ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 60ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಸೆಣಸಾಡುತ್ತಿದೆ. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (Punjab Kings) ಬೃಹತ್ ಮೊತ್ತ ಕಲೆಹಾಕಿದೆ. ಮೊದಲಿನಿಂದಲೂ ಹಿಡಿತ ಸಾಧಿಸಿಕೊಂಡು ಬಂದಿದ್ದ ಪಂಜಾಬ್ 9 ವಿಕೆಟ್ ಕಳೆದುಕೊಂಡು 209 ರನ್ ಬಾರಿಸಿದೆ. ಆರ್ಸಿಬಿ 210ರನ್ಗಳ ಬೃಹತ್ ಟಾರ್ಗೆಟ್ ಚೇಸ್ ಮಾಡಬೇಕಿದೆ. ಪ್ಲೇ ಆಫ್ (Play Off) ಹಂತಕ್ಕೆ ತಲುಪುವ ನಿಟ್ಟಿನಲ್ಲಿ ಆರ್ಸಿಬಿ (RCB) ತಂಡಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇದಲ್ಲವಾದಲ್ಲಿ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಹಾದಿ ಕಠಿಣವಾಗಲಿದೆ.
ಬೋರ್ ಸ್ಟೋ-ಲಿವಿಂಗ್ ಸ್ಟೋನ್ ಅಬ್ಬರ!
ಜಾನಿ ಬೇರ್ ಸ್ಟೋ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಕಲೆಹಾಕಿದೆ. ನಿರೀಕ್ಷೆಯಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಜಾನಿ ಬೇರ್ ಸ್ಟೋ (66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (70 ರನ್, 42 ಎಎಸೆತ, 5 ಬೌಂಡರಿ, 4 ಸಿಕ್ಸರ್ ) ಸ್ಪೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 209 ರನ್ ಬಾರಿಸಿತು.
ಬೌಲಿಂಗ್ನಲ್ಲಿ ಎಡವಿದ ಆರ್ಸಿಬಿ ಬೌಲರ್ಸ್!
ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ವಿಕೆಟ್ ಗೆ ಶಿಖರ್ ಧವನ್ ಹಾಗೂ ಜಾನಿ ಬೇರ್ ಸ್ಟೋ ಸ್ಪೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳಲ್ಲಿ ಈ ಜೋಡಿ 60 ರನ್ ಕಲೆಹಾಕಿತ್. ಪವರ್ ಪ್ಲೇನಲ್ಲಿ ವಿಕೆಟ್ ಪಡೆಯುವಲ್ಲಿ ಆರ್ಸಿಬಿ ಬೌಲರ್ಗಳು ವಿಫಲವಾದರು. ನಾಲ್ಕು ಓವರ್ ಗಳಲ್ಲೇ ಅರ್ಧಶತಕದ ಗಡಿ ದಾಟಿದ್ದ ಈ ಜೋಡಿಗೆ 5ನೇ ಓವರ್ ನ ಕೊನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕಡಿವಾಣ ಹಾಕಿದರು.5 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಧವನ್, ಮ್ಯಾಕ್ಸ್ ವೆಲ್ ಗೆ ಬೌಲ್ಟ್ ಆಗಿ ನಿರ್ಗಮಿಸಿದಾಗ ಪಂಜಾಬ್ ತಂಡ 60 ರನ್ ಸಿಡಿಸಿತ್ತು. ಇದಾದ ಬಳಿಕ ಬೇರ್ ಸ್ಟೋ ಆಟಕ್ಕೆ ಮಿತಿ ಇರಲಿಲ್ಲ. ಮೊಹಮದ್ ಸಿರಾಜ್ ಎಸೆದ ಓವರ್ ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಬೇರ್ ಸ್ಟೋ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಇದನ್ನೂ ಓದಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್ರೌಂಡರ್ ಟೂರ್ನಿಯಿಂದ ಔಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್ವುಡ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಜಾನಿ ಬೈರ್ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್(ನಾಯಕ), ಜಿತೇಶ್ ಶರ್ಮಾ(ವಿ.ಕೀ), ಲಿಯಾಮ್ ಲಿವಿಂಗ್ಸ್ಟೋನ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್ಪ್ರೀತ್ ಬ್ರಾರ್, ಅರ್ಶ್ದೀಪ್ ಸಿಂಗ್
ಇದನ್ನೂ ಓದಿ: ರೋಹಿತ್ ಶರ್ಮಾಗೆ ಹೆಚ್ಚಿದ ತಲೆನೋವು, ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ
RCB - PBKS ಹೆಡ್ ಟು ಹೆಡ್:
ಐಪಿಎಲ್ ನಲ್ಲಿ ಒಟ್ಟಾರೆಯಾಗಿ ಉಭಯ ತಂಡಗಳು ಈವರೆಗೆ 29 ಪಂದ್ಯಗಳನ್ನು ಆಡಿವೆ. ಇದರಲ್ಲಿ 13 ಫಮದ್ಯವನ್ನು ಆರ್ಸಿಬಿ ಗೆದ್ದರೆ 16 ಪಂದ್ಯಗಳನ್ನು ಪಮಜಾಬ್ ಗೆದ್ದಿದೆ. ಕಳೆದ ಬಾರಿ ನಡೆದ ಐಪಿಎಲ್ 2021ರಲ್ಲಿ ಆಡಿಕದ 1 ಪಂದ್ಯವನ್ನೂ ಸಹ ಪಂಜಾಬ್ ಕಿಂಗ್ಸ್ ತಂಡ ಗೆದ್ದಿದೆ. ಅದರಲ್ಲಿಯೂ ಮೊದಲು ಬ್ಯಾಟಿಂಗ್ ಮಾಡಿದಾಗ ಆರ್ಸಿಬಿ 7 ಮತ್ತು ಪಂಜಾಬ್ 6 ಬಾರಿ ಗೆದ್ದರೆ, ಚೇಸಿಂಗ್ ನಲ್ಲಿ ಬೆಂಗಳೂರು 6 ಮತ್ತು ಪಂಜಾಬ್ ತಂಡ 10 ಬಾರಿ ಗೆದ್ದಿದೆ. ಒಟ್ಟಾರೆ ಅಂಕಿಅಂಶಗಳ ಪ್ರಕಾರ ಪಂಜಾಬ್ ಕಿಂಗ್ಸ್ ತಂಡವು ಬೆಂಗಳೂರು ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದ್ದಂತೆ ಕಾಣುತ್ತಿದೆ. ಆದರೆ ಈ ಬಾರಿ ಪಂಜಾಬ್ ತಂಡಕ್ಕಿಂತ ಬೆಂಗಳೂರು ತಂಡವು ಹೆಚ್ಚುಬಲಿಷ್ಠವಾಗಿದ್ದಂತೆ ಕಾಣುತ್ತಿದ್ದು, ಇಂದಿನ ಪಂದ್ಯ ಗೆಲ್ಲುವ ಮೆಚ್ಚಿನ ತಂಡವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ