IPL 2021, RR vs DC: ಐಪಿಎಲ್ ಅಂಗಳದಲ್ಲಿಂದು ಸೂಪರ್ ಸ್ಯಾಮ್ಸನ್​ಗೆ ಪಂತ್​ಹ್ವಾನ..!

ರಾಜಸ್ಥಾನ್ ರಾಯಲ್ಸ್ ಈ ಬಾರಿ ಪರಿಣಾಮಕಾರಿಯಾಗಿ ಬೌಲಿಂಗ್ ಸಂಘಟಿಸಬೇಕಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಯುವ ಎಡಗೈ ವೇಗಿ ಚೇತನ್ ಸಕರಿಯಾ ಹೊರತುಪಡಿಸಿ ಉಳಿದೆಲ್ಲಾ ಬೌಲರುಗಳು ದುಬಾರಿಯಾಗಿದ್ದರು.

Rishabh Pant-Sanju Samson

Rishabh Pant-Sanju Samson

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳನ್ನು ಭಾರತೀಯ ಆಟಗಾರರು ಮುನ್ನಡೆಸುತ್ತಿರುವುದು ವಿಶೇಷ. ಅದರಲ್ಲೂ ಇದೇ ಮೊದಲ ಬಾರಿ ಐಪಿಎಲ್​ ತಂಡಗಳ ನಾಯಕರಾಗಿರುವ ರಿಷಭ್ ಪಂತ್-ಸಂಜು ಸ್ಯಾಮ್ಸನ್ ಎದುರು-ಬದುರು ಆಗುತ್ತಿರುವುದು ಮತ್ತೊಂದು ವಿಶೇಷ.

  ಮೊದಲ ಪಂದ್ಯದಲ್ಲಿ ಸೀನಿಯರ್ಸ್ ಸಿಎಸ್​ಕೆಗೆ ಸೋಲುಣಿಸಿರುವ ಡೆಲ್ಲಿ ಹುಡುಗ್ರು ಅದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಕಣಕ್ಕಿಳಿಯಲಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಸೋಲಿನ ಭಯ ಹುಟ್ಟಿಸಿದ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ಪಂಜಾಬ್ ವಿರುದ್ದ ನಾಯಕ ಸ್ಯಾಮ್ಸನ್ ಅದ್ಭುತ ಪ್ರದರ್ಶನದ ಹೊರತಾಗಿಯೂ 4 ರನ್​ಗಳಿಂದ ಸೋಲಬೇಕಾಯಿತು. ಇದೀಗ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವುದು ಭಾರೀ ಹಿನ್ನಡೆಯಾಗಲಿದೆ.

  ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕರಾದ ಶಿಖರ್ ಧವನ್-ಪೃಥ್ವಿ ಶಾ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಉತ್ತಮ ಫಾರ್ಮ್​ನಲ್ಲಿರುವ ಈ ಜೋಡಿ ರಾಜಸ್ಥಾನ್ ರಾಯಲ್ಸ್​ ಮೇಲೂ ಸವಾರಿ ಮಾಡುವ ವಿಶ್ವಾಸದಲ್ಲಿದೆ. ಹಾಗೆಯೇ ಇಂದಿನ ಪಂದ್ಯದಲ್ಲಿ ಕಳೆದ ಸೀಸನ್​ನ ಅತೀ ಹೆಚ್ಚು ವಿಕೆಟ್​ ಉರುಳಿಸಿದ ಬೌಲರ್ ಕಗಿಸೋ ರಬಾಡ ಡೆಲ್ಲಿ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

  ಇತ್ತ ರಾಜಸ್ಥಾನ್ ರಾಯಲ್ಸ್ ಈ ಬಾರಿ ಪರಿಣಾಮಕಾರಿಯಾಗಿ ಬೌಲಿಂಗ್ ಸಂಘಟಿಸಬೇಕಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಯುವ ಎಡಗೈ ವೇಗಿ ಚೇತನ್ ಸಕರಿಯಾ ಹೊರತುಪಡಿಸಿ ಉಳಿದೆಲ್ಲಾ ಬೌಲರುಗಳು ದುಬಾರಿಯಾಗಿದ್ದರು. ಹೀಗಾಗಿ ಬಲಿಷ್ಠ ರಿಷಭ್ ಪಂತ್, ರಹಾನೆ, ಸ್ಟೋಯಿನಿಸ್, ಹೆಟ್ಮೆಯರ್​​ನಂತಹ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಡೆಲ್ಲಿ ತಂಡವನ್ನು ಕಟ್ಟಿಹಾಕಲು ವಿಶೇಷ ಯೋಜನೆಯೊಂದಿಗೆ ಸಂಜು ಸ್ಯಾಮ್ಸನ್ ಅ್ಯಂಡ್ ಟೀಮ್​ ಕಣಕ್ಕಿಳಿಯಲಿದೆ.

  ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತೇವಟಿಯಾ, ಮಹಿಪಾಲ್ ಲೊಮರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಾಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನಮ್ ವೊಹ್ರಾ , ಕ್ರಿಸ್ ಮೋರಿಸ್, ಚೇತನ್ ಸಕರಿಯಾ, ಕೆ.ಸಿ.ಕರಿಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.

  ಡೆಲ್ಲಿ ಕ್ಯಾಪಿಟಲ್ಸ್​: ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್ , ರಿಪಾಲ್ ಪಟೇಲ್, ಲುಕ್ಮನ್ ಹುಸೇನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್
  Published by:zahir
  First published: