ಈ ಬಾರಿಯ IPL 2021 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ (Sun Risers Hyderabad) ಎರಡು ಗೆಲುವಿನೊಂದಿಗೆ ಬೆಂಗಳೂರು ಚಾಲೆಂಜರ್ಸ್‌ನೊಂದಿಗೆ ಹೋರಾಡಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಸನ್ ರೈಸರ್ಸ್ ತಂಡವು ನೀಡಿದ 142 ಟಾರ್ಗೆಟ್ ಅನ್ನು ಸ್ವೀಕರಿಸಿದ್ದ ಬೆಂಗಳೂರು ತಂಡವನ್ನು ಸೋಲಿಸಿತು. ಇದರಿಂದ ಆರ್‌ಸಿಬಿಯು (Royal Challengers Bangalore) ಎರಡನೇ ಸ್ಥಾನದಲ್ಲಿ ನೆಲೆಗೊಳ್ಳುವ ಅವಕಾಶದಿಂದ ವಂಚಿತವಾಗಿದೆ. ಭುವನೇಶ್ವರ್ ಕುಮಾರ್ (SRH Pacer Bhuvanshwar Kumar) ಎಸೆತದ ಕೊನೆಯ ಓವರ್‌ನಲ್ಲಿ ಕೊಹ್ಲಿ ಪಡೆಗೆ 13 ರನ್‌ಗಳ ಅಗತ್ಯವಿತ್ತು. ಈ ಸಮಯದಲ್ಲಿ ಎಬಿಡಿ (AB de Villiers) ಸಿಕ್ಸ್ ಸಿಡಿಸಿದರೂ 4 ರನ್‌ಗಳ ಕೊರತೆ ತಂಡಕ್ಕೆ ಸೋಲಿನ ಕಹಿಯನ್ನು ಉಣ್ಣಿಸಿತು ಹೀಗೆ ಸನ್ ರೈಸರ್ಸ್ ತಮ್ಮ ಮೂರನೇ ಗೆಲುವನ್ನು ಸಾಧಿಸಿದರು.
ಸನ್‌ರೈಸರ್ಸ್‌ನ ಗೆಲುವು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಟ್ರೋಲ್‌ಗೆ ಅವಕಾಶವನ್ನು ನೀಡುವುದರೊಂದಿಗೆ ಮೇಮ್‌ಗಳನ್ನು ದಾಖಲಿಸಲು ಅವಕಾಶ ನೀಡಿತು. ಹಾಸ್ಯಮಯವಾದ ಬೇರೆ ಬೇರೆ ಮೀಮ್ಸ್‌ಗಳನ್ನು ದಾಖಲಿಸುವುದರೊಂದಿಗೆ ಕ್ರಿಕೆಟ್ ಪ್ರೇಮಿಗಳು ಸನ್ ರೈಸರ್ಸ್ ಗೆಲುವನ್ನು ಟ್ರೋಲ್ ಮಾಡಿದ್ದಾರೆ. ಬರೇ ಎರಡು ಪಂದ್ಯಗಳನ್ನು ಜಯಿಸಿರುವ ಸನ್ ರೈಸರ್ಸ್, ಸಿಎಸ್‌ಕೆಯೊಂದಿಗೆ (Chennai Super Kings) ಮೂರನೇ ಜಯವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಂಡು ತಂಡವನ್ನು ಪುನಃ ಮೊದಲಿನ ಹಂತಕ್ಕೆ ತರುವುದು ಕಷ್ಟಕರವಾದುದು. ಮ್ಯಾಕ್ಸ್ ಅವರ ರನ್‌ಔಟ್ ಆಟದ ದಿಕ್ಕನ್ನೇ ಬದಲಾಯಿಸಿತು. ಎಬಿಯೊಂದಿಗೆ ಆಟವನ್ನು ನಾವು ಕಳೆದುಕೊಳ್ಳುವ ಪ್ರಶ್ನೆಯೇ ಇರಲಿಲ್ಲ ಆದರೆ ಆಡುವವರು ಸ್ಟ್ರೈಕ್ ರೇಟ್‌ನಲ್ಲಿರಬೇಕಾದುದು ತಂಡದ ಗೆಲುವಿಗೆ ಅನಿವಾರ್ಯ. ಸನ್ ರೈಸರ್ಸ್ ಕೊನೆಯ ಎಸೆತಗಳನ್ನು ನಾಜೂಕಾಗಿ ಎಸೆದಿದ್ದು ಚೆನ್ನಾಗಿಯೇ ಆಟವಾಡಿದ್ದಾರೆ. ಹೀಗಾಗಿ ಸೋಲು ನಮ್ಮನ್ನು ಹಿಂಬಾಲಿಸಿತು ಎಂದು ನಾಯಕ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
SRH winning a match after going out of the playoffs race pic.twitter.com/Vep92KisQz
— Sagar (@sagarcasm) October 6, 2021
SRH after beating RCB pic.twitter.com/EH9sZsDKyw
— Rajabets India🇮🇳👑 (@smileandraja) October 6, 2021
Thankyou SRH brothers , always liked you guys. ❤️ pic.twitter.com/AnHfZLtpvc
— ` (@FourOverthrows) October 6, 2021
SRH to 2 points :#RCBvsSRH pic.twitter.com/xnlQ47lkpf
— Raghav Masoom (@comedibanda) October 6, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ