RCB vs CSK: ಟಾಸ್ ಗೆದ್ದು ಬೌಲಿಂಗ್​ ಮಾಡ್ತಿರೋ ಸಿಎಸ್​ಕೆ, ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್​ಸಿಬಿ ಬಾಯ್ಸ್​!

ಇಂದಿನ ಪಂದ್ಯವು ಐಪಿಎಲ್ 15ನೇ ಸೀಸನ್​ನ ಹೈವೋಲ್ಟೇಜ್ (High voltage) ಪಂದ್ಯವಾಗಿದ್ದು, ಇಂದು ಗೆದ್ದವರು ಪ್ಲೇ ಆಫ್ (Play Off)  ಹಾದಿ ಸ್ವಲ್ಪ ಮಟ್ಟಿಗೆ ಸುಗಮವಾಗಲಿದೆ. ಟಾಸ್ (Toss) ಗೆದ್ದು ಬೌಲಿಂಗ್ (Bowling) ಆಯ್ಕೆ ಮಾಡಿಕೊಂಡಿದೆ.

ಧೋನಿ, ವಿರಾಟ್​ ಕೊಹ್ಲಿ

ಧೋನಿ, ವಿರಾಟ್​ ಕೊಹ್ಲಿ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಸೆಣಸಾಡುತ್ತಿದೆ. ಇಂದಿನ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(MCA) ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದಿನ ಪಂದ್ಯವು ಐಪಿಎಲ್ 15ನೇ ಸೀಸನ್​ನ ಹೈವೋಲ್ಟೇಜ್ (High voltage) ಪಂದ್ಯವಾಗಿದ್ದು, ಇಂದು ಗೆದ್ದವರು ಪ್ಲೇ ಆಫ್ (Play Off)  ಹಾದಿ ಸ್ವಲ್ಪ ಮಟ್ಟಿಗೆ ಸುಗಮವಾಗಲಿದೆ. ಟಾಸ್ (Toss) ಗೆದ್ದು ಬೌಲಿಂಗ್ (Bowling) ಆಯ್ಕೆ ಮಾಡಿಕೊಂಡಿರುವ ಸಿಎಸ್​ಕೆ, ಬೆಂಗಳೂರು ತಂಡಕ್ಕೆ ಮತ್ತೊಂದು ಸೋಲುಣಿಸಲು ಪಕ್ಕಾ ಪ್ಲ್ಯಾನ್​ ಮಾಡಿಕೊಂಡಿದೆ.

ಇತ್ತ ಸೋಲಿನ ಸೇಡು ತೀರಿಸಿಕೊಳ್ಳವ ತವಕದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೆ.ತತ ಸೋಲಿನಿಂದ ಕಂಗೆಟ್ಟಿರುವ ಡುಪ್ಲೇಸಿಸ್ ನೇತೃತ್ವದ ಆರ್​ಸಿಬಿ ತಂಡಕ್ಕೆ ಇಂದಿನ ಪಂದ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಧೋನಿ (Dhoni) ನಾಯಕತ್ವದ ಸಿಎಸ್​ಕೆ ತಂಡಕ್ಕೂ ಇದೆ.

ಇಂದಿನ ಪಂದ್ಯದಲ್ಲಿ ಬೌಲರ್​ಗಳ ಪ್ರಭಾವ ಹೆಚ್ಚು!

ಎಂಸಿಎ ಸ್ಟೇಡಿಯಂನಲ್ಲಿರುವ ಪಿಚ್ ಇಲ್ಲಿಯವರೆಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯ ಮಾಡಿದೆ. ಹಿಂದಿನ ಪಂದ್ಯಗಳು ಕೆಲವು ಯೋಗ್ಯ ಸ್ಕೋರ್‌ಗಳಿಗೆ ಸಾಕ್ಷಿಯಾಗಿದ್ದವು, ಆದರೆ ಹೊಸ ಬಾಲ್ ಬೌಲರ್‌ಗಳು ಪಂದ್ಯದ ಮೇಲೆ ಪ್ರಭಾವ ಬೀರಿದ್ದಾರೆ. ಸಂಜೆಯ ಆಟವಾದ್ದರಿಂದ, ಇಬ್ಬನಿ ಅಂಶವು ಕಾರ್ಯರೂಪಕ್ಕೆ ಬರಬಹುದು. ಆದರೆ, ಟಾಸ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್​ ಮಾಡಲು ಆಹ್ವಾನ ನೀಡಿದೆ.

ಇದನ್ನೂ ಓದಿ: ಲಾಸ್ಟ್​ ಸೀಸನ್​ನಲ್ಲಿ​ ಅಬ್ಬರಿಸಿದ್ದವ್ರು, ಈ ಸೀಸನ್​ನಲ್ಲಿ ಗಪ್​ಚುಪ್​​! ಕೋಟಿ ಕೋಟಿ ಹಣ ವೇಸ್ಟ್

ಹ್ಯಾಟ್ರಿಕ್​ ಸೋಲುಂಡಿರುವ ಬೆಂಗಳೂರು ಬಾಯ್ಸ್​!

ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಆಡಿದ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಇದಾದ ಬಳಿಕ ಸತತ 3 ಪಂದ್ಯಗಳನ್ನು ಸೋಲುವ ಮೂಲಕ ಪ್ಲೇ ಆಫ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad), ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ಎದುರು ಆಘಾತಕಾರಿ ಸೋಲು ಕಂಡಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮೇಲುಗೈ!

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 29 ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಅರ್‌ಸಿಬಿ ತಂಡವು 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದು ಪಂದ್ಯದ ಫಲಿತಾಂಶ ಹೊರಬಿದ್ದಿರಲಿಲ್ಲ.

ಇದನ್ನೂ ಓದಿ: Anushka Sharma ಸೀರೆ ಬಾಡಿಗೆ ಪಡೆದಿದ್ದ ಡು ಪ್ಲೆಸಿಸ್​ ಪತ್ನಿ ಇಮಾರಿ! ನೋಡೋಕೆ ಕ್ಯೂಟ್​ ಕಾಣ್ತೀರಾ ಎಂದ ನೆಟ್ಟಿಗರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11

ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11

ರುತುರಾಜ್ ಗಾಯಕ್ವಾಡ್, ಡೆವೋನ್ ಕೊನ್ವೆ, ಮೊಯಿನ್ ಆಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಪ್ರೆಟ್ರೋರಿಯಸ್, ಸಿಮ್ರಜಿತ್ ಸಿಂಗ್, ಮುಕೇಶ್ ಚೌಧರಿ, ಮಹೀಶಾ ತೀಕ್ಷನಾ
Published by:Vasudeva M
First published: