RCB vs CSK: ಚೆನ್ನೈ ಕಿಂಗ್ಸ್​ ವಿರುದ್ಧ ಗೆದ್ದು ಕುಣಿದಾಡಿದ ಆರ್​ಸಿಬಿ! ಸಿಎಸ್​ಕೆ ಪ್ಲೇ ಆಫ್​ ಕನಸು ನುಚ್ಚುನೂರು

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ 20 ಓವರ್​ಗಳಿಗೆ 8 ವಿಕೆಟ್​ ಕಳೆದುಕೊಂಡು 173 ರನ್​ಗಳ ಗುರಿ ನೀಡಿತ್ತು. ಆದರೆ, ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ವಿಫಲವಾಗಿದೆ. 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ಚೆನ್ನೈ 160 ರನ್​ಗಳಿಸಿತು.

ಸಿಎಸ್​ಕೆ, ಆರ್​ಸಿಬಿ

ಸಿಎಸ್​ಕೆ, ಆರ್​ಸಿಬಿ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಮುಖಾಮುಖಿಯಾಗಿತ್ತು. ಇಂದಿನ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(MCA) ಕ್ರೀಡಾಂಗಣದಲ್ಲಿ ನಡೆಯಿತು ಇಂದಿನ ಪಂದ್ಯವು ಐಪಿಎಲ್ 15ನೇ ಸೀಸನ್​ನ ಹೈವೋಲ್ಟೇಜ್ (High voltage) ಪಂದ್ಯವಾಗಿತ್ತು. ಟಾಸ್​ ಗೆದ್ದು ಚೆನ್ನೈ ಬೌಲಿಂಗ್​ ಆಯ್ಕೆಮಾಡಿಕೊಂಡಿತ್ತು. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ 20 ಓವರ್​ಗಳಿಗೆ 8 ವಿಕೆಟ್​ ಕಳೆದುಕೊಂಡು 173 ರನ್​ಗಳ ಗುರಿ ನೀಡಿತ್ತು. ಆದರೆ, ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ವಿಫಲವಾಗಿದೆ. 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡ ಚೆನ್ನೈ 160 ರನ್​ಗಳಿಸಿತು.

ಫಿನಿಶರ್​ ಆಗಲಿಲ್ಲ ಧೋನಿ!

ಬೆಸ್ಟ್​ ಫಿನಿಶರ್​ ಎಂದೇ ಖ್ಯಾತರಾಗಿರುವ  ಎಂ.ಎಸ್​.ಧೋನಿ ಇಂದಿನ ಪಂದ್ಯದಲ್ಲಿ ಮ್ಯಾಚ್​ ಗೆಲ್ಲಿಸಲು ವಿಫಲರಾದರು. ಕೇವಲ ಎರಡು ರನ್​ಗಳಿಸಿ ಧೋನಿ ಔಟಾದರು. ಹೆಜಲ್​ವುಡ್​ ಎಸೆದ ಬೌಲನ್ನು ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಧೋನಿ ಕ್ಯಾಚ್​ ನೀಡಿ ಔಟಾದರು. ಇನ್ನು ಈ ಪಂದ್ಯದ ಸೋಲಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪ್ಲೇ ಆಫ್​ ಕನಸು ನುಚ್ಚುನೂರಾಗಿದೆ.

ಉತ್ತಮ ಆರಂಭ ಪಡೆದಿದ್ದ ಆರ್​ಸಿಬಿ!

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ (RCB) ತಂಡ, ಚೆನ್ನೈ (CSK) ತಂಡದ ಉತ್ತಮ ದಾಳಿಯ ಮುಂದೆ ರನ್ ಗಳಿಸಲು ಪರದಾಡಿತು. ಮಹಿಪಾಲ್ ಲೋಮ್ರರ್ ಆಡಿದ ಉತ್ತಮ ಇನ್ನಿಂಗ್ಸ್ ನೆರವಿನಿಂದ ಆರ್ ಸಿಬಿ ತಂಡ 8 ವಿಕೆಟ್ ಗೆ 173  ರನ್ ಪೇರಿಸಿತು. ಕೊನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ (24 ರನ್, 16 ಎಸೆತ, 1 ಬೌಂಡರಿ, 2 ಸಿಕ್ಸರ್) ಅಬ್ಬರಿಸಿದ್ದರಿಂದ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ಹೊಸ ಮನೆ ಖರೀದಿಸಿದ ಪೃಥ್ವಿ ಶಾ, ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ!

62 ರನ್​ಗಳ ಉತ್ತಮ ಜೊತೆಯಾಟವಾಡಿದ ಕೊಹ್ಲಿ-ಡು ಪ್ಲೆಸಿಸ್​!

ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ ಗೆ 62 ರನ್ ಗಳ ಉತ್ತಮ ಜೊತೆಯಾಟವಾಡಿದರು. ಮೊದಲ ಮೂರು ಓವರ್ ಗಳಲ್ಲಿ ಮೂರು ಬೌಂಡರಿಗಳನ್ನು ಸಿಡಿಸಿದ್ದ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಫಾಫ್ ಡು ಪ್ಲೆಸಿಸ್ (38 ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (30 ರನ್,  33 ಎಸೆತ, 3 ಬೌಂಡರಿ, 1 ಸಿಕ್ಸರ್) ಚೆನ್ನೈ ಬೌಲರ್ ಗಳಿಗೆ ಕಾಟ ಕೊಟ್ರು.

ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಲೋಮ್ರರ್​!

79 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ, ನಾಲ್ಕನೇ ವಿಕೆಟ್ ಗೆ ಮಹಿಪಾಲ್ ಲೋಮ್ರರ್ (42ರನ್, 27 ಎಸೆತ,  3 ಬೌಂಡರಿ, 2 ಸಿಕ್ಸರ್) ಹಾಗೂ ರಜತ್ ಪಾಟೀದಾರ್ ( 21 ರನ್, 15 ಎಸೆತ, 1 ಬೌಂಡರಿ, 1 ಸಿಕ್ಸರ್) 44 ರನ್ ಗಳ ಬಿರುಸಿನ ಜೊತೆಯಾಟವಾಡಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ತಂಡದ ಮೊತ್ತ 123 ರನ್ ಆಗಿದ್ದಾಗ ಡ್ವೈನ್ ಪ್ರಿಟೋರಿಯಸ್, ರಜತ್ ಪಾಟೀದಾರ್ ರನ್ನು ಔಟ್ ಮಾಡಿದರು.

ಇದನ್ನೂ ಓದಿ: Anushka Sharma ಸೀರೆ ಬಾಡಿಗೆ ಪಡೆದಿದ್ದ ಡು ಪ್ಲೆಸಿಸ್​ ಪತ್ನಿ ಇಮಾರಿ! ನೋಡೋಕೆ ಕ್ಯೂಟ್​ ಕಾಣ್ತೀರಾ ಎಂದ ನೆಟ್ಟಿಗರು

ಉತ್ತಮ ಆರಂಭದ ಹೊರತಾಗಿಯೂ ಇನ್ನಿಂಗ್ಸ್ ನ ಕೊನೆಯ ಓವರ್ ಗಳಲ್ಲಿ ಸಾಕಷ್ಟು ವಿಕೆಟ್ ಗಳನ್ನು ಕಳೆದುಕೊಂಡ ಆರ್ ಸಿಬಿ ತಂಡ ಚೆನ್ನೈ ವಿರುದ್ಧ ಬೃಹತ್ ಮೊತ್ತ ಬಾರಿಸುವ ಆಸೆಯನ್ನು ತಪ್ಪಿಸಿಕೊಂಡಿತು. ಮುಂದಿನ ಪಂದ್ಯಗಳಲ್ಲಿ ಎರಡು ತಂಡಗಳು ಎಲ್ಲಾ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.
Published by:Vasudeva M
First published: