IPL

  • associate partner
HOME » NEWS » Ipl » RR VS DC IPL 2020 RAJASTHAN ROYALS IN SEARCH OF A WIN TAKE ON DELHI CAPITALS RMD

RR vs DC: ಇಂದು ರಾಜಸ್ಥಾನ್​-ಡೆಲ್ಲಿ ಮುಖಾಮುಖಿ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಾರಾ ಕ್ಯಾಪಿಟಲ್ಸ್​?

ರಾಜಸ್ಥಾನ ತಂಡ ಆಡಿರುವ ಐದು ಪಂದ್ಯಗಳಲ್ಲಿ ಮೊದಲೆರಡು ಗೆಲುವು ದಾಖಲಿಸಿ ನಂತರ ಹ್ಯಾಟ್ರಿಕ್​ ಸೋಲು ಕಂಡಿದೆ. ಡೆಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಕಂಡು ಒಂದರಲ್ಲಿ ಸೋತಿದೆ.

news18-kannada
Updated:October 9, 2020, 1:26 PM IST
RR vs DC: ಇಂದು ರಾಜಸ್ಥಾನ್​-ಡೆಲ್ಲಿ ಮುಖಾಮುಖಿ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಾರಾ ಕ್ಯಾಪಿಟಲ್ಸ್​?
13 ವರ್ಷಗಳ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಇತಿಹಾಸ ಸೃಷ್ಟಿಸುತ್ತ ನೋಡಬೇಕಿದೆ.
  • Share this:
ಇಂದು ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿ ಆಗಲಿವೆ. ಈಗಾಗಲೇ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ತಂಡಕ್ಕೆ ಗೆಲುವಿನ ಲಯಕ್ಕೆ ಮರಳುವ ಅಗತ್ಯತೆ ಇದೆ. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ತಂಡ ರಾಜಸ್ಥಾನಕ್ಕೆ ಸತತ ನಾಲ್ಕನೇ ಸೋಲುಣಿಸಲು ಸಿದ್ಧವಾಗಿದೆ. ಶ್ರೇಯಸ್​ ಅಯ್ಯರ್​ ಅವರ ನಾಯಕತ್ವದಲ್ಲಿ ಡೆಲ್ಲಿ ತಂಡ ಉತ್ತಮವಾಗಿ ಮುನ್ನಡೆಯುತ್ತಿದ್ದು, ಇಂದು ಐದನೇ ಗೆಲುವು ದಾಖಲಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​​ ಸ್ಟೋಕ್ಸ್​ ಯುಎಇ ತಲುಪಿದ್ದರೂ 6 ದಿನಗಳ ಕ್ವಾರಂಟೈನ್​ನಲ್ಲಿದ್ದಾರೆ. ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ. ರಾಜಸ್ಥಾನ ತಂಡ ಆಡಿರುವ ಐದು ಪಂದ್ಯಗಳಲ್ಲಿ ಮೊದಲೆರಡು ಗೆಲುವು ದಾಖಲಿಸಿ ನಂತರ ಹ್ಯಾಟ್ರಿಕ್​ ಸೋಲು ಕಂಡಿದೆ. ಡೆಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಕಂಡು ಒಂದರಲ್ಲಿ ಸೋತಿದೆ.










ಗೆಲುವಿನ ಲಯಕ್ಕೆ ಮರಳಲು ಹೋರಾಡುತ್ತಿರುವ ರಾಜಸ್ಥಾನದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು. ಸಂಜು ಸ್ಯಾಮನ್ಸ್​ ಮೊದಲ ಎರಡು ಪಂದ್ಯಗಳಲ್ಲಿ ಸಿಡಿದರೂ ನಂತರ ಅವರು ಉತ್ತಮ ಪ್ರದರ್ಶನ ನೀಡಿಲ್ಲ. ಆದಾಗ್ಯೂ ಅವರು ತಂಡದಲ್ಲಿ ಮುಂದುವರಿಯುತ್ತಿದ್ದಾರೆ. ಕಾರ್ತಿಕ್​ ತ್ಯಾಗಿ ಪದಾರ್ಪಣೆ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರು ಇಂದು ಮುಂದುವರಿಯಬಹುದು. ದುಬಾರಿಯಾಗಿರುವ ಅಂಕಿತ್ ರಜಪೂತ್​ ಬದಲಿಗೆ ಜೈದೇವ್​ ಉನಾದ್ಕತ್​ ತ.ಡ ಸೇರಿಕೊಳ್ಳಬಹುದು. ಇನ್ನು, ಡೆಲ್ಲಿ ಉತ್ತಮ ಲಯದಲ್ಲಿದ್ದು, ಅದೇ ತಂಡ ಮುಂದುವರಿಯುವ ಸಾಧ್ಯತೆ ಇದೆ.
Published by: Rajesh Duggumane
First published: October 9, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories