• ಹೋಂ
  • »
  • ನ್ಯೂಸ್
  • »
  • IPL
  • »
  • RCB vs PBKS: 'ಕಿಂಗ್ಸ್​'ಗೆ ಶರಣಾದ ಆರ್​ಸಿಬಿ, ಇದೆಲ್ಲಾ ಇವ್ರು ಮಾಡ್ತಿದ್ದಾರೆ ಅನ್ಕೊಂಡ್ರಾ? ಗ್ರಹ -ಗತಿ ಸರಿಯಿಲ್ಲ ಅಷ್ಟೇ!

RCB vs PBKS: 'ಕಿಂಗ್ಸ್​'ಗೆ ಶರಣಾದ ಆರ್​ಸಿಬಿ, ಇದೆಲ್ಲಾ ಇವ್ರು ಮಾಡ್ತಿದ್ದಾರೆ ಅನ್ಕೊಂಡ್ರಾ? ಗ್ರಹ -ಗತಿ ಸರಿಯಿಲ್ಲ ಅಷ್ಟೇ!

ಪಂಹಾಬ್​ ಕಿಂಗ್ಸ್​ಗೆ ಗೆಲುವು

ಪಂಹಾಬ್​ ಕಿಂಗ್ಸ್​ಗೆ ಗೆಲುವು

ಐಪಿಎಲ್ 15ನೇ ಆವೃತ್ತಿಯಲ್ಲಿನ 60ನೇ ಪಂದ್ಯದಲ್ಲಿ ಇಂದು (ಮೇ, 13) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಪಂದ್ಯ ಸಾಕಷ್ಟು ಕುತೂಹಲ ಘಟ್ಟಕ್ಕೆ ತಲುಪಿತ್ತು ಬೃಹತ್​ ರನ್​ ಗುರಿ ಬೆನ್ನತ್ತಿದ್ದ ಆರ್​ಸಿಬಿ ಸೋಲುಂಡಿದೆ.

ಮುಂದೆ ಓದಿ ...
  • Share this:

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಐಪಿಎಲ್ 15ನೇ ಆವೃತ್ತಿಯಲ್ಲಿನ 60ನೇ ಪಂದ್ಯದಲ್ಲಿ ಇಂದು (ಮೇ, 13) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಪಂದ್ಯ ಸಾಕಷ್ಟು ಕುತೂಹಲ ಘಟ್ಟಕ್ಕೆ ತಲುಪಿತ್ತು ಬೃಹತ್​ ರನ್​ ಗುರಿ ಬೆನ್ನತ್ತಿದ್ದ ಆರ್​ಸಿಬಿ ಸೋಲುಂಡಿದೆ. ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 60ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಿತ್ತು.  ಮುಂಬೈನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ (Toss)​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬೌಲಿಂಗ್​ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​ ಕಿಂಗ್ಸ್​ (Punjab Kings) ಬೃಹತ್​ ಮೊತ್ತ ಕಲೆಹಾಕಿದೆ.


ಮೊದಲಿನಿಂದಲೂ ಹಿಡಿತ ಸಾಧಿಸಿಕೊಂಡು ಬಂದಿದ್ದ ಪಂಜಾಬ್​ 9 ವಿಕೆಟ್​ ಕಳೆದುಕೊಂಡು 209 ರನ್​ ಬಾರಿಸಿತ್ತು. ಈ ಗುರಿ ಬೆನ್ನತ್ತಿದ್ದ ಆರ್​ಸಿಬಿ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡ 155 ರನ್​ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಆರ್​ಸಿಬಿ ಪ್ಲೇ ಆಫ್​ ಹಾದಿ ಕೊಂಚ ಕಠಿಣವಾಗಿದೆ


ಗುರಿ ಮುಟ್ಟುವಲ್ಲ ವಿಫಲವಾದ ಆರ್​ಸಿಬಿ!


ಪ್ಲೇ ಆಫ್ (Play Off) ಹಂತಕ್ಕೆ ತಲುಪುವ ನಿಟ್ಟಿನಲ್ಲಿ ಆರ್​ಸಿಬಿ (RCB) ತಂಡಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಟೆನ್ಶನ್​ನಲ್ಲೇ ಸ್ಕ್ರೀಜ್​ ಇಳಿದ ಆರ್​ಸಿಬಿ ಆಟಗಾರರು ಗುರಿ ಮುಟ್ಟಲಾಗದೇ ಪಂಜಾಬ್​ ಕಿಂಗ್ಸ್​ಗೆ ಶರಣಾಗಿದ್ದಾರೆ.  ಮೊದಲು ಬ್ಯಾಟಿಂಗ್​ಗೆ ಬಂದ ವಿರಾಟ್​ ಹಾಗೂ ಫಾಫ್​ ಜೋಡಿ 33 ರನ್​ ಪೇರಿಸಿತ್ತು. ಈ ವೇಳೆ ವಿರಾಟ್​ ಕೊಹ್ಲಿ ಸಿಂಪಲ್​ ಕ್ಯಾಚ್​ಗೆ ಬಲಿಯಾದರು. 14 ಬಾಲ್​ಗಳಲ್ಲಿ 20 ರನ್​ಗಳಿಸಿ ವಿರಾಟ್​ ಔಟ್​ ಆದ್ರೆ, ತಂಡಕ್ಕೆ ಒಂದು ರನ್ ಸೇರುವಷ್ಟರಲ್ಲಿ ನಾಯಕ ಫಾಫ್​ ಕೂಡ ಔಟ್​ ಆದರು. 8 ಬಾಲ್​ಗಳಲ್ಲಿ 10 ರನ್​ಗಳಿಸಿ ಕ್ಯಾಚ್ ನೀಡಿ ಫಾಫ್​ ಪೆವಿಲಿಯನ್ ಸೇರಿಕೊಂಡರು.


ಭರವಸೆ ಮೂಡಿಸಿದ್ದ ಮ್ಯಾಕ್ಸ್​ವೆಲ್​!


ಇದಾದ ಬಳಿಕ ಮಹಿಪಾಲ್​ ಕೂಡ 6 ರನ್​ಗಳಿಸಿ ಶಿಖರ್​ ಧವನ್​ಗೆ ಕ್ಯಾಚ್​ ನೀಡಿ ಔಟ್​ ಆದರು. ಈ ವೇಳೆ ಸ್ಕ್ರೀಜ್​ಗೆ ಬಂದ ಮ್ಯಾಕ್ಸ್​ವೆಲ್​ ಆಕ್ರಮಣಕಾರಿ ಆಟವಾಡಿದರು. 22 ಬಾಲ್​ಗಳಲ್ಲಿ 35 ರನ್​ಗಳಿಸಿ ಆರ್​ಸಿಬಿ ಪಾಳಯದಲ್ಲಿ ಭರವಸೆ ಮೂಡಿಸಿದ್ದರು. ಇವರಿಗೆ ಸಾಥ್​ ಕೊಟ್ಟ ರಜತ್ ಪಟಿದರ್​ ಕೂಡ 26ರನ್​ಗಳಿಸಿದ್ದರು. ತಂಡ 104 ರನ್​ಗಳಿಸಿದ್ದಾಗ ರಜತ್​  ಮತ್ತೆ ಕ್ಯಾಚ್​ಗೆ ಬಲಿಯಾದರು. ಇನ್ನೂ ಮ್ಯಾಕ್ಸ್​ವೆಲ್​ ಕೂಡ ಇವರ ಹಿಂದೆಯೆ ಪೆವಿಲಿಯನ್​ ಸೇರಿಕೊಂಡರು. ಕಡೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಹಬ್ಬಾಜ್​ ಹೋರಾಡಿದರು ಗುರಿ ಮುಟ್ಟುವಲ್ಲಿ ಆರ್​ಸಿಬಿ ವಿಫಲವಾಗಿದೆ.


ಇದನ್ನೂ ಓದಿ: ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ! IPLನಲ್ಲಿ 6500 ರನ್ ಸಿಡಿಸಿದ ಆಟಗಾರ ಇವರೊಬ್ಬರೇ


ಬೋರ್​ ಸ್ಟೋ-ಲಿವಿಂಗ್​ ಸ್ಟೋನ್​ ಅಬ್ಬರ!


ಜಾನಿ ಬೇರ್ ಸ್ಟೋ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಕಲೆಹಾಕಿದೆ.  ನಿರೀಕ್ಷೆಯಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಜಾನಿ ಬೇರ್ ಸ್ಟೋ (66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (70 ರನ್, 42 ಎಎಸೆತ, 5 ಬೌಂಡರಿ, 4 ಸಿಕ್ಸರ್ ) ಸ್ಪೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 209 ರನ್ ಬಾರಿಸಿತು.


ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದ ಪಂಜಾಬ್​ 'ಕಿಂಗ್ಸ್'! ಇಲ್ಲೇ ನೋಡಿ ಆರ್​ಸಿಬಿ ಬೌಲರ್ಸ್ ಎಡವಿದ್ದು


ಬೌಲಿಂಗ್​ನಲ್ಲಿ ಎಡವಿದ ಆರ್​ಸಿಬಿ ಬೌಲರ್ಸ್!


ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ವಿಕೆಟ್ ಗೆ ಶಿಖರ್ ಧವನ್ ಹಾಗೂ ಜಾನಿ ಬೇರ್ ಸ್ಟೋ ಸ್ಪೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳಲ್ಲಿ ಈ ಜೋಡಿ 60 ರನ್ ಕಲೆಹಾಕಿತ್​. ಪವರ್​ ಪ್ಲೇನಲ್ಲಿ ವಿಕೆಟ್​ ಪಡೆಯುವಲ್ಲಿ ಆರ್​ಸಿಬಿ ಬೌಲರ್​ಗಳು ವಿಫಲವಾದರು. ನಾಲ್ಕು ಓವರ್ ಗಳಲ್ಲೇ ಅರ್ಧಶತಕದ ಗಡಿ ದಾಟಿದ್ದ ಈ ಜೋಡಿಗೆ 5ನೇ ಓವರ್ ನ ಕೊನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕಡಿವಾಣ ಹಾಕಿದರು.5 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಧವನ್, ಮ್ಯಾಕ್ಸ್ ವೆಲ್ ಗೆ ಬೌಲ್ಟ್ ಆಗಿ ನಿರ್ಗಮಿಸಿದಾಗ ಪಂಜಾಬ್ ತಂಡ 60 ರನ್ ಸಿಡಿಸಿತ್ತು. ಇದಾದ ಬಳಿಕ ಬೇರ್ ಸ್ಟೋ ಆಟಕ್ಕೆ ಮಿತಿ ಇರಲಿಲ್ಲ. ಮೊಹಮದ್ ಸಿರಾಜ್ ಎಸೆದ ಓವರ್ ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಬೇರ್ ಸ್ಟೋ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

Published by:Vasudeva M
First published: