• ಹೋಂ
  • »
  • ನ್ಯೂಸ್
  • »
  • IPL
  • »
  • Chetan Sakariya: ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕರಿಯಾ ತಂದೆ ನಿಧನ..!

Chetan Sakariya: ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕರಿಯಾ ತಂದೆ ನಿಧನ..!

Chetan Sakariya

Chetan Sakariya

ಕೆಲ ದಿನಗಳ ಹಿಂದೆಯಷ್ಟೇ ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ ಚೇತನ್ ಸಕರಿಯಾ, "ನಾನು ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ಕೆಲವು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್​ ತಂಡದಿಂದ ನನ್ನ ವೇತನವನ್ನು ಸ್ವೀಕರಿಸಿದ್ದೇನೆ.

  • Share this:

    ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕರಿಯಾ ಅವರ ತಂದೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಅವರ ತಂದೆ ಭಾನುವಾರ ಮೃತಪಟ್ಟಿದ್ದಾರೆ.


    ಈ ಬಾರಿಯ ಐಪಿಎಲ್​ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಚೇತನ್ ಸಕರಿಯಾ ಕೂಡ ಒಬ್ಬರು. ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಯುವ ಎಡಗೈ ವೇಗಿ ಟೂರ್ನಿಯುದ್ದಕ್ಕೂ ಲಯಬದ್ಧ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಐಪಿಎಲ್ ಮುಂದೂಡಿಕೆಯಿಂದ ಸಕರಿಯಾ ಮನೆಗೆ ವಾಪಾಸ್ಸಾಗಿದ್ದರು. ಆದರೆ ದುರಾದೃಷ್ಟ ಇತ್ತ ಮನೆಗೆ ತೆರಳುವ ವೇಳೆಗಾಗಲೇ ಚೇತನ್ ಸಕರಿಯಾ ಅವರ ತಂದೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಐಪಿಎಲ್ ಕ್ಯಾಂಪ್​ನಿಂದ ಯುವ ಆಟಗಾರ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ.


    ಕೆಲ ದಿನಗಳ ಹಿಂದೆಯಷ್ಟೇ ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ ಚೇತನ್ ಸಕರಿಯಾ, "ನಾನು ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ಕೆಲವು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್​ ತಂಡದಿಂದ ನನ್ನ ವೇತನವನ್ನು ಸ್ವೀಕರಿಸಿದ್ದೇನೆ. ಆ ಹಣವನ್ನು ಮನೆಗೆ ಕಳುಹಿಸಿದೆ. ಇಂದು ಆ ಹಣದಿಂದ ತಂದೆಯ ಚಿಕಿತ್ಸೆಗೆ ನೆರವಾಗುತ್ತಿದೆ ಎಂದು ಯುವ ಕ್ರಿಕೆಟಿಗ ತಿಳಿಸಿದ್ದ.


    ಜನರು ಐಪಿಎಲ್ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವವರು ಈ ಬಗ್ಗೆ ಕೂಡ ಯೋಚಿಸಬೇಕು. ನನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ನನ್ನ ಗಳಿಕೆಯ ಏಕೈಕ ಮೂಲ ಕ್ರಿಕೆಟ್. ಐಪಿಎಲ್‌ನಿಂದ ನಾನು ಗಳಿಸಿದ ಹಣದಿಂದಾಗಿ ಇಂದು ನನ್ನ ತಂದೆಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಈ ಬಾರಿ ಟೂರ್ನಿ ನಡೆಯದಿದ್ದರೆ ನನ್ನ ಪಾಲಿಗೆ ಕಷ್ಟಕರವಾಗುತ್ತಿತ್ತು. ನಾನು ಬಡ ಕುಟುಂಬದಿಂದ ಬಂದವನು.ಐಪಿಎಲ್ ಕಾರಣದಿಂದಾಗಿ ನನ್ನ ಇಡೀ ಜೀವನವು ಬದಲಾಗಲಿದೆ. ಹೀಗಾಗಿ ಸುಖಾಸುಮ್ಮನೆ ಐಪಿಎಲ್ ರದ್ದುಗೊಳಿಸಿ ಎಂದು ಮಾತನಾಡುವವರು ಈ ಬಗ್ಗೆ ಕೂಡ ಯೋಚಿಸಬೇಕು ಎಂದು ಚೇತನ್ ಸಕರಿಯಾ ತಿಳಿಸಿದ್ದರು.


    ಆದರೀಗ ವೈದ್ಯರ ಪ್ರಯತ್ನದ ಫಲದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಭಾವನಗರದ ಆಸ್ಪತ್ರೆಯಲ್ಲಿ ಚೇತನ್ ಸಕಾರಿಯಾ ಅವರ ತಂದೆ ಕೊನೆಯುಸಿರೆಳೆದಿದ್ದಾರೆ. ಇದೇ ವರ್ಷ ಜನವರಿ ತಿಂಗಳಲ್ಲಿ ಚೇತನ್ ಸಕರಿಯಾ ಅವರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಕೊರೋನಾ ಮೂಲಕ ಯುವ ಕ್ರಿಕೆಟಿಗನ ಕುಟುಂಬಕ್ಕೆ ಮತ್ತೊಂದ ಆಘಾತ ಎದುರಾಗಿದೆ.

    Published by:zahir
    First published: