RCB vs KKR: ಟಾಸ್​ ಗೆದ್ದ ಆರ್​ಸಿಬಿ.. ಬೌಲಿಂಗ್​​ ಆಯ್ಕೆ! ಕೆಕೆಆರ್​ಗೆ ಸೋಲಿನ ಶಾಕ್​ ನೀಡುತ್ತಾ ಡು ಪ್ಲೆಸಿಸ್​ ಪಡೆ?

ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದೆ. ಐಪಿಎಲ್​ 15ನೇ ಆವೃತ್ತಿಯ ಎಲ್ಲ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದಾರೆ. ಆರ್​ಸಿಬಿ ಕೂಡ ಇಂದು ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದೆ. ಚೇಸಿಂಗ್ ಮಾಡಿದರೆ ಗೆಲ್ಲುವ ವಿಶ್ವಾಸದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಇದೆ.

ಡು ಪ್ಲೆಸಿಸ್​, ಶ್ರೇಯಸ್​ ಅಯ್ಯರ್​

ಡು ಪ್ಲೆಸಿಸ್​, ಶ್ರೇಯಸ್​ ಅಯ್ಯರ್​

 • Share this:
  ಐಪಿಎಲ್​ನಲ್ಲಿ (IPL 2022) ಇಂದು ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ-ಕೆಕೆಆರ್ (RCB vs KKR) ತಂಡಗಳು ಮುಖಾಮುಖಿಯಾಗಿವೆ. ಈಗಾಗಲೇ ಉಭಯ ತಂಡಗಳು ಮೊದಲ ಪಂದ್ಯವನ್ನಾಡಿದೆ. ಅದರಲ್ಲಿ ಆರ್​ಸಿಬಿ(RCB) ಪಂಜಾಬ್ ಕಿಂಗ್ಸ್(Punjab Kigs) ವಿರುದ್ದ ಸೋತರೆ, ಕೆಕೆಆರ್ ಸಿಎಸ್​ಕೆ ವಿರುದ್ದ ಜಯ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇಬೇಕಾಗಿದೆ. ಇನ್ನು ಆರ್​ಸಿಬಿಗೆ ಕೆಕೆಆರ್ ತಂಡವನ್ನು ಮಣಿಸುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಉಭಯ ತಂಡಗಳು ಇದುವರೆಗೆ 29 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಕೆಕೆಆರ್ ಗೆದ್ದಿದ್ದು ಬರೋಬ್ಬರಿ 16 ಬಾರಿ. ಅಂದರೆ ಆರ್​ಸಿಬಿ ಕೆಕೆಆರ್​ ವಿರುದ್ದ 13 ಬಾರಿ ಮಾತ್ರ ಜಯ ಸಾಧಿಸಿದೆ.ಕೊಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. 

  ಇಂದಿನ ಪಂದ್ಯದಲ್ಲಿ ಗೆಲ್ತಾರಾ ಆರ್​​ಸಿಬಿ?

  ಮೊದಲ ಪಂದ್ಯದಲ್ಲಿ ಆರ್‌ಸಿಬಿ ಬೃಹತ್ ಮೊತ್ತವನ್ನು ಗಳಿಸಿದ ಹೊರತಾಗಿಯೂ ತಮ್ಮ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿ ಆಘಾತ್ಕಕೆ ಒಳಗಾಯಿತು. ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದೆ. ಐಪಿಎಲ್​ 15ನೇ ಆವೃತ್ತಿಯ ಎಲ್ಲ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದಾರೆ. ಆರ್​ಸಿಬಿ ಕೂಡ ಇಂದು ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದೆ. ಚೇಸಿಂಗ್ ಮಾಡಿದರೆ ಗೆಲ್ಲುವ ವಿಶ್ವಾಸದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಇದೆ.

  ಇಂದಿನ ಪಂದ್ಯದಲ್ಲಿ ಆರ್​ಸಿಬಿಗೆ ಕಠಿಣ ಸವಾಲು!

  ಕೆಕೆಆರ್ ತಂಡ ಸಾಕಷ್ಟು ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದು, ಆರ್‌ಸಿಬಿಗೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಯಾವ ರೀತಿಯ ಪ್ರದರ್ಶನ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

  ಇದನ್ನೂ ಓದಿ: ಕೆ.ಎಲ್ ರಾಹುಲ್ ಹೆಸರಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ತಾಯಿ ಹೇಳಿದ ಸಿಹಿ ಸುಳ್ಳು ಏನ್ ಗೊತ್ತಾ?

  ಡಿವೈ ಪಾಟೀಲ್​ ಗ್ರೌಂಡ್​ ಪಿಚ್ ರಿಪೋರ್ಟ್!

  ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಎರಡೂ ತಂಡಗಳು ಕೂಡ 200ರ ಗಡಿ ದಾಟಿದೆ. ಆರ್‌ಸಿಬಿ ಬೃಹತ್ ಮೊತ್ತ ಗಳಿಸಿದನ್ನು ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿ ಬೆನ್ನಟ್ಟಲು ಯಶಸ್ವಿಯಾಗಿತ್ತು. ಹಿಗಾಗಿ ಮತ್ತೊಂದು ಹೈಸ್ಕೋರ್ ಪಂದ್ಯ ನಡೆದರೆ ಅಚ್ಚರಿಯಿಲ್ಲ. ಪಿಚ್ ಹಸಿರಿನಿಂದ ಕೂಡಿದ್ದ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಕಡಿಮೆಯಿದೆ. ಆದರೆ ವೇಗಿಗಳಿಗೆ ಈ ಪಿಚ್ ಲಾಭದಾಯಕವಾಗಿರಲಿದೆ. ಹೀಗಾಗಿ ಎರಡೂ ತಂಡಗಳಲ್ಲಿ ನಾಳೆ ವೇಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

  ಇದನ್ನೂ ಓದಿ: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂದಿನ ಪಂದ್ಯ, ಖಾತೆ ತೆರೆಯಲಿದ್ಯಾ RCB?

  ರಾಯಲ್ ಚಾಲೆಂಜರ್ಸ್ ಬೆಂಗಳೂರು  ಪ್ಲೇಯಿಂಗ್​ 11

  ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್

  ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್​ 11

  ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಉಮೇಶ್ ಯಾದವ್, ಟೀಂ ಸೌಥಿ, ವರುಣ್ ಚಕ್ರವರ್ತಿ
  Published by:Vasudeva M
  First published: