MI vs DC: ಒಂದ್ಕಡೆ ಮ್ಯಾಚ್​ ಸೋತಿದ್ದಕ್ಕೆ ಬೇಜಾರು.. ಇನ್ನೊಂದ್ಕಡೆ `ಆ’ ತಪ್ಪಿನಿಂದ ಭಾರಿ ದಂಡ ತೆತ್ತ ರೋಹಿತ್​ ಶರ್ಮಾ!

ಈ ಸೋಲಿನ ನಂತರ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(Rohit Sharma) ಮತ್ತೊಂದು ಆಘಾತ ಅನುಭವಿಸಿದ್ದಾರೆ. ನಿಧಾನಗತಿಯ ಓವರ್(Slow Over Rate) ರೇಟ್‌ಗಾಗಿ ರೋಹಿತ್ ಶರ್ಮಾ 12 ಲಕ್ಷ ರೂ. ದಂಡ ಕಟ್ಟಿದ್ದಾರೆ.

ರೋಹಿತ್​ ಶರ್ಮಾ

ರೋಹಿತ್​ ಶರ್ಮಾ

  • Share this:
ಮುಂಬೈ, ಮಾರ್ಚ್ 27: ಐಪಿಎಲ್ 2022(IPL 2022)ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಆಘಾತಕಾರಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತು (MI vs DC). ಈ ಸೋಲಿನ ನಂತರ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ(Rohit Sharma) ಮತ್ತೊಂದು ಆಘಾತ ಅನುಭವಿಸಿದ್ದಾರೆ. ನಿಧಾನಗತಿಯ ಓವರ್(Slow Over Rate) ರೇಟ್‌ಗಾಗಿ ರೋಹಿತ್ ಶರ್ಮಾ 12 ಲಕ್ಷ ರೂ. ದಂಡ ಕಟ್ಟಿದ್ದಾರೆ. ಐಪಿಎಲ್ ನಿಯಮಗಳ ಪ್ರಕಾರ 20ನೇ ಓವರ್ ಅನ್ನು 85ನೇ ನಿಮಿಷದಲ್ಲಿ ಆರಂಭಿಸುವುದು ಕಡ್ಡಾಯವಾಗಿದ್ದು, ನಿಗದಿತ ಸಮಯದಲ್ಲಿ ಮುಂಬೈ 20ನೇ ಓವರ್ ಆರಂಭಿಸಲಿಲ್ಲ. ಕಳೆದ ಋತುವಿನವರೆಗೆ ಪ್ರತಿ ತಂಡವು 85 ನಿಮಿಷಗಳಲ್ಲಿ 20 ಓವರ್‌ಗಳನ್ನು ಪೂರ್ಣಗೊಳಿಸಬೇಕಿತ್ತು.

ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ ಮುಂಬೈ ಇಂಡಿಯನ್ಸ್ ಎರಡನೇ ಬಾರಿಗೆ 24 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಮೂರನೇ ಬಾರಿಯೂ ಇದೇ ತಪ್ಪು ಮಾಡಿದರೆ 30 ಲಕ್ಷ ದಂಡ ಹಾಗೂ ಐಪಿಎಲ್ ಪಂದ್ಯವನ್ನು ಎದುರಿಸಬೇಕಾಗುತ್ತದೆ.

ನಿಧಾನಗತಿ ಬೌಲಿಂಗ್​ ಮಾಡಿದ್ದೆ ತಪ್ಪಾಯ್ತು!

ಮುಂಬೈ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸ್ಫೋಟಕ ಆಟದ ನೆರವಿನಿಂದ ದೆಹಲಿ ಗೆಲುವನ್ನು ಮುಂಬೈನಿಂದ ಕಸಿದುಕೊಂಡಿತು. ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 75 ರನ್ ಜೊತೆಯಾಟ ನಡೆಸಿದರು. ಲಲಿತ್ ಯಾದವ್ 38 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರೆ, ಅಕ್ಷರ್ ಪಟೇಲ್ 17 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ಪೃಥ್ವಿ ಶಾ (38) ಮತ್ತು ಶಾರ್ದೂಲ್ ಠಾಕೂರ್ (22) ಔಟಾದರು.

ಡೆಲ್ಲಿಗೆ ಗೆಲುವು ತಂದುಕೊಟ್ಟ ಅಕ್ಷಯ್​ ಕುಮಾರ್​!

ಮುಂಬೈ ನೀಡಿದ್ದ 178 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ 13.2 ಓವರ್ ಗಳಲ್ಲಿ 104/6 ಸ್ಕೋರ್ ಮಾಡಿತ್ತು, ಆದರೆ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಮುಂಬೈ ಗೆಲುವಿಗೆ ನೆರವಾಗಲಿಲ್ಲ. ಕೊನೆಯ 3 ಓವರ್‌ಗಳಲ್ಲಿ ಡೆಲ್ಲಿ ಗೆಲುವಿಗೆ 28 ​​ರನ್‌ಗಳ ಅಗತ್ಯವಿತ್ತು, ಆದರೆ ಡೇನಿಯಲ್ ಸ್ಯಾಮ್ಸ್ ಒಂದೇ ಓವರ್‌ನಲ್ಲಿ 24 ರನ್ ನೀಡಿದರು.

ಇದನ್ನೂ ಓದಿ: ಪಂಜಾಬ್ ಎದುರು ಅಬ್ಬರಿಸಿದ RCB, ಮೊದಲ ಪಂದ್ಯದಲ್ಲೇ ನಾಯಕನ ಆರ್ಭಟ

ಮೊದಲು ಬ್ಯಾಟ್ ಮಾಡಿದ ಮುಂಬೈ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್​ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಮುಂಬೈ ಪರ ನಾಯಕ ರೋಹಿತ್ ಶರ್ಮಾ 32 ಬಾಲ್​ಗಳಲ್ಲಿ 41 ರನ್​ಗಳಿಸಿದರೆ, ಇಶಾನ್ ಕಿಶನ್ 48 ಬಾಲ್​ಗಳಲ್ಲಿ 11 ಫೋರ್​ 1 ಸಿಕ್ಸ್ ನೆರವಿನಿಂದ ಬರೋಬ್ಬರಿ 81 ರನ್​ಗಳಿಸುವ ಮೂಲಕ ತಂಡದ ದೊಡ್ಡ ಮೊತ್ತ ಪೇರೆಪಿಸುವಲ್ಲಿ ಸಹಾಯ ಮಾಡಿದರು. ಉಳಿದಂತೆ ತಿಲಕ್ ವರ್ಮಾ 22 ರನ್​ ಗಳಿಸಿದರು.

ಇದನ್ನೂ ಓದಿ: ಅಲೆಲೆಲೇ.. ಯಾರೀ ಚೆಲುವೆ! ಈಗ ಐಪಿಎಲ್​ಗೆ ಕಳೆ ಬಂತು ಎಂದ ಕ್ರಿಕೆಟ್​ ಪ್ರೇಮಿಗಳು..

ವ್ಯರ್ಥವಾದ ಕಿಶನ್ ಹಾಗೂ ತಾಂಪಿ ಆಟ

ಇನ್ನು, ಮುಂಬೈ ಪರ ಬಿಸೆಲ್ ತಾಂಪಿ 4 ಓವರ್​ಗೆ 35 ರನ್​ ನೀಡಿ 3 ವಿಕೆಟ್ ಪಡೆದರೆ ಮುರುಗನ್ ಅಶ್ವೀನ್ 2 ಹಾಗೂ ಮೀಲ್ಸ್ 1 ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್​ ನಲ್ಲಿ ಅದ್ಭುತ ಪ್ರದರ್ಶನ ನೀಡಿದ  ಇಶಾನ್ ಕಿಶನ್, ಕೇವಲ 48 ಬಾಲ್​ಗಳಲ್ಲಿ 11 ಫೋರ್ ಮತ್ತು​ 1 ಸಿಕ್ಸ್ ನೆರವಿನಿಂದ ಬರೋಬ್ಬರಿ 81 ರನ್​ಗಳಿಸಿದರೂ ಮುಂಬೈ ತಂಡ ಗೆಲ್ಲಲೂ ಸಾಧ್ಯವಾಗಲಿಲ್ಲ.
Published by:Vasudeva M
First published: