಗೆಯೇ 2014ರ ಯುಎಇ ಐಪಿಎಲ್ನಲ್ಲೂ ಉಭಯ ತಂಡಗಳು ಒಂದು ಪಂದ್ಯವನ್ನು ಆಡಿದೆ. ಅಬುಧಾಬಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತನ್ನ 20 ಓವರ್ಗಳಲ್ಲಿ 152/5 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಿದ್ದ ಕೆಕೆಆರ್ ಕೂಡ 152/8 ಬಾರಿಸಿತ್ತು. ಬಳಿಕ ಸೂಪರ್ ಓವರ್ನಲ್ಲೂ ಎರಡೂ ತಂಡಗಳು 11 ರನ್ ಬಾರಿಸಿದ್ದವು. ಹೀಗಾಗಿ ಬೌಂಡರಿ ಎಣಿಕೆ ನಿಯಮದಲ್ಲಿ ಕೊಲ್ಕತ್ತಾ ವಿರುದ್ಧ ರಾಜಸ್ಥಾನ್ನ್ನು ವಿಜಯಿ ಎಂದು ಘೋಷಿಸಲಾಯಿತು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಫಾರ್ಮ್ ಹೊಂದಿರುವುದು ಕೆಕೆಆರ್ಗೆ ಪ್ಲಸ್ ಪಾಯಿಂಟ್. ಡಿಕೆ ರಾಜಸ್ಥಾನ್ ವಿರುದ್ಧ 37 ಸರಾಸರಿಯಲ್ಲಿ 518 ರನ್ ಕಲೆಹಾಕಿದ್ದಾರೆ. ಇನ್ನು ಕೆಕೆಆರ್ ವಿರುದ್ಧ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ಅಜಿಂಕ್ಯಾ ರಹಾನೆ ಪ್ರಸ್ತುತ ತಂಡದಲ್ಲಿಲ್ಲ. ರಹಾನೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.
ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದ್ರೆ ಉಭಯ ತಂಡಗಳು ಸಮಬಲ ಹೊಂದಿದ್ದು, ಆರ್ಆರ್ ಪರ ಸಂಜು ಸ್ಯಾಮ್ಸ್ನ್ ಆರ್ಭಟಿಸುತ್ತಿದ್ರೆ, ಕೆಕೆಆರ್ ಪಾಳಯದಲ್ಲಿ ಆಂಡ್ರೆ ರಸೆಲ್ ಎಂಬ ಸಿಡಿಲಮರಿ ಇರುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ