Rohit Sharma: ಗಂಗೂಲಿ ಸಲಹೆಯನ್ನು ಧಿಕ್ಕರಿಸಿದ್ರಾ ರೋಹಿತ್ ಶರ್ಮಾ..!

Sourav Ganguly: ಇನ್ನು ಟೀಮ್ ಇಂಡಿಯಾ ಫಿಸಿಯೋ ನಿತಿನ್ ಪಟೇಲ್ ಮುಂಬೈ ಇಂಡಿಯನ್ಸ್​ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕೂಡ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ಕಾಳಜಿವಹಿಸುತ್ತಿದ್ದಾರೆ.

Rohit-Ganguly

Rohit-Ganguly

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಸರಣಿ ಆಡಲು ತೆರಳಲಿದೆ. ಈ ಸರಣಿಗಾಗಿ ಇತ್ತೀಚೆಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಅವರನ್ನು ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಅಲ್ಲದೆ ಫಿಟ್​ನೆಸ್ ಸಮಸ್ಯೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯಗಳಿಂದ ಹಿಟ್​ಮ್ಯಾನ್ ಹೊರಗುಳಿದಿದ್ದರು. ಇದಾಗ್ಯೂ ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡದಿರುವ ಬಗ್ಗೆ ಪ್ರಶ್ನೆಗಳೆದ್ದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಫಿಟ್​ನೆಸ್ ಸಾಧಿಸಿದರೆ ಖಂಡಿತವಾಗಿಯೂ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದರು.

    ಅಲ್ಲದೆ ಭವಿಷ್ಯದ ಹಿತ ದೃಷ್ಟಿಯಿಂದ ಗಂಗೂಲಿ ರೋಹಿತ್ ಶರ್ಮಾಗೆ ಬಹುಮುಖ್ಯ ಸಲಹೆಯೊಂದನ್ನು ನೀಡಿದ್ದರು. ತಂಡಕ್ಕೆ ಕಂಬ್ಯಾಕ್ ಮಾಡಲು ಅವರು ಅವಸರ ಪಡುವುದು ಬೇಡ. ಆತ ಮತ್ತೊಮ್ಮೆ ಗಾಯಗೊಳ್ಳುವುದನ್ನು ನೋಡಲಂತು ನಾನು ಬಯಸುವುದಿಲ್ಲ. ಆತನಿಗೆ ಮಂಡಿರಜ್ಜು ಗಾಯವಾಗಿದೆ. ಸಂಪೂರ್ಣ ಫಿಟ್ ಆಗದೇ ಕಣಕ್ಕಿಳಿಯುವುದರಿಂದ ಮತ್ತೊಮ್ಮೆ ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಮತ್ತೆ ಕ್ರಿಕೆಟ್ ಆಡಲು ಸುದೀರ್ಘ ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಆ ತಪ್ಪು ಮಾಡದಿರಿ ಎಂದು ಗಂಗೂಲಿ ಹೇಳಿದ್ದರು.

    ಇನ್ನು ಟೀಮ್ ಇಂಡಿಯಾ ಫಿಸಿಯೋ ನಿತಿನ್ ಪಟೇಲ್ ಮುಂಬೈ ಇಂಡಿಯನ್ಸ್​ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕೂಡ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ಕಾಳಜಿವಹಿಸುತ್ತಿದ್ದಾರೆ. ರೋಹಿತ್​ಗೂ ತನ್ನ ಸುದೀರ್ಘ ಕಾಲದ ಕ್ರಿಕೆಟ್ ಕೆರಿಯರ್‌ನ ಬಗ್ಗೆ ಅರಿವಿದೆ. ಹೀಗಾಗಿ ಭವಿಷ್ಯದ ಹಿತ ದೃಷ್ಟಿಯಿಂದ ಏನು ಮಾಡಬೇಕು ಎಂಬುದನ್ನು ತಿಳಿಯುವಷ್ಟು ಪ್ರೌಢಿಮೆಯನ್ನು ರೋಹಿತ್ ಹೊಂದಿದ್ದಾರೆ ಎಂದು ಸೌರವ್ ಗಂಗೂಲಿ ಹೇಳಿದ್ದರು.

    ಇನ್ನು ಫಿಸಿಯೋ ಕೂಡ ಪರಿಶೀಲಿಸಿ ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂಬ ಸಲಹೆ ನೀಡಿದ್ದು, ಹೀಗಾಗಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿಲ್ಲ ಎನ್ನಲಾಗಿದೆ. ಆದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಕೊನೆಯ ಲೀಗ್​ ಪಂದ್ಯದಲ್ಲಿ ಹಿಟ್​ಮ್ಯಾನ್ ಮತ್ತೆ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 4 ರನ್​ ಅಷ್ಟೇ ಗಳಿಸಲು ಶಕ್ತರಾಗಿದ್ದರು. ಅಲ್ಲದೆ ಫೀಲ್ಡಿಂಗ್ ವೇಳೆಯೂ ಈ ಹಿಂದಿನ ಚುರುಕು ಕಂಡು ಬಂದಿರಲಿಲ್ಲ.

    ಇದೀಗ ಟೀಮ್ ಇಂಡಿಯಾಗೆ ಮತ್ತೆ ಮರಳಲು ರೋಹಿತ್ ಶರ್ಮಾ ಫಿಸಿಯೋ ಸಲಹೆಯನ್ನು ಮೀರಿ ಮತ್ತೆ ಮೈದಾನಕ್ಕಿಳಿದ್ರಾ? ಹಾಗೆಯೇ ಸೌರವ್ ಗಂಗೂಲಿ ನೀಡಿದ ಸಲಹೆಯನ್ನು ಧಿಕ್ಕರಿಸಿ ಮತ್ತೆ ಬ್ಯಾಟ್ ಬೀಸಲು ಮುಂದಾದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಸನ್​ರೈಸರ್ಸ್​ ಹೈದರಾಬಾದ್​ ಪಂದ್ಯದ ಟಾಸ್ ವೇಳೆ ನಾನು ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಹೇಳಿದ್ದರು. ಆದರೆ ಇದಕ್ಕೂ ಕೆಲ ಗಂಟೆಗಳ ಮೊದಲು ಸೌರವ್ ಗಂಗೂಲಿ, ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದರೂ, ಇನ್ನೂ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
    Published by:zahir
    First published: