ಒಂದೇ ಓವರ್​ನಲ್ಲಿ 37 ರನ್; ಅದಕ್ಕೆ ಮುಂಚೆ ಜಡೇಜಾಗೆ ಧೋನಿ ಕೊಟ್ಟ ಸಲಹೆ ವರ್ಕೌಟ್ ಆಗಿತ್ತು

ಮುಂಬೈನಲ್ಲಿ ನಡೆದ ಸಿಎಸ್​​ಕೆ ವರ್ಸಸ್ ಆರ್​ಸಿಬಿ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ಕೊನೆಯ ಓವರ್​ನಲ್ಲಿ ರವೀಂದ್ರ ಜಡೇಜಾ 37 ರನ್ ಚಚ್ಚಿದರು. ಆ ಸ್ಫೋಟಕ ಬ್ಯಾಟಿಂಗ್ ಕ್ಷಣದ ಬಗ್ಗೆ ಜಡೇಜಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ

ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ

 • Share this:
  ಮುಂಬೈ: ಈ ಬಾರಿಯ ಐಪಿಎಲ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಚೊಚ್ಚಲ ಸೋಲುಣಿಸಲು ಪ್ರಮುಖ ಕಾರಣರಾದವರು ರವೀಂದ್ರ ಜಡೇಜಾ. 28 ಬಾಲ್​ನಲ್ಲಿ 62 ರನ್ ಭಾರಿಸಿ, ಹಾಗೂ 13 ರನ್ನಿತ್ತು 3 ವಿಕೆಟ್ ಪಡೆದು ಚೆನ್ನೈ ಸೂಪರ್ ಕಿಂಗ್ ಗೆಲುವಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದರು. ನಿನ್ನೆಯ ಪಂದ್ಯದಲ್ಲಿ ಸಿಎಸ್​ಕೆ ಬ್ಯಾಟಿಂಗ್ ಪಡೆಗ ಸಿಂಹಸ್ವಪ್ನವಾಗಿ ಕಾಡಿದ್ದ ಬೆಂಗಳೂರಿನ ಹರ್ಷಲ್ ಪಟೇಲ್ ಅವರಿಗೆ ಅಂತಿಮವಾಗಿ ಸಿಂಹಸ್ವಪ್ನವಾದವರು ರವೀಂದ್ರ ಜಡೇಜಾ. ಹರ್ಷಲ್ ಅವರ ಕೊನೆಯ ಓವರ್​ನಲ್ಲಿ ಜಡೇಜಾ 5 ಸಿಕ್ಸರ್ ಒಳಗೊಂಡಂತೆ ಬರೋಬ್ಬರಿ 37 ರನ್ ಚಚ್ಚಿದ್ದರು. ಒಂದೇ ಓವರ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಜಡೇಜಾ ಸರಿಗಟ್ಟಿದರು. ಮೇಲಾಗಿ 170 ರನ್ ಮೊತ್ತಕ್ಕೆ ನಿಲ್ಲುವ ಕುರುಹು ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 191 ರನ್ ಪೇರಿಸಲು, ಆ ಮೂಲಕ ಆರ್​ಸಿಬಿ ಬ್ಯಾಟಿಂಗ್ ಮೇಲೆ ಆರಂಭದಲ್ಲೇ ಮಾನಸಿಕ ಒತ್ತಡ ಹಾಕಲು ಕಾರಣದವರು ಜಡೇಜಾ.

  ಇನ್ನು, ಹರ್ಷಲ್ ಪಟೇಲ್ ಆರ್​ಸಿಬಿಯ ಟ್ರಂಪ್ ಕಾರ್ಡ್ ಬೌಲರ್. ಡೆತ್ ಬೌಲಿಂಗ್ ಸ್ಪೆಷಲಿಸ್ಟ್. ಇನ್ನಿಂಗ್ಸ್​ನ ಕೊನೆಯ ಓವರ್ ಬೌಲ್ ಮಾಡುವ ಮುನ್ನ ಹರ್ಷಲ್ ಪಟೇಲ್ 3 ಓವರ್​ನಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಕಬಳಿಸಿದ್ದರು. ಇಷ್ಟು ಎಫೆಕ್ಟಿವ್ ಆಗಿದ್ದ ಹರ್ಷಲ್ ಪಟೇಲ್ ಅಂತಿಮ ಓವರ್​ನಲ್ಲಿ ಜಡೇಜಾ ಕೈಯಲ್ಲಿ 37 ರನ್ ಹೊಡೆಸಿಕೊಂಡಿದ್ದು ಅಚ್ಚರಿ ತಂದಿತ್ತು. ಆದರೆ, ಇದರ ಹಿಂದಿನ ಸೀಕ್ರೆಟನ್ನ ಜಡೇಜಾ ಬಹಿರಂಗಪಡಿಸಿದ್ದಾರೆ. ಜಡೇಜಾ ಬ್ಯಾಟಿಂಗ್ ಮಾಡುವಾಗ ಮತ್ತೊಂದು ಬದಿಯಲ್ಲಿದ್ದವರು ತಂಡದ ಕ್ಯಾಪ್ಟನ್ ಎಂ.ಎಸ್. ಧೋನಿ. ಕೊನೆಯ ಓವರ್​ನಲ್ಲಿ ಹರ್ಷಲ್ ಪಟೇಲ್ ಯಾವ ದಿಕ್ಕಿನಲ್ಲಿ ಬೌಲಿಂಗ್ ಮಾಡಬಹುದು ಎಂಬುದನ್ನು ಅಂದಾಜು ಮಾಡಿ ಧೋನಿ ತಮಗೆ ಹೇಳಿದರು ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.

  ಕೊನೆಯ ಓವರ್​ನಲ್ಲಿ ಹೊಡಿಬಡಿ ಆಡಲು ನಿರ್ಧರಿಸಿದ್ದೆ. ಆಗ ಹರ್ಷಲ್ ಪಟೇಲ್ ಬಹುಶಃ ಆಫ್​ಸೈಡ್ ಹೊರಗೆ ಎಲ್ಲಿಯಾದರೂ ಬೌಲ್ ಮಾಡಬಹುದು ಅಂತ ಮಹಿ ಭಾಯ್ (ಧೋನಿ) ಹೇಳಿದರು ಎಂದು ರವೀಂದ್ರ ಜಡೇಜಾ ತಮ್ಮ ಕೊನೆಯ ಓವರ್ ಆರ್ಭಟದ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಆ ಓವರ್​ನಲ್ಲಿ ಸತತ 4 ಸಿಕ್ಸರ್ ಸೇರಿ ಐದು ಸಿಕ್ಸರ್​ಗಳು ಬಂದವು. ಹರ್ಷಲ್ ಪಟೇಲ್ ಅದೂವರೆಗೂ ತೋರಿದ ಅದ್ಭುತ ಪ್ರದರ್ಶನ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

  ಇದನ್ನೂ ಓದಿ: CSK vs RCB: ರಾಯಲ್ ಚಾಲೆಂಜರ್ಸ್​ ಮುಂದೆ ಚೆನ್ನೈ ಸೂಪರ್ ಕಿಂಗ್ಸ್

  ನಿನ್ನೆಯ ಈ ಪಂದ್ಯ ರವೀಂದ್ರ ಜಡೇಜಾ ವರ್ಸಸ್ ಆರ್​ಸಿಬಿ ಎಂಬಂತಾಗಿತ್ತು. ಬ್ಯಾಟಿಂಗ್ ಜೊತೆಗೂ ಜಡೇಜಾ ಬೌಲಿಂಗ್​ನಲ್ಲೂ ಅಬ್ಬರಿಸಿದ್ದರು. ಫೀಲ್ಡಿಂಗ್​ನಲ್ಲೂ ಅವರ ಕೈಚಳಕ ಎದ್ದು ತೋರಿತ್ತು. ಬ್ಯಾಟಿಂಗ್ ವೇಳೆ ಜಡೇಜಾ ಇನ್ನೂ ಒಂದೂ ಸ್ಕೋರು ಮಾಡದ ಸಂದರ್ಭದಲ್ಲಿ ಅವರ ಕ್ಯಾಚ್ ಡ್ರಾಪ್ ಮಾಡಿ ಜೀವದಾನ ಮಾಡಿದವರು ಡೇನಿಯಲ್ ಕ್ರಿಸ್ಟಿಯನ್. ಆದರೆ, ಕ್ರಿಸ್ಟಿಯನ್ ಬ್ಯಾಟಿಂಗ್ ಮಾಡುವ ಜಡೇಜಾ ಡೈರೆಕ್ಟ್ ಹಿಟ್ ಮಾಡಿ ರನೌಟ್ ಮಾಡಿದ್ದು ವಿಶೇಷ. ಎಲ್ಲಾ ಮೂರು ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಅವರಿಗೆ ಈ ಪಂದ್ಯದಲ್ಲಿ ಒಂದೂ ಕ್ಯಾಚ್ ಹಿಡಿಯುವ ಅವಕಾಶ ಸಿಗಲಿಲ್ಲ ಎಂದು ಬೇಸರಪಟ್ಟಿದ್ದಾರೆ.

  ನಿನ್ನೆ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ 191 ರನ್​ಗಳಿಗೆ ಪ್ರತಿಯಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕೇವಲ 122 ರನ್ ಗಳಿಸಿ ಹೀನಾಯ ಸೋಲನುಭವಿಸಿತು. ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸಿಎಸ್​ಕೆ ಬಿಟ್ಟುಕೊಟ್ಟ ಆರ್​ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. ನಿನ್ನೆ ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನವನ್ನು ಸೂಪರ್ ಓವರ್​ನಲ್ಲಿ ಸೋಲಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
  Published by:Vijayasarthy SN
  First published: