ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಬೇಕಾದರೆ ಈ ಮೂರು ಸವಾಲನ್ನು ಎದುರಿಸಬೇಕು!

ಈ ಬಾರಿಯ ಮೊದಲ ಕ್ವಾಲಿಫೈಯರ್​ ​ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಸೆಣೆಸಲಿವೆ. ಈ ಮ್ಯಾಚ್​ನಲ್ಲಿ ಗೆದ್ದವರು ನೇರವಾಗಿ ಫೈನಲ್​ ಪ್ರವೇಶಿಸುತ್ತಾರೆ. ಸೋತರವರಿಗೆ ಎರಡನೇ ಅವಕಾಶ ಇರಲಿದೆ .

 • Share this:
  ಮುಂಬೈ ಇಂಡಿಯನ್ಸ್​ ನೀಡಿದ 150 ರನ್​ಗಳ ಟಾರ್ಗೆಟ್​ಅನ್ನು ಅನಾಯಾಸವಾಗಿ ತಲುಪುವ ಮೂಲಕ ಸನ್​​ ರೈಸರ್ಸ್​ ಹೈದರಾಬಾದ್​ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಪ್ಲೇಆಫ್​ಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಅಲ್ಲದೆ, ಪ್ಲೇಆಫ್​ ಕನಸು ಕಂಡಿದ್ದ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡವನ್ನು ಮನೆಗೆ ಕಳುಹಿಸಿದೆ.

  ಈ ಬಾರಿಯ ಮೊದಲ ಕ್ವಾಲಿಫೈಯರ್​ ​ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಸೆಣೆಸಲಿವೆ. ಈ ಮ್ಯಾಚ್​ನಲ್ಲಿ ಗೆದ್ದವರು ನೇರವಾಗಿ ಫೈನಲ್​ ಪ್ರವೇಶಿಸುತ್ತಾರೆ. ಸೋತರವರಿಗೆ ಎರಡನೇ ಅವಕಾಶ ಇರಲಿದೆ . ಇನ್ನು ಎಲಿಮಿನೇಟರ್​ ಮ್ಯಾಚ್​ನಲ್ಲಿ ಆರ್​ಸಿಬಿ ಹಾಗೂ ಹೈದರಾಬಾದ್​ ನಡುವೆ ಹಣಾಹಣಿ ಏರ್ಪಡಲಿದೆ. ಎರಡನೇ ಕ್ವಾಲಿಫೈಯರ್ ಮ್ಯಾಚ್​ನಲ್ಲಿ ಎಲಿಮಿನೇಟರ್​ ಮ್ಯಾಚ್​ನಲ್ಲಿ ಗೆದ್ದವರು ಮೊದಲ ಕ್ವಾಲಿಫೈಯರ್​​ನಲ್ಲಿ ಸೋತವರ ನಡುವೆ ಹಣಾಹಣಿ ಏರ್ಪಡಲಿದೆ.

  ಈ ಬಾರಿ ಆರ್​ಸಿಬಿ ಗೆಲ್ಲಬೇಕೆಂದರೆ ಅದು ಸುಲಭದ ಮಾತಲ್ಲ. ಮುಂಬೈ ತಂಡ ಅಂಕಪಟ್ಟಿಯಲ್ಲಿ 18 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕೂಡ ಮತ್ತೆ ಗೆಲುವಿನ ಲಯಕ್ಕೆ ಬಂದಿದೆ. ಇನ್ನು, ಹೈದರಾಬಾದ್​ ಕೂಡ ಗೆಲುವಿನ ಲಯ ಕಂಡು ಕೊಂಡಿದೆ. ಹೀಗಾಗಿ, ಈ ಬಾರಿ ಕಪ್​ ಗೆಲ್ಲಬೇಕಾದರೆ ಆರ್​​ಸಿಬಿ ಬಲಿಷ್ಠ ಮೂರು ತಂಡಗಳನ್ನು ಎದುರಿಸಬೇಕಿದೆ. ಮೂರು ಮ್ಯಾಚ್​ಗಳನ್ನು ಗೆದ್ದರೆ ಮಾತ್ರ ಆರ್​ಸಿಬಿಗೆ ಕಪ್​ ಸಿಗಲಿದೆ.
  Published by:Rajesh Duggumane
  First published: