IPL 2021: ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದ RCB

ಮ್ಯಾಕ್ಸ್​ವೆಲ್ ನಿರ್ಗಮನದ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಎಬಿಡಿ ಕೇವಲ 27 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಈ ಹಂತದಲ್ಲಿ ಎಬಿಡಿಗೆ ಸಾಥ್ ನೀಡಿದ ಕೈಲ್ ಜೇಮಿಸನ್ ಕೂಡ ಸಿಕ್ಸ್-ಫೋರ್​ಗಳನ್ನು ಬಾರಿಸಿ ಮಿಂಚಿದರು. ಪರಿಣಾಮ 19 ಓವರ್ ಮುಕ್ತಾಯದ ವೇಳೆ ಆರ್​ಸಿಬಿ ಸ್ಕೋರ್ 183 ಕ್ಕೇರಿತು.

RCB

RCB

  • Share this:
    ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಿಂದೆಂದೂ ಕಾಣದ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಬಾರಿಯ ಐಪಿಎಲ್​ನಲ್ಲಿ ಬಲಿಷ್ಠ ಮುಂಬೈಗೆ ಸೋಲುಣಿಸಿ ಅಭಿಯಾನ ಆರಂಭಿಸಿರುವ ಆರ್​ಸಿಬಿ ಇದೀಗ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಗ್ಲೆನ್​ ಮ್ಯಾಕ್ಸ್ ವೆಲ್ ಮತ್ತು ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್​ಗೆ ಕೆಕೆಆರ್ ಬೌಲರುಗಳು ತತ್ತರಿಸಿದರು.

    ಬೌಲಿಂಗ್ ಪಿಚ್​ ಎಂದು ವಿಶ್ಲೇಷಿಸಲಾಗುತ್ತಿದ್ದ ಮೈದಾನದಲ್ಲಿ ಆರ್​ಸಿಬಿ ಜೋಡೆತ್ತುಗಳು ಅಬ್ಬರಿಸಿದರು. ಅಲ್ಲದೆ ಕೆಕೆಆರ್ ಬೌಲರುಗಳನ್ನು ಬೆಂಡೆತ್ತುವ ಮೂಲಕ ಚೆನ್ನೈ ಪಿಚ್ ಬ್ಯಾಟಿಂಗ್​ಗೂ ಸಹಕಾರಿ ಎಂದು ತೋರಿಸಿದರು. 2ನೇ ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಪವರ್​ಪ್ಲೇನಲ್ಲಿ 3 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ ಸಿಡಿಸಿ ತಂಡದ ಮೊತ್ತವನ್ನು 6 ಓವರ್​ನಲ್ಲಿ 45ಕ್ಕೇರಿಸಿದರು. ಪವರ್​ಪ್ಲೇ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸ್​ವೆಲ್ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಿಂಚಿದರು.

    12ನೇ ಓವರ್​ನಲ್ಲಿ ಜೊತೆಯಾದ ಎಬಿ ಡಿವಿಲಿಯರ್ಸ್ ಅವರೊಂದಿಗೆ ಮ್ಯಾಕ್ಸ್​ವೆಲ್ ಭರ್ಜರಿ ಇನಿಂಗ್ಸ್ ಕಟ್ಟಿದರು. ಪರಿಣಾಮ ಆರ್​ಸಿಬಿ ರನ್​ ಗತಿ ಹೆಚ್ಚಾಗುತ್ತಾ ಹೋಯಿತು. 15 ಓವರ್​ ಮುಕ್ತಾಯದ ವೇಳೆ ಈ ಜೋಡಿ ತಂಡದ ಮೊತ್ತವನ್ನು 134ಕ್ಕೆ ತಂದು ನಿಲ್ಲಿಸಿದರು. ತಂಡದ ಮೊತ್ತ 148 ಆಗಿದ್ದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಕ್ಯಾಚ್ ನೀಡಿದ ಮ್ಯಾಕ್ಸ್​ವೆಲ್ ತಮ್ಮ ಬಿರುಸಿನ ಇನಿಂಗ್ಸ್ ಅಂತ್ಯಗೊಳಿಸಿದರು. ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್ 49 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಸೂಪರ್ ಬೌಂಡರಿಗಳೊಂದಿಗೆ 78 ರನ್​ ಬಾರಿಸಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.



    ಮ್ಯಾಕ್ಸ್​ವೆಲ್ ನಿರ್ಗಮನದ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಎಬಿಡಿ ಕೇವಲ 27 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಈ ಹಂತದಲ್ಲಿ ಎಬಿಡಿಗೆ ಸಾಥ್ ನೀಡಿದ ಕೈಲ್ ಜೇಮಿಸನ್ ಕೂಡ ಸಿಕ್ಸ್-ಫೋರ್​ಗಳನ್ನು ಬಾರಿಸಿ ಮಿಂಚಿದರು. ಪರಿಣಾಮ 19 ಓವರ್ ಮುಕ್ತಾಯದ ವೇಳೆ ಆರ್​ಸಿಬಿ ಸ್ಕೋರ್ 183 ಕ್ಕೇರಿತು.



    ಅಂತಿಮ ಓವರ್​ನಲ್ಲಿ ಎಬಿಡಿ 2 ಫೋರ್, 1 ಸಿಕ್ಸ್​ ತಂಡದ ಮೊತ್ತವನ್ನು 204 ಕ್ಕೆ ತಂದು ನಿಲ್ಲಿಸಿದರು. ಕೇವಲ 34 ಎಸೆತಗಳಲ್ಲಿ 3 ಸಿಕ್ಸ್, 9 ಬೌಂಡರಿಗಳೊಂದಿಗೆ ಎಬಿಡಿ ಅಜೇಯ 78 ರನ್​ ಬಾರಿಸಿದರು. ಈ ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್ 166 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್​ಸಿಬಿ 38 ರನ್​ಗಳ ಭರ್ಜರಿ ಜಯ. ಅಲ್ಲದೆ ಈ ಬಾರಿಯ ಮೊದಲ ಹ್ಯಾಟ್ರಿಕ್ ಜಯ. ಅದರೊಂದಿಗೆ ಐಪಿಎಲ್​ನ ಚೊಚ್ಚಲ ಹ್ಯಾಟ್ರಿಕ್ ವಿಜಯ ತನ್ನದಾಗಿಸಿಕೊಂಡಿದೆ.



    ಹೌದು, ಕಳೆದ 13 ಸೀಸನ್​ ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿ ಇದೇ ಮೊದಲ ಬಾರಿಗೆ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇಂತಹದೊಂದು ಸಾಧನೆಯನ್ನು ಇದುವರೆಗೆ ಆರ್​ಸಿಬಿ ಮಾಡಿರಲಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ಪಡೆ ಹೊಸ ಇತಿಹಾಸ ನಿರ್ಮಿಸಿದೆ. ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಆರಂಭದಲ್ಲೇ ಅಗ್ರಸ್ಥಾನಕ್ಕೇರಿದೆ.



    ಒಟ್ಟಿನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿರುವ ಆರ್​ಸಿಬಿ, ಹ್ಯಾಟ್ರಿಕ್ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಂದುವರೆಸಿದೆ. ಪ್ರಸ್ತುತ ಆರ್​ಸಿಬಿ ತಂಡ ಸಾಂಘಿಕ ಪ್ರದರ್ಶನ ನೋಡಿದರೆ ಈ ಸಲ ಕಪ್ ಗೆಲ್ಲುವ ಫೇವರೇಟ್ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
    Published by:zahir
    First published: