HOME » NEWS » Ipl » RR VS DC WATCH SANJU SAMSON TAKES FLYING CATCH TO DISMISS DHAWAN ZP

IPL 2021 Video: ಸಂಜು ಸೂಪರ್​ಮ್ಯಾನ್ ಸ್ಯಾಮ್ಸನ್: ಅದ್ಭುತ ಕ್ಯಾಚ್ ವಿಡಿಯೋ ವೈರಲ್

ಮೊದಲ ಇನಿಂಗ್ಸ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ರಾಜಸ್ಥಾನ್ ಬೌಲರುಗಳು ಯಶಸ್ವಿಯಾಗಿದ್ದರು. ಭರ್ಜರಿ ಫಾರ್ಮ್​ನಲ್ಲಿರುವ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅವರನ್ನು ಉನಾದ್ಕಟ್ ಬೇಗನೆ ಪೆವಿಲಿಯನ್​ಗೆ ಕಳುಹಿಸಿದ್ದರು.

news18-kannada
Updated:April 16, 2021, 9:07 PM IST
IPL 2021 Video: ಸಂಜು ಸೂಪರ್​ಮ್ಯಾನ್ ಸ್ಯಾಮ್ಸನ್: ಅದ್ಭುತ ಕ್ಯಾಚ್ ವಿಡಿಯೋ ವೈರಲ್
Sanju samson
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್ 3 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಆರ್​ಆರ್ ವೇಗಿ ಜಯದೇವ್ ಉನಾದ್ಕಟ್ ಹಾಗೂ ಆಲ್​ರೌಂಡರ್​ ಕ್ರಿಸ್ ಮೋರಿಸ್. ಉನಾದ್ಕಟ್ 4 ಓವರ್​ನಲ್ಲಿ 15 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಕ್ರಿಸ್ ಮೊರೀಸ್ 18 ಎಸೆತಗಳಲ್ಲಿ 36 ರನ್ ಸಿಡಿಸಿ ಗೆಲುವು ತಂದುಕೊಟ್ಟರು.

ಹಾಗೆಯೇ ಮೊದಲ ಇನಿಂಗ್ಸ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ರಾಜಸ್ಥಾನ್ ಬೌಲರುಗಳು ಯಶಸ್ವಿಯಾಗಿದ್ದರು. ಭರ್ಜರಿ ಫಾರ್ಮ್​ನಲ್ಲಿರುವ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅವರನ್ನು ಉನಾದ್ಕಟ್ ಬೇಗನೆ ಪೆವಿಲಿಯನ್​ಗೆ ಕಳುಹಿಸಿದ್ದರು. ಅದರಲ್ಲೂ ಶಿಖರ್ ಧವನ್ ವಿಕೆಟ್ ಪಡೆಯುವಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್​ ಪ್ರಮುಖ ಪಾತ್ರವಹಿಸಿದ್ದರು.

ಮೊದಲ ಇನಿಂಗ್ಸ್​ನ 4ನೇ ಓವರ್​ನಲ್ಲಿ ಶಿಖರ್ ಧವನ್ ಜಯದೇವ್ ಉನಾದ್ಕಟ್ ಎಸೆತಕ್ಕೆ ರಿವರ್ಸ್ ಶಾಟ್ ಹೊಡೆದಿದ್ದರು. ಆದರೆ ವಿಕೆಟ್ ಕೀಪರ್ ಸ್ಯಾಮ್ಸನ್ ಚಕ್ಕನೆ ಜಿಗಿಯುವ ಮೂಲಕ ಚೆಂಡನ್ನು ಗ್ಲೌಸ್​ನಲ್ಲಿ ಬಂಧಿಸಿದರು. ಒಂದೇ ಕೈಯಲ್ಲಿ ಹಿಡಿದ ಈ ಅದ್ಭುತ ಕ್ಯಾಚ್ ಫಲವಾಗಿ ಶಿಖರ್ ಧವನ್ ಇನಿಂಗ್ಸ್​ 9 ರನ್​ಗಳೊಂದಿಗೆ ಅಂತ್ಯಗೊಂಡಿತ್ತು. ಅಲ್ಲದೆ ಆ ಬಳಿಕ ರಾಜಸ್ಥಾನ್ ಬೌಲರುಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.



ಸಂಜು ಸ್ಯಾಮ್ಸನ್​ ಹಿಡಿದ ಈ ಸೂಪರ್​ ಕ್ಯಾಚ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾಯಕನ ಜವಾಬ್ದಾರಿಯೊಂದಿಗೆ ಅದ್ಭುತವಾಗಿ ಕೀಪಿಂಗ್​ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಯುವ ವಿಕೆಟ್ ಕೀಪರ್ ಪ್ರಯತ್ನಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
Published by: zahir
First published: April 16, 2021, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories