RCB vs SRH : ಮತ್ತೆ ಡಕ್​ ಔಟ್​ ಆದ ವಿರಾಟ್​ ಕೊಹ್ಲಿ, ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ ಎಂದ ಫ್ಯಾನ್ಸ್​!

ಎರಡನೇ ಓವರ್​ನಲ್ಲಿ ಆರ್​ಸಿಬಿ ತಂಡ ಪ್ರಮುಖ ಮೂರು ವಿಕೆಟ್​ ಉರುಳಿದೆ. ಕೇವಲ 5ರನ್​ಗಳಿಸಿದ ಡು ಪ್ಲೆಸಿಸ್ (Du Plessis)​ 2ನೇ ಓವರ್​ನ 2ನೇ ಬಾಲ್​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ. ಬಳಿಕ  ಸ್ಕ್ರೀಜ್​ಗೆ ಬಂದಿದ್ದ ವಿರಾಟ್​ ಕೊಹ್ಲಿ (Virat Kohli) ಮತ್ತೆ ಡಕ್ ಔಟ್ (Duck Out)​ ಆಗಿದ್ದಾರೆ.

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

  • Share this:
ಇಂದು 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯವು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ದಕ್ಷಿಣದ ಪ್ರಮುಖ ತಂಡದಗಳಾದ ಸನ್ ರೈಸರ್ಸ್ ಹೈದರಾಬಾದ್ (Sun Risers Hyderabad) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ತಂಡಗಳು 15ನೇ ಅವೃತ್ತಿಯ ಐಪಿಎಲ್ ನಲ್ಲಿ ಕಾದಾಟ ನಡೆಸುತ್ತಿದೆ. ಟಾಸ್ (Toss) ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿಗೆ ಆಘಾತ ಎದುರಾಗಿದೆ.

ಮತ್ತೆ ಸೊನ್ನೆ ಸುತ್ತಿದ ವಿರಾಟ್​ ಕೊಹ್ಲಿ

ಎರಡನೇ ಓವರ್​ನಲ್ಲಿ ಆರ್​ಸಿಬಿ ತಂಡ ಪ್ರಮುಖ ಮೂರು ವಿಕೆಟ್​ ಉರುಳಿದೆ. ಕೇವಲ 5ರನ್​ಗಳಿಸಿದ ಡು ಪ್ಲೆಸಿಸ್ (Du Plessis)​ 2ನೇ ಓವರ್​ನ 2ನೇ ಬಾಲ್​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ. ಬಳಿಕ  ಸ್ಕ್ರೀಜ್​ಗೆ ಬಂದಿದ್ದ ವಿರಾಟ್​ ಕೊಹ್ಲಿ (Virat Kohli) ಮತ್ತೆ ಡಕ್ ಔಟ್ (Duck Out)​ ಆಗಿದ್ದಾರೆ. ಇವರ ಹಿಂದೆಯೆ ಅನೂಜ್ ರಾವತ್ (Anuj Rawat)​ ಪೆವಿಲಿಯನ್​ ಸೇರಿಕೊಂಡಿದ್ದಾರೆ.

ಮಾರ್ಕೋ ಯಾನ್ಸೆನ್​ ದಾಳಿಗೆ ತತ್ತರಿಸಿದ ಆರ್​ಸಿಬಿ!

ಮಾರ್ಕೋ ಯಾನ್ಸೆನ್ ಮಾರಕ ದಾಳಿಗೆ ಆರ್‌ಸಿಬಿ ಕೇವಲ 2 ಓವರ್‌ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ನಾಯಕ ಫಾಫ್ ಡುಪ್ಲೆಸಿಸ್ ಕೇವಲ 5 ರನ್ ಸಿಡಿಸಿ ಔಟಾದರು. ಇನ್ನು ವಿರಾಟ್ ಕೊಹ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಕೈಚೆಲ್ಲಿದರು. ಕೊಹ್ಲಿ ಡಕೌಟ್ ಆದರು. ಇನ್ನು ಅನೂಜ್ ರಾವತ್ ಕೂಡ ಡಕೌಟ್ ಆದರು. ಈ ಮೂಲಕ 8 ರನ್‌ಗೆ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮ್ಯಾಕ್ಸ್​ವೆಲ್​ ಕೂಡ ಹೆಚ್ಚು ಹೊತ್ತು ಸ್ಕ್ರೀಜ್​ನಲ್ಲಿ ನಿಲ್ಲಲಿಲ್ಲ. 4ನೇ ಓವರ್​ 2ನೇ ಬಾಲ್​ನಲ್ಲಿ ನಟರಾಜ್​ಗೆ ಮ್ಯಾಕ್ಸ್​ವೆಲ್​ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಹೈದರಾಬಾದ್​​! ತೂಫಾನ್​ನ ತಡೆಯೋಕೆ ಸಾಧ್ಯನಾ ಅಂತಿದ್ದಾರೆ ಆರ್​ಸಿಬಿ ಫ್ಯಾನ್ಸ್​​​

68ರನ್​ಗಳಿಗೆ ಆಲ್​ಔಟ್​ ಆದ ಆರ್​ಸಿಬಿ!

ಕಳಪೆ ಬ್ಯಾಟಿಂಗ್ ನಿರ್ವಹಣೆ ತೋರಿದ ಆರ್ ಸಿಬಿ (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ. ಮಾರ್ಕೋ ಜಾನ್ಸೆನ್ (Marco Jansen) ಎಸೆದ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿಯೇ ಆಘಾತ ಕಂಡ ಆರ್ ಸಿಬಿ (RCB), ಸನ್ ರೈಸರ್ಸ್ (Sunrisers Hyderabad) ವಿರುದ್ಧ 68 ರನ್​ಗಳಿಗೆ ಆಲೌಟ್ ಆಗಿದೆ. ಇದು ಐಪಿಎಲ್ ಇತಿಹಾಸದ 6ನೇ ಕನಿಷ್ಠ ಸ್ಕೋರ್ ಎನಿಸಿದೆ. ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಲೇ ಬಂದ ಆರ್​ಸಿಬಿ, ಎಲ್ಲಿಯೂ ಕಮ್​ಬ್ಯಾಕ್​ ಮಾಡಲೇ ಇಲ್ಲ.

ಇದನ್ನೂ ಓದಿ: ಶೂನ್ಯ ಸಾಧನೆ: ಕೊಹ್ಲಿ vs ರೋಹಿತ್ ಶರ್ಮಾ ಪೈಪೋಟಿ!

ಸನ್​ರೈಸರ್ಸ್ ಬೌಲರ್​ಗಳ ಆರ್ಭಟ!

ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ.ನಟರಾಜನ್ (10ಕ್ಕೆ 3), ಜೆ.ಸುಚಿತ್ (12ಕ್ಕೆ 2) ದಾಳಿಗೆ ನಲುಗಿದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗೆ ಆಲೌಟ್ ಆಗಿದೆ. ಆರ್​ಸಿಬಿ ಬ್ಯಾಟಿಂಗ್​ ಲೈನ್​ ಅಪ್​ ಅನ್ನೇ ಸನ್​ರೈಸರ್ಸ್ ಹೈದರಾಬಾದ್​ ಬೌಲರ್​ಗಳು ಉಡೀಸ್​ ಮಾಡಿದ್ದಾರೆ. ಈ ಸೀಸನ್​ನಲ್ಲಿ ಉತ್ತಮವಾಗಿ ಆಡುತ್ತಾ ಬಂದಿದ್ದ ಆರ್​ಸಿಬಿ ತಂಡ, ಇಂದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದೆ. ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ರೀತಿ ಕಮ್​ಬ್ಯಾಕ್​ ಮಾಡುತ್ತೆ ಕಾದು ನೋಡಬೇಕಿದೆ.
Published by:Vasudeva M
First published: