HOME » NEWS » Ipl » RR VS DC LIVE SCORE IPL 2021 DELHI CAPITALS 20 OVER COMPLETE ZP

RR vs DC, IPL 2021: ರಾಜಸ್ಥಾನ್ ಭರ್ಜರಿ ಬೌಲಿಂಗ್: ಡೆಲ್ಲಿ ಕ್ಯಾಪಿಟಲ್ಸ್​ ಸಾಧಾರಣ ಸವಾಲು

ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧಾರವಾಗಲಿದೆ.

news18-kannada
Updated:April 15, 2021, 9:21 PM IST
RR vs DC, IPL 2021: ರಾಜಸ್ಥಾನ್ ಭರ್ಜರಿ ಬೌಲಿಂಗ್: ಡೆಲ್ಲಿ ಕ್ಯಾಪಿಟಲ್ಸ್​ ಸಾಧಾರಣ ಸವಾಲು
RR vs DC
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ  ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ಓವರ್​ನಲ್ಲಿ 2 ರನ್ ಕಲೆಹಾಕಿದರು. 2ನೇ ಓವರ್​ ಎಸೆದ ಜಯದೇವ್ ಉನಾದ್ಕಟ್ ಪೃಥ್ವಿ ಶಾ (2) ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಉನಾದ್ಕಟ್​ ಅವರ 4ನೇ ಓವರ್​ನ ಮೊದಲ ಎಸೆತದಲ್ಲೇ ಶಿಖರ್ ಧವನ್ (9) ಬಾರಿಸಿದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ಸಂಜು ಸ್ಯಾಮ್ಸನ್​ ಗಬ್ಬರ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು 6ನೇ ಓವರ್​ನಲ್ಲಿ ಅಜಿಂಕ್ಯ ರಹಾನೆ (8) ಕೂಡ ವಿಕೆಟ್ ಒಪ್ಪಿಸಿದರು.

ಪವರ್​ಪ್ಲೇನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಜಯದೇವ್ ಉನಾದ್ಕಟ್ 3 ಓವರ್​ನಲ್ಲಿ ಕೇವಲ 12 ರನ್​ ನೀಡಿ 3 ವಿಕೆಟ್ ಉರುಳಿಸಿದರು. ಪರಿಣಾಮ 6 ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 36 ರನ್​ಗಳಿಸಲಷ್ಟೇ ಶಕ್ತರಾದರು. ಇನ್ನು 7ನೇ ಓವರ್​ನಲ್ಲಿ ಮುಸ್ತಫಿಜುರ್​ಗೆ ವಿಕೆಟ್ ಒಪ್ಪಿಸಿ ಶೂನ್ಯದೊಂದಿಗೆ ಮಾರ್ಕಸ್ ಸ್ಟೋಯಿನಿಸ್ ಪೆವಿಲಿಯನ್ ಕಡೆ ಮುಖ ಮಾಡಿದರು.

ಈ ಹಂತದಲ್ಲಿ ನಾಯಕ ರಿಷಭ್ ಪಂತ್ ಜೊತೆಗೂಡಿದ ಯುವ ಆಟಗಾರ ಲಿಲಿತ್ ಯಾದವ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ 10 ಓವರ್​ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಕಲೆಹಾಕಿದ್ದು ಕೇವಲ 57 ರನ್​ಗಳು ಮಾತ್ರ. ಆದರೆ ಹತ್ತು ಓವರ್​ಗಳ ಬಳಿಕ ಅಬ್ಬರಿಸಲಾರಂಭಿಸಿದ ರಿಷಭ್ ಪಂತ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ಹಂತದಲ್ಲಿ ರನೌಟ್ ಆಗುವ ಮೂಲಕ ಪಂತ್ (51) ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

ಇದಾಗ್ಯೂ 15ನೇ ಓವರ್​ನಲ್ಲಿ 100 ರನ್​ ಗಡಿದಾಟಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳು ಅಂತಿಮ ಓವರ್​ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಮೋರಿಸ್ ಎಸೆತದಲ್ಲಿ ಲಲಿತ್ ಯಾದವ್ (20) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಇಂಗ್ಲೆಂಡ್ ಆಟಗಾರರಾದ ಟಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ 28 ರನ್​ಗಳ ಜೊತೆಯಾಟವಾಡಿದರು. 19ನೇ ಓವರ್​ನಲ್ಲಿ ಟಾಮ್ ಕರನ್ (21) ಮುಸ್ತಫಿಜುರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ 7 ರನ್​ಗಳಿಸಿ ಅಶ್ವಿನ್ ರನೌಟ್ ಆಗಿ ಹೊರನಡೆದರು.

ಚೇತನ್ ಸಕರಿಯಾ ಎಸೆದ ಅಂತಿಮ ಓವರ್​ನಲ್ಲಿ 11 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್​ ಕಲೆಹಾಕಿತು. ರಾಜಸ್ಥಾನ್ ರಾಯಲ್ಸ್ ಪರ 4 ಓವರ್​ನಲ್ಲಿ 15 ರನ್ ನೀಡಿ 3 ವಿಕೆಟ್ ಉರುಳಿಸಿದ ಜಯದೇವ್ ಉನಾದ್ಕಟ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್: 147/8ಓವರ್: 20

ಉಭಯ ತಂಡಗಳು ಈಗಾಗಲೇ ಒಂದೊಂದು ಪಂದ್ಯವನ್ನಾಡಿದ್ದು, ಚೊಚ್ಚಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್ ಮೊದಲ ಪಂದ್ಯದಲ್ಲೇ ಗೆಲುವಿನ ರುಚಿ ನೋಡಿದರೆ, ನಾಯಕನಾಗಿ ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ್ಸನ್ ಕಹಿಯುಂಡಿದ್ದಾರೆ. ಇದಾಗ್ಯೂ ಪಂಜಾಬ್ ಕಿಂಗ್ಸ್​ ವಿರುದ್ದ ನಾಯಕನಾಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಭರ್ಜರಿ ಶತಕದೊಂದಿಗೆ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು ಎಂಬುದು ವಿಶೇಷ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ಬಲಿಷ್ಠ ಸಿಎಸ್​ಕೆಗೆ ಸೋಲುಣಿಸಿ ಅಭಿಯಾನ ಆರಂಭಿಸಿದೆ. ಇದೇ ಆತ್ಮ ವಿಶ್ವಾಸದಲ್ಲಿ ಇಂದು ಆರ್​ಆರ್​ ವಿರುದ್ದ ಕೂಡ ಕಣಕ್ಕಿಳಿಯಲಿದೆ.

IPL 2021, DC vs RR Playing 11: ಉಭಯ ತಂಡಗಳಲ್ಲಿ 2 ಬದಲಾವಣೆ: ಪ್ಲೇಯಿಂಗ್ ಇಲೆವೆನ್ ಹೀಗಿದೆ

ಇನ್ನು ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ 22 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 11 ಜಯ ಸಾಧಿಸುವ ಮೂಲಕ ಫಲಿತಾಂಶದಲ್ಲಿ ಸಮಬಲ ಹೊಂದಿರುವುದು ವಿಶೇಷ. ಹೀಗಾಗಿ ಇಂದಿನ ಪಂದ್ಯವು ಇಬ್ಬರಲ್ಲಿ ಯಾರು ಬೆಸ್ಟ್ ಎಂಬುದನ್ನು ನಿರ್ಧಾರವಾಗಲಿದೆ. ಇನ್ನು ಕಳೆದ ಸೀಸನ್​ನ ಅಂಕಿ ಅಂಶಗಳನ್ನು ಗಮನಿಸಿದರೆ, ರಾಜಸ್ಥಾನ್ ರಾಯಲ್ಸ್​ಗೆ 2 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸೋಲುಣಿಸಿದೆ.



ಹಾಗೆಯೇ ಕಳೆದ 10 ಪಂದ್ಯಗಳಲ್ಲಿ ರಾಜಸ್ಥಾನ್ 5 ರಲ್ಲಿ ಗೆಲುವು ಸಾಧಿಸಿದರೆ, ಡೆಲ್ಲಿ ಕೂಡ ಅಷ್ಟೇ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಾಗ್ಯೂ ಕೊನೆಯ 4 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಡೆಲ್ಲಿ ವಿರುದ್ದ ಗೆಲ್ಲಲಾಗಲಿಲ್ಲ ಎಂಬುದು ವಿಶೇಷ. ಹೀಗಾಗಿ ಡೆಲ್ಲಿ ವಿರುದ್ದದ ಸೋಲಿನ ಸರಪಳಿಯಿಂದ ಹೊರಬರಲು ಇಂದಿನ ಪಂದ್ಯದಲ್ಲಿ ಆರ್​ಆರ್ ಗೆಲ್ಲಲೇಬೇಕು.
Published by: zahir
First published: April 15, 2021, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories