IPL 2020: ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್​: ಡೆಲ್ಲಿ ಕ್ಯಾಪಿಟಲ್ಸ್ ಕೋಚ್

2013 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರೋಹಿತ್ ಶರ್ಮಾ ಏಳು ಸೀಸನ್​ಗಳಲ್ಲಿ  ನಾಲ್ಕು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಮುಂಬೈ ಟೀಮ್​ ಐಪಿಎಲ್​ನ ಅತ್ಯಂತ ಯಶಸ್ವಿ ಹಾಗೂ ಬಲಿಷ್ಠ ತಂಡಗಳಲ್ಲಿ ಒಂದಾಗುವಂತೆ ಮಾಡುವಲ್ಲಿ ಹಿಟ್​ಮ್ಯಾನ್ ಪ್ರಮುಖ ಪಾತ್ರವಹಿಸಿದ್ದಾರೆ.

Rohit Sharma-Ricky Ponting

Rohit Sharma-Ricky Ponting

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಸೀಸನ್ 13ರ ಮೊದಲ ಪಂದ್ಯವನ್ನಾಡಲು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಸಕಲ ಸಿದ್ದತೆಯಲ್ಲಿದೆ. ಇತ್ತ ಇತರೆ ತಂಡಗಳೂ ಕೂಡ ಜಯದೊಂದಿಗೆ ಟೂರ್ನಿಯನ್ನು ಆರಂಭಿಸಲು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಈ ಬಾರಿಯ ಐಪಿಎಲ್​ನ ಅಪಾಯಕಾರಿ ಬ್ಯಾಟ್ಸ್​ಮನ್ ಯಾರೆಂಬುದನ್ನು ತಿಳಿಸಿದ್ದಾರೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಬ್ಯಾಟ್ಸಮನ್ ಎಂದಿದ್ದಾರೆ.  ಚಿಟ್​ ಚಾಟ್​​ವೊಂದರಲ್ಲಿ ಮಾತನಾಡಿದ ರಿಕಿ, ಯುಎಇನಲ್ಲಿ ನಡೆಯಲಿರುವ ಐಪಿಎಲ್​ನಲ್ಲಿ ಮುಂಬೈ ತಂಡದ ಹಿಟ್​ಮ್ಯಾನ್ ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ.

  ರೋಹಿತ್ ಶರ್ಮಾ ವಿಶ್ವದ ಅತ್ಯುತ್ತಮ ಟಿ 20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅದು ಅಂತರರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಐಪಿಎಲ್ ಆಗಿರಲಿ. ಅವರು ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಎಂದು ರಿಕಿ ಪಾಂಟಿಂಗ್ ತಿಳಿಸಿದರು.

  2013 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರೋಹಿತ್ ಶರ್ಮಾ ಏಳು ಸೀಸನ್​ಗಳಲ್ಲಿ  ನಾಲ್ಕು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಮುಂಬೈ ಟೀಮ್​ ಐಪಿಎಲ್​ನ ಅತ್ಯಂತ ಯಶಸ್ವಿ ಹಾಗೂ ಬಲಿಷ್ಠ ತಂಡಗಳಲ್ಲಿ ಒಂದಾಗುವಂತೆ ಮಾಡುವಲ್ಲಿ ಹಿಟ್​ಮ್ಯಾನ್ ಪ್ರಮುಖ ಪಾತ್ರವಹಿಸಿದ್ದಾರೆ.

  ಪ್ರಸ್ತುತ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅದನ್ನು ಮೀರಿ ಮುನ್ನುಗ್ಗುವುದು ತುಂಬಾ ಕಷ್ಟ. ಹೀಗಾಗಿ ಹಿಟ್​ಮ್ಯಾನ್ ಈ ಬಾರಿ ಕೂಡ ಮಿಂಚಲಿದ್ದಾರೆ ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

  ಇದಕ್ಕೂ ಮೊದಲು ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್‌ ತಂಡ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್​ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ, ತಂಡವನ್ನು ಪ್ಲೇಆಫ್​ವರೆಗೂ ತಲುಪಿಸಿದ್ದರು. ಇದೀಗ ತನ್ನ ಹಳೆಯ ತಂಡದ ತಂತ್ರಗಾರಿಕೆ ಹಾಗೂ ರೋಹಿತ್ ಶರ್ಮಾ ಅವರ ಕೌಶಲ್ಯತೆ ಬಗ್ಗೆ ಸಂಪೂರ್ಣ ಅರಿವಿರುವ ರಿಕಿ ಪಾಂಟಿಂಗ್ ಅವರ ಈ ಹೇಳಿಕೆಯು ಉಳಿದ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದಂತಾಗಿದೆ.

  ಇದೇ ಸೆ.19 ರಂದು ಅಬುಧಾಬಿಯ ಕ್ರಿಕೆಟ್​ ಮೈದಾನದಲ್ಲಿ ಐಪಿಎಲ್-13ಗೆ ಚಾಲನೆ ದೊರೆಯಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕಳೆದ ಸೀಸನ್​ನ ರನ್ನರ್​ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೆಣಸಲಿದೆ.

  ಉಭಯ ತಂಡಗಳು ಇಂತಿವೆ
  ಮುಂಬೈ ಇಂಡಿಯನ್ಸ್:
  ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್, ಶೆರ್ಫೇನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ಅನ್ಮೊಲ್ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಧವಲ್ ಕುಲಕರ್ಣಿ, ಮಿಚೆಲ್ ಮೆಕ್ಲೆನಾಗನ್, ರಾಹುಲ್ ಚಹರ್, ಪ್ರಿನ್ಸ್ ಟ್ರೆಂಟ್ ಬಲ್ವಂತ್ ರೈ ಸಿಂಗ್, ದಿಗ್ವಿಜಯ್ ದೇಶ್ಮುಖ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೃನಾಲ್ ಪಾಂಡ್ಯ, ಅನುಕುಲ್ ರಾಯ್, ನಾಥನ್ ಕೌಲ್ಟರ್ ನೈಲ್, ಇಶಾನ್ ಕಿಶನ್, ಆದಿತ್ಯ ತಾರೆ, ಜೇಮ್ಸ್ ಪ್ಯಾಟಿನ್ಸನ್, ಜಸ್​ಪ್ರೀತ್ ಬುಮ್ರಾ

  ಚೆನ್ನೈ ಸೂಪರ್ ಕಿಂಗ್ಸ್:
  ಎಂ.ಎಸ್.ಧೋನಿ (ನಾಯಕ - ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಜೋಶ್ ಹ್ಯಾಜಲ್‌ವುಡ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಲುಂಗಿ ಎನ್‌ಗಿಡಿ, ಸ್ಯಾಮ್ ಕರ್ರನ್ , ಶೇನ್ ವ್ಯಾಟ್ಸನ್, ಮೋನು ಕುಮಾರ್, ಸಾಯಿ ಕಿಶೋರ್,  ರುತುರಾಜ್ ಗಾಯಕವಾಡ್, ಕೆ.ಎಂ.ಆಸಿಫ್, ರವೀಂದ್ರ ಜಡೇಜಾ, ಮುರಳಿ ವಿಜಯ್
  Published by:zahir
  First published: