HOME » NEWS » Ipl » RR VS DC LIVE SCORE IPL 2021 SAMSONS RAJASTHAN ROYALS TAKE ON PANTS DELHI CAPITALS ZP

RR vs DC: ಪಂತ್ ಅರ್ಧಶತಕ: ರಾಜಸ್ಥಾನ್​ಗೆ ಸಾಧಾರಣ ಸವಾಲಿತ್ತ ಕ್ಯಾಪಿಟಲ್ಸ್​..!

ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧಾರವಾಗಲಿದೆ.

news18-kannada
Updated:April 15, 2021, 9:20 PM IST
RR vs DC: ಪಂತ್ ಅರ್ಧಶತಕ: ರಾಜಸ್ಥಾನ್​ಗೆ ಸಾಧಾರಣ ಸವಾಲಿತ್ತ ಕ್ಯಾಪಿಟಲ್ಸ್​..!
Rishabh pant
  • Share this:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ರಾಯಲ್ಸ್​ಗೆ 148 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ  ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ಓವರ್​ನಲ್ಲಿ 2 ರನ್ ಕಲೆಹಾಕಿದರು. 2ನೇ ಓವರ್​ ಎಸೆದ ಜಯದೇವ್ ಉನಾದ್ಕಟ್ ಪೃಥ್ವಿ ಶಾ (2) ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಉನಾದ್ಕಟ್​ ಅವರ 4ನೇ ಓವರ್​ನ ಮೊದಲ ಎಸೆತದಲ್ಲೇ ಶಿಖರ್ ಧವನ್ (9) ಬಾರಿಸಿದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ಸಂಜು ಸ್ಯಾಮ್ಸನ್​ ಗಬ್ಬರ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು 6ನೇ ಓವರ್​ನಲ್ಲಿ ಅಜಿಂಕ್ಯ ರಹಾನೆ (8) ಕೂಡ ವಿಕೆಟ್ ಒಪ್ಪಿಸಿದರು.

ಪವರ್​ಪ್ಲೇನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಜಯದೇವ್ ಉನಾದ್ಕಟ್ 3 ಓವರ್​ನಲ್ಲಿ ಕೇವಲ 12 ರನ್​ ನೀಡಿ 3 ವಿಕೆಟ್ ಉರುಳಿಸಿದರು. ಪರಿಣಾಮ 6 ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 36 ರನ್​ಗಳಿಸಲಷ್ಟೇ ಶಕ್ತರಾದರು. ಇನ್ನು 7ನೇ ಓವರ್​ನಲ್ಲಿ ಮುಸ್ತಫಿಜುರ್​ಗೆ ವಿಕೆಟ್ ಒಪ್ಪಿಸಿ ಶೂನ್ಯದೊಂದಿಗೆ ಮಾರ್ಕಸ್ ಸ್ಟೋಯಿನಿಸ್ ಪೆವಿಲಿಯನ್ ಕಡೆ ಮುಖ ಮಾಡಿದರು.

ಈ ಹಂತದಲ್ಲಿ ನಾಯಕ ರಿಷಭ್ ಪಂತ್ ಜೊತೆಗೂಡಿದ ಯುವ ಆಟಗಾರ ಲಿಲಿತ್ ಯಾದವ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್​ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಕಲೆಹಾಕಿದ್ದು ಕೇವಲ 57 ರನ್​ಗಳು ಮಾತ್ರ. ಆದರೆ ಹತ್ತು ಓವರ್​ಗಳ ಬಳಿಕ ಅಬ್ಬರಿಸಲಾರಂಭಿಸಿದ ರಿಷಭ್ ಪಂತ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ಹಂತದಲ್ಲಿ ರನೌಟ್ ಆಗುವ ಮೂಲಕ ಪಂತ್ (51) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

ಇದಾಗ್ಯೂ 15ನೇ ಓವರ್​ನಲ್ಲಿ 100 ರನ್​ ಗಡಿದಾಟಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳು ಅಂತಿಮ ಓವರ್​ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಮೋರಿಸ್ ಎಸೆತದಲ್ಲಿ ಲಲಿತ್ ಯಾದವ್ (20) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಇಂಗ್ಲೆಂಡ್ ಆಟಗಾರರಾದ ಟಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ 28 ರನ್​ಗಳ ಜೊತೆಯಾಟವಾಡಿದರು. 19ನೇ ಓವರ್​ನಲ್ಲಿ ಟಾಮ್ ಕರನ್ (21) ಮುಸ್ತಫಿಜುರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ 7 ರನ್​ಗಳಿಸಿ ಅಶ್ವಿನ್ ರನೌಟ್ ಆಗಿ ಹೊರನಡೆದರು.

ಚೇತನ್ ಸಕರಿಯಾ ಎಸೆದ ಅಂತಿಮ ಓವರ್​ನಲ್ಲಿ 11 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್​ ಕಲೆಹಾಕಿತು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್​ನಲ್ಲಿ 15 ರನ್ ನೀಡಿ 3 ವಿಕೆಟ್ ಉರುಳಿಸಿದ ಜಯದೇವ್ ಉನಾದ್ಕಟ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಉಭಯ ತಂಡಗಳು ಈಗಾಗಲೇ ಒಂದೊಂದು ಪಂದ್ಯವನ್ನಾಡಿದ್ದು, ಚೊಚ್ಚಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್ ಮೊದಲ ಪಂದ್ಯದಲ್ಲೇ ಗೆಲುವಿನ ರುಚಿ ನೋಡಿದರೆ, ನಾಯಕನಾಗಿ ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ್ಸನ್ ಕಹಿಯುಂಡಿದ್ದಾರೆ. ಇದಾಗ್ಯೂ ಪಂಜಾಬ್ ಕಿಂಗ್ಸ್​ ವಿರುದ್ದ ನಾಯಕನಾಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಭರ್ಜರಿ ಶತಕದೊಂದಿಗೆ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು ಎಂಬುದು ವಿಶೇಷ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆಗೆ ಸೋಲುಣಿಸಿ ಅಭಿಯಾನ ಆರಂಭಿಸಿದೆ. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಆರ್​ಆರ್​ ವಿರುದ್ದ ಕೂಡ ಕಣಕ್ಕಿಳಿಯಲಿದೆ.

IPL 2021, DC vs RR Playing 11: ಉಭಯ ತಂಡಗಳಲ್ಲಿ 2 ಬದಲಾವಣೆ: ಪ್ಲೇಯಿಂಗ್ ಇಲೆವೆನ್ ಹೀಗಿದೆ

ಇನ್ನು ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧಾರವಾಗಲಿದೆ. ಇನ್ನು ಕಳೆದ ಸೀಸನ್​ನ ಅಂಕಿ ಅಂಶಗಳನ್ನು ಗಮನಿಸಿದರೆ, ರಾಜಸ್ಥಾನ್ ರಾಯಲ್ಸ್​ಗೆ 2 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸೋಲುಣಿಸಿದೆ.ಹಾಗೆಯೇ ಕಳೆದ 10 ಪಂದ್ಯಗಳಲ್ಲಿ ರಾಜಸ್ಥಾನ್ 5 ರಲ್ಲಿ ಗೆಲುವು ಸಾಧಿಸಿದರೆ, ಡೆಲ್ಲಿ ಕೂಡ ಅಷ್ಟೇ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಾಗ್ಯೂ ಕೊನೆಯ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಡೆಲ್ಲಿ ವಿರುದ್ದ ಗೆಲ್ಲಲಾಗಲಿಲ್ಲ ಎಂಬುದು ವಿಶೇಷ. ಹೀಗಾಗಿ ಡೆಲ್ಲಿ ವಿರುದ್ದದ ಸೋಲಿನ ಸರಪಳಿಯಿಂದ ಹೊರಬರಲು ಇಂದಿನ ಪಂದ್ಯದಲ್ಲಿ ಆರ್​ಆರ್ ಗೆಲ್ಲಲೇಬೇಕು.
Published by: zahir
First published: April 15, 2021, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories