news18-kannada Updated:November 10, 2020, 6:01 PM IST
Hardik Pandya
ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ 13 ಪಂದ್ಯಗಳಲ್ಲಿ ಕಣಕ್ಕಿಳಿದರೂ ಒಂದೇ ಒಂದು ಓವರ್ ಬೌಲಿಂಗ್ ಮಾಡಿಲ್ಲ. ಇದಕ್ಕೇನು ಕಾರಣ, ಉತ್ತಮವಾಗಿಯೇ ಬೌಲಿಂಗ್ ಮಾಡುವ ಪಾಂಡ್ಯರನ್ನು ನಾಯಕ ರೋಹಿತ್ ಶರ್ಮಾ ಯಾಕೆ ಬಳಸಿಕೊಳ್ಳುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಐಪಿಎಲ್ ಆರಂಭದಿಂದಲೂ ಕೇಳಿ ಬರುತ್ತಿವೆ. ಇದೀಗ ಹಾರ್ದಿಕ್ಗೆ ಬೌಲಿಂಗ್ ನೀಡದಿರುವ ಕಾರಣವನ್ನು ಕೊನೆಗೂ ಮುಂಬೈ ಇಂಡಿಯನ್ಸ್ ನಾಯಕ ಬಹಿರಂಗಪಡಿಸಿದ್ದಾರೆ.
ಆಲ್ರೌಂಡರ್ ಆಗಿದ್ದರೂ, ಈ ಬಾರಿ ನಾವು ಹಾರ್ದಿಕ್ ಪಾಂಡ್ಯರನ್ನು ಕೇವಲ ಬ್ಯಾಟ್ಸ್ಮನ್ ಆಗಿ ಬಳಸಿಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಕಾರಣ ಫಿಟ್ನೆಸ್ ಸಮಸ್ಯೆ ತಲೆದೂರಬಹುದೆಂಬ ಭಯ. ಏಕೆಂದರೆ ಪಾಂಡ್ಯ ಕೆಲವು ತಿಂಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಬಳಿಕ ಅವರು ಬೌಲಿಂಗ್ನಲ್ಲಿ ಕೆಲ ಅಸ್ವಸ್ಥತೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆತನನ್ನು ಬ್ಯಾಟ್ಸ್ಮನ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಪಾಂಡ್ಯ ಬ್ಯಾಟಿಂಗ್ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಅನೇಕ ಬಾರಿ ಕಠಿಣ ಸಂದರ್ಭಗಳಲ್ಲಿ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದಾರೆ. ಬ್ಯಾಟಿಂಗ್ನಲ್ಲಿ ಮಿಂಚಿನ ಪ್ರದರ್ಶನ ತೋರಿದರೂ, ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದಾಗ್ಯೂ ನಾನು ಕೂಡ ಆತ ಮತ್ತೆ ಬೌಲಿಂಗ್ ಮಾಡುವುದನ್ನು ನೋಡಲು ಉತ್ಸುಕನಾಗಿದ್ದೇನೆ. ಆ ಅವಕಾಶ ಶೀಘ್ರದಲ್ಲೇ ಈಡೇರಲಿದೆ ಎಂದು ಭಾವಿಸುತ್ತೇನೆ ಎಂದು ರೋಹಿತ್ ತಿಳಿಸಿದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by:
zahir
First published:
November 10, 2020, 5:59 PM IST